ಭೂಮಿಗೆ ಬಂದಿತ್ತಂತೆ ಹಾರುವ ತಟ್ಟೆ: ಅಮೇರಿಕಾ ರಕ್ಷಣಾ ಇಲಾಖೆಯಿಂದಲೇ ಇದರ ಮೂರು ವೀಡಿಯೋಗಳ ಬಿಡುಗಡೆ
ವಾಷಿಂಗ್ಟನ್, ಏ.28- ಅಪರಿಮಿತ ವೇಗ ಮತ್ತು ಮಾನವತೀತ ಶಕ್ತಿಯ ಅಪರಿಚಿತ ಹಾರುವ ವಸ್ತುಗಳು (ಯುಎನ್ ಓ ಅಥವಾ ಫ್ಲೈಯಿಂಗ್ ಸಾಸರ್ ಗಳು ಅಥವಾ ಹಾರುವ ತಟ್ಟೆಗಳು) ಮತ್ತೆ ಬಾನಂಗಳದಲ್ಲಿ ಗೋಚರಿಸಿದ್ದು, ಇದು ಅಚ್ಚರಿಯ ಜೊತೆ ಆತಂಕಕ್ಕೂ ಕಾರಣವಾಗಿದೆ.
ಅನ್ಯಗ್ರಹ ಜೀವಿಗಳು ಇರಬಹುದು ಎನ್ನಲಾಗುತ್ತಿರುವ ಅಪಾರ ಶಕ್ತಿಯ ಯುಎನ್ ಓಗಳು ಅನೇಕಾನೇಕ ವರ್ಷಗಳಿಂದಲೂ ಅಮೇರಿಕ ಸೇರಿದಂತೆ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಿಗೆ ದೊಡ್ಡ ಸವಾಲಾಗಿದೆ. ಹಾರುವ ತಟ್ಟೆಗಳ ರಹಸ್ಯವನ್ನು ನಿಖರವಾಗಿ ಭೇದಿಸಲು ಇಂದಿಗೂ ಕೂಡ ಮಹತ್ವದ ಅಧ್ಯಯನಗಳು ಮತ್ತು ಸಂಶೋಧನೆಗಳು ಮುಂದುವರೆದಿದೆ.
ಈ ಮಧ್ಯೆ ಅಮೇರಿಕಾ ರಕ್ಷಣಾ ಇಲಾಖೆ -ಪೆಂಟಗನ್ ಅನ್ ಐಡೆಂಟಿ ಫೈಯ್ಢ್ ಫ್ಲೈಯಿಂಗ್ ಅಬ್ಜೆಕ್ಟ್ ಗಳು ಗೋಚರಿಸಿದ ಮೂರು ವೀಡಿಯೋಗಳನ್ನು ಬಿಡುಗಡೆ ಮಾಡಿದೆ.
ಅಮೆರಿಕಾ ನೌಕಾಪಡೆಯ ಹಡಗುಗಳು ಸಮುದ್ರದಲ್ಲಿ ಚಲಿಸುತ್ತಿದ್ದಾಗ ಮೂರು ವಿಭಿನ್ನ ಕಾಲಘಟ್ಟಗಳಲ್ಲಿ ಹಾರುವ ತಟ್ಟೆಗಳು ಅತ್ಯಂತ ವೇಗವಾಗಿ ಗಗನದಲ್ಲಿ ಹಾರಿ ಹೋದ ದೃಶ್ಯಗಳನ್ನು ನೇವಿ ಪೈಲಟ್ ಗಳು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಅವುಗಳು ಕಂಡು ಬಂದ ಕ್ಷಣದಲ್ಲಿ ಆದ ಅನುಭವಗಳನ್ನು ಸಹ ತಿಳಿಸಿದ್ದಾರೆ. ಈ ಮೂರು ವೀಡಿಯೋಗಳನ್ನು ಪೆಂಟಗನ್ ನಿನ್ನೆ ಬಿಡುಗಡೆ ಮಾಡಿದ್ದು ಯುಎನ್ ಓಗಳ ಬಗ್ಗೆ ಮತ್ತಷ್ಟು ಅಧ್ಯಯನ ಮತ್ತು ಸಂಶೋಧನೆಗಳಿಗೆ ನೆರವಾಗಲಿದೆ. ಅಮೇರಿಕಾ ಸೇರಿದಂತೆ ಇತರೆ ದೇಶಗಳಲ್ಲಿ ಆಗಾಗ ಗೋಚರಿಸಿ ಭಯಾಶ್ಚರ್ಯಗಳಿಗೆ ಕಾರಣವಾಗಿರುವ ಹಾರುವ ತಟ್ಟೆಗಳು ಆಗಾಗ ಭೂಮಿಗೆ ತೀರಾ ಸನಿಹಕ್ಕೆ ಬಂದಿರುವುದನ್ನು ಕ್ಲೋಸ್ ಎನ್ ಕೌಂಟರ್ ಎಂದು ಕರೆಯಲಾಗುತ್ತದೆ.
ಈ ಹಾರುವ ತಟ್ಟೆಗಳ ರಹಸ್ಯ ಭೇದಿಸಲು ಅಮೆರಿಕಾದ ಅಗಾಧ ವೇಗದ ಫೈಟ್ ಜೆಟ್ ವಿಮಾನಗಳು ಅವುಗಳನ್ನು ಬೆನ್ನಟ್ಟಿ ಅಪರಿಮಿತ ವೇಗೋತ್ಕರ್ಷಕ್ಕೆ ಸಾಟಿಯಾಗದೆ ನಿರಾಶೆಯಿಂದ ಹಿಂದಿರುಗಿವೆ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಇಂಥ ಫ್ಲೈಯಿಂಗ್ ಸಾಸರ್ ಗಳಲ್ಲಿ ಅನ್ಯಗ್ರಹ ಜೀವಿಗಳು ಇರುತ್ತಾರೆ.
ಇವರ ಶಕ್ತಿ ಸಾಮರ್ಥ್ಯ ಊಹೆಗೂ ನಿಲುಕದ್ದು, ಇವರನ್ನು ಮಣಿಸಲು ಯಾವುದೇ ದೇಶದ ಪ್ರಬಲ ಮಿಲಿಟರಿಯಿಂದಲೂ ಸಾಧ್ಯವಿಲ್ಲ ಎಂಬ ವಾದಗಳೂ ಸಹ ಈಗಲೂ ಚರ್ಚೆಗೆ ಗ್ರಾಸವಾಗುತ್ತಲೇ ಇದೆ.
ಕೊರೊನಾ ಚಿಕಿತ್ಸೆಗೆ ವಿಶ್ವದ ಬೃಹತ್ ನೌಕಾ ಆಸ್ಪತ್ರೆ ಕೊರೊನಾ ದಾಳಿಯಿಂದ ಅಪಾರ ಸಾವು – ನೋವಿನಿಂದ ಕಂಗೆಟ್ಟಿರುವ ಅಮೆರಿಕಾ ಈ ವೈರಾಣು ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಸಾಂಕ್ರಾಮಿಕ ರೋಗದ ಶಂಕಿತರು ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ತನ್ನ ಯುದ್ಧ ಹಡಗುಗಳನ್ನೇ ನೌಕಾ ಆಸ್ಪತ್ರೆಗಳಾಗಿ ಪರಿವರ್ತಿಸಿದೆ.
ಈಗಾಗಲೇ ಯುಎನ್ ಯುಎಸ್ ಕಂಫರ್ಟ್ ಮತ್ತು ಮರ್ಸಿ ಎಂಬ ನೇವಿ ಶಿಪ್ ಗಳು ಅಮೆರಿಕಾದ ಕರಾವಳಿ ಪ್ರದೇಶಗಳಲ್ಲಿ ಕಾರ್ಯಾರಂಭ ಮಾಡಿದೆ. ಇದು 1,000 ಹಾಸಿಗೆಗಳ ಸಾಮರ್ಥ್ಯದ ವಿಶ್ವದ ಬೃಹತ್ ನೌಕಾ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೈಟೆಕ್ ಆಸ್ಪತ್ರೆ ಗಳಲ್ಲಿರುವ ಸಕಲ ಸೌಲಭ್ಯಗಳೂ ಇಲ್ಲುಂಟು.