ಮಂಡ್ಯದಲ್ಲಿ ಮುಗಿಯುತ್ತಿಲ್ಲ ರಂಪಾಟ:ಈಗ ಮತಯಂತ್ರದಲ್ಲಿ ಹೆಸರುಗಳ ಗೊಂದಲ
ಹೌದು,ಮಂಡ್ಯದಲ್ಲಿ ವಿವಾದಗಳು ಹಾಗೂ ಗೊಂದಲಗಳು ಮುಗಿಯುವಂತೆ ಕಾಣುತ್ತಿಲ್ಲ.
ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರದಲ್ಲಿ ಲೋಪ ಇತ್ತು.ಆದರೆ ಚುನಾವಣಾ ಅಧಿಕಾರಿಗಳು ಆಗಿರುವ ಅಲ್ಲಿನ ಜಿಲ್ಲಾಧಿಕಾರಿ ನಾಮಪತ್ರ ಸಲ್ಲುಸುವ ಅವಧಿ ಮುಗಿದ ಬಳಿಕ ಮತ್ತೆ ಅದನ್ನು ಸರಿಪಡಿಸಿದ್ದಾರೆ ಎಂಬ ದೂರುಗಳು ಕೇಳಿಬಂದವು.ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸುಮಲತಾ ಅವರಿಗೆ ನೋಟಿಸ್ ಜಾರಿ ಮಾಡಿ ಕೇವಲ ಒಂದೇ ದಿನದಲ್ಲಿ ಉತ್ತರ ನೀಡಲು ಕೇಳಿದ್ದು ಸಹ ಚರ್ಚೆಗೆ ಕಾರಣವಾಗಿದೆ.
ಇದೀಗ ಮಾತಯಂತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಮೊದಲ ಹೆಸರನ್ನಾಗಿಸಲಾಗಿದ್ದು ಇದು ಕೂಡಾ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿ ಪುತ್ರನ ಪರ ಕೆಲಸ ಮಾಡುತ್ತಿದ್ದರೇನೋ ಎಂಬ ಸಂಶಯವನ್ನು ಸುಮಲತಾ ಅಭಿಮಾನಿಗಳಲ್ಲಿ ಮೂಡಿಸಿದೆ.ಏಕೆಂದರೆ ನಿಯಮದ ಪ್ರಕಾರ ಮಾತಯಂತ್ರದಲ್ಲಿ ಮೊದಲು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಹೆಸರನ್ನು ಮೊದಲು ಆದ್ಯತೆಯ ಮೇಲೆ ನಮೂದಿಸಬೇಕು.ಆದರೆ ಮಂಡ್ಯದಲ್ಲಿ ಜೆಡಿಎಸ್ ಗಿಂತಲು ದೊಡ್ಡ ಹಾಗೂ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಇದ್ದರೂ ಸಹ ಅವರ ಹೆಸರು 2 ನೆಯದಾಗಿದೆ.
ಸುಮಲತಾ ಅವರ ಹೆಸರು ಕೆಳಗಿನಿಂದ 3 ನೆಯದಾಗಿದ್ದು ಇಲ್ಲೂ ಸಹ ಕುತಂತ್ರದಿಂದ ಜಿಲ್ಲಾಧಿಕಾರಿ ವರ್ತಿಸಿದ್ದಾರೆ ಎಂದು ಅಂಬರೀಷ್ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೂ ಸಾಲದು ಎಂಬಂತೆ ಸುಮಲತಾ ಅವರ ಹೆಸರಿನ ಮೇಲೆ ಇತರೆ ಇಬ್ಬರು ಆದೇ ಹೆಸರಿನ ಮಹಿಳೆಯರ ಹಾಗೂ ಕೆಳಗೆ ಮತ್ತೊಂದು ಅದೇ ಹೆಸರಿನ ಮಹಿಳೆಯೊಬ್ಬರ ಹೆಸರನ್ನು ಮತಯಂತ್ರದಲ್ಲಿ ನಮೂಡಿಸಿರುವುದು ಇನ್ನಷ್ಟು ರೊಚ್ಚಿಗೇಲಿಸಿದೆ.
ಮತ ಯಂತ್ರದಲ್ಲಿ ಅಭ್ಯರ್ಥಿ ಹೆಸರಿನ ಜೊತೆ ಭಾವಚಿತ್ರ ಸಹ ಇರುತ್ತದೆ ಎಂಬ ಸಮಾಧಾನ ಸುಮಲತಾ ಅಭಿಮಾನಿಗಳದ್ದು.ಆದ್ರೂ ಹಾಲಿ ಮುಖ್ಯಮಂತ್ರಿ ಅಧಿಕಾರ ಬಳಸಿಕೊಂಡು ಮಂಡ್ಯ ದಲ್ಲಿ ತಮ್ಮ ಪುತ್ರನ ಪರ ಹೇಗೆ ಕೆಲಸ ಮಾಡುತ್ತಿದ್ದಾರೆ ನೋಡಿ ಎಂಬುದು ಸುಮಲತಾ ಅಂಬರೀಷ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.