ಭಿಕ್ಷುಕನ ಅಂತ್ಯಕ್ರಿಯೆಯಲ್ಲಿಸಾವಿರಾರು ಜನರು ಭಾಗಿ.. ಕಾರಣ ಗೊತ್ತೇ..?
ವಿಜಯನಗರ:ವಿಜಯನಗರ ಜಿಲ್ಲೆಯ ಹಡಗಲಿ ಪಟ್ಟಣದ ಬಿಕ್ಷುಕ ಹುಚ್ಚಬಸ್ಯಾನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗುವಮೂಲಕ ಎಲ್ಲರಲ್ಲೂ ಬೆರಗು ಮೂಡಿಸಿದ್ದಾರೆ ಮತ್ತು ಮಾನವೀಯತೆ ಮೆರೆದಿದ್ದಾರೆ.
ಹುಚ್ಚ ಬಸ್ಯಾ ಹಲವು ವರ್ಷಗಳಿಂದ ಹಡಗಲಿ ಪಟ್ಟಣದಲ್ಲಿಯೇ ವಾಸವಾಗಿದ್ದಾನೆ. ಹುಚ್ಚ ಬಸ್ಯಾ ಕೇವಲ ಒಬ್ಬರಿಂದ ಒಂದು ರೂಪಾಯಿ ಮಾತ್ರ ಪಡೆದುಕೊಳ್ಳುತ್ತಿದ್ದನು. ಒಂದು ವೇಳೆ ಹೆಚ್ಚು ಹಣ ನೀಡಿದರೆ ಚಿಲ್ಲರೆ ವಾಪಸ್ ಕೊಡುತ್ತಿದ್ದನು. ಹಾಗಾಗಿ ಹಡಗಲಿಯಲ್ಲಿ ಹುಚ್ಚ ಬಸ್ಯಾ ಅಂದ್ರೆ ಎಲ್ಲರಿಗೂ ಚಿರಪರಿಚಿತ.
ಕೆಲ ದಿನಗಳ ಹಿಂದೆ ಹುಚ್ಚ ಬಸ್ಯಾ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದನು. ಸಾರ್ವಜನಿಕರು ಆತನನ್ನು ಆಸ್ಪತ್ರೆಗೂ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಹುಚ್ಚ ಬಸ್ಯಾ ಸಾವನ್ನಪ್ಪಿದನು. ಹುಚ್ಚ ಬಸ್ಯಾ ನ ಸಾವಿನ ಸುದ್ಧಿಯಿಂದಾಗಿ ಹಡಗಲಿ ಪಟ್ಟಣದಲ್ಲಿ ಸೂತಕ ಆವರಿಸಿತ್ತು.
ಬಿಕ್ಷುಕ ಬಸ್ಯಾನ ಶವವನ್ನು ವಾದ್ಯ ಮೇಳದೊಂದಿಗೆ ನಗರದ ಹೃದಯ ಭಾಗದ ಮೂಲಕವೇ ಕರೆದುಕೊಂಡು ಹೋಗಲಾಗುತ್ತಿತ್ತು. ಪ್ರತಿದಿನ ನಗರದಲ್ಲಿ ಕಾಣಿಸುತ್ತಿದ್ದ ಬಸ್ಯಾನ ಅಂತಿಮ ಯಾತ್ರೆಯಲ್ಲಿ ಪಟ್ಟಣದ ಬಹುತೇಕ ಜನರು ಪಾಲ್ಗೊಂಡಿದ್ದರು.
ಮೆರವಣಿಗೆ ಅಂತ್ಯಕ್ರಿಯೆ ಯಾವ ಗಣ್ಯ ವ್ಯಕ್ತಿಗಿಂತ ಕಡಿಮೆ ಆಗಿರಲಿಲ್ಲ. ಸಧ್ಯ ಬಸ್ಯಾನ ಮೆರವಣಿಗೆ ಅಂತ್ಯಕ್ರಿಯೆ ಫೋಟೋಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದೆ. ಅನಾಥನಾದ ಬಸ್ಯಾನ ಅಂತ್ಯಕ್ರಿಯೆ ಯಲ್ಲಿ ಭಾಗಿಯಾಗಿದ್ದ ಜನರನ್ನು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಬಸ್ಯಾ ಮೂಲತಃ ಎಲ್ಲಿಯವನು ಎಂದು ತಿಳಿದು ಬಂದಿಲ್ಲ. ಬಸ್ಯಾನಿಗೆ ಒಂದು ರೂಪಾಯಿ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಹಡಗಲಿ ಪಟ್ಟಣದಲ್ಲಿದೆ.ಆತ ಹಣ ಕೇಳದಿದ್ದರೂ ಜನರೇ ಬಸ್ಯಾನ ಬಳಿ ತೆರಳಿಒಂದು ರೂಪಾಯಿ ನೀಡುತ್ತಿದ್ದರು.ಶುಭ ಕಾರ್ಯಗಳಿಗೆ ತೆರಳುವಾಗ ಮಾರ್ಗ ಮಧ್ಯೆ ಬಸ್ಯಾ ಕಾಣಿಸಿಕೊಂಡರೆ ಜನರು ಒಂದು ರೂಪಾಯಿ ನೀಡುವುದನ್ನು ಮರಡಯುತ್ತಿರಲಿಲ್ಲ.