ಭಾರತ ಸೇನಾ ತಾಕತ್ತು ವಿಶ್ವಕ್ಕೆ ತೋರಿಸಬೇಕು

ಭಾರತ ದೇಶ ವಿಶ್ವದಲ್ಲಿ ಸೇನಾ ಶಕ್ತಿಯಲ್ಲಿ ಟಾಪ್ 5 ನೇ ಸ್ಥಾನಮಾನ ಹೊಂದಿದೆ. ನೆರೆಯ ಶತ್ರು ದೇಶಗಳಿಗೆ ಭಯ ಮತ್ತು ದುಸ್ವಪ್ನಕಾರಿಯಾಗಿ ತನ್ನ ಗಡಿ ಬೇಲೆ ರಕ್ಷಿಸಿಕೊಂಡಿದೆ. ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್, ಇಸ್ರೇಲ್ ನಂತಹ ದೇಶಗಳಿಂದ ಸುರಕ್ಷಿತ ಮತ್ತು ನಿಕರ ಗುರಿ ತಲುಪುವ ಸೇನಾ ಶಸ್ತ್ರಸ್ತ್ರಾ ಖರೀದಿಸಿ. ಭಾರತ ದೇಶ ಮೂರು ಪಡೆಗಳನ್ನು ಶಕ್ತಿಗೊಳಿಸಿದೆ. ಅಂತಹ ಮಹಾ ಸೇನಾ ಅಸ್ತ್ರ ಮತ್ತು ವಿಐಪಿ ಹೆಲಿಕಾಪ್ಟರ್ ನಲ್ಲಿ ರಷ್ಯಾದ ಅತ್ಯಾಧುನಿಕ ಎಂಐ17ವಿ5 ಪ್ರಮುಖವಾಗಿದೆ. ಪ್ರಧಾನ ಮಂತ್ರಿ, ರಾಷ್ಟ್ರಪತಿ ದೇಶದ ಘನ ಗಣ್ಯ ವ್ಯಕ್ತಿಗಳು, ಸೇನಾ ಅಧಿಕಾರಿಗಳು ಮತ್ತು ಮುಖ್ಯಸ್ಥರಿಗೆ ಪ್ರಯಾಣಿಸಲು ಈ ಹೆಲಿಕಾಪ್ಟರ್ ಅತ್ಯಂತ ಮಹತ್ವದಾಗಿದೆ. ಈ ಹೆಲಿಕಾಪ್ಟರಗಳನ್ನು ವಿಶ್ವದ ಅನೇಕ ದೇಶಗಳು ಬಳಸುತ್ತಿವೆ. ಇವು ಕ್ಷಿಪಣಿ ನಿರೋಧಕ ಮತ್ತು ಬಹು ಇಂಜಿನ್ ಹೊಂದಿದ ಹೆಲಿಕಾಪ್ಟರ್ ಗಳಾಗಿವೆ. ಹವಾಮಾನ ವೈಪರ್ಯತ್ಯದಲ್ಲಿ, ಕ್ಲಿಷ್ಟ ಪರಿಸ್ಥಿತಿಯಲ್ಲಿ ನಿಕರ ಗುರಿ ಮುಟ್ಟುವಂತಹದ್ದಾಗಿದೆ. ಆದರೆ ಇಂತಹ ಅತ್ಯಾಧುನಿಕ ಹೆಲಿಕ್ಯಾಪ್ಟರ್ ನಲ್ಲಿ ನಮ್ಮ ಭಾರತೀಯ ಸೇನೆಯ ಹೆಮ್ಮೆಯ ವೀರ ಸುಪುತ್ರ, ಸೇನಾ ತ್ರಿಪಡೆ ಮುಖ್ಯಸ್ಥ, ಭಾರತ ಸೇನಾಪಡೆ ಮುಖ್ಯಾಧಿಕಾರಿ ಬಿಪಿನ್ ರಾವತ್ ಮತ್ತು ಪತ್ನಿ ಹಾಗೂ ವಿವಿಧ ಸರಣಿ ಅಧಿಕಾರಿಗಳು ಹೆಲಿಕಾಪ್ಟರ್ ನಲ್ಲಿ ಪತನ ಹೊಂದಿ ಸಾವಿಗೆ ಶರಣಾಗಿದ್ದು ವಿಪರ್ಯಾಸವೇ ಸರಿ. ಆದ್ದರಿಂದ ಈ ಘಟನೆ ವಿಶ್ವದಲ್ಲಿ ಭಾರತದ ಸೇನಾ ತಾಕತ್ತು ಪ್ರಶ್ನಿಸುವಂತಿದೆ. ಆದ್ದರಿಂದ ಭಾರತ ತನ್ನ ಸೇನಾ ಶಕ್ತಿಯನ್ನು ವಿಶ್ವದ ಮುಂದೆ ಅನಾವರಣಗೊಳಿಸಬೇಕು. ಉನ್ನತ ತನಿಖೆ ಅತಿ ಶೀರ್ಘವಾಗಿ ನಡಿಸಿ ವಿಫಲತೆ ಪತ್ತೆ ಹಚ್ಚಿ ಫಲಿತಾಂಶ ದೇಶಕ್ಕೆ ನೀಡಬೇಕು.

-: ವಿಫಲತೆಗೆ ಕಾರಣವೇನು :-

             ಭಾರತದ ಸರ್ವೋಚ್ಚ ಸೇನಾ ಮುಖ್ಯಸ್ಥ ಮತ್ತು 14 ಸೇನಾಧಿಕಾರಿ, ಕರ್ನಲ್, ಕಮಾಂಡ್ ಸಾವಿಗೆ ದುರಂತ ಸಂಭವಿಸಲು ಕಾರಣವೇನು? ಅನ್ನುವ ಪ್ರಶ್ನೆ ಮೂಡುತ್ತಿದೆ. ಬಿಪಿನ್ ರಾವತ್ 31 ನೇ ಡಿಸೆಂಬರ್ 2021 ರಂದು ನಿವೃತ್ತಿ ಹೊಂದುವರಿದ್ದರು. ಆದರೆ ಸೇನಾ ಮುಖ್ಯಸ್ಥನನ್ನು ಕರದೊಯುವ ಹೆಲಿಕಾಪ್ಟರ್ ಹೆಚ್ಚು ದಕ್ಷತೆ ಮತ್ತು ವೈಮಾನಿಕ ವೈಪರಿತ್ಯ ತಡೆದುಕೊಳ್ಳಬಹುದಾದ ಸಾಮರ್ಥ್ಯವಿದ್ದ ಹೆಲಿಕಾಪ್ಟರಾಗಿದೆ. ಹೇಗೆ ಪತನವಾಯಿತು ಅಂತಾ ಪ್ರಶ್ನೆಯಾಗಿ ಜನರ ಮನದಲ್ಲಿ ಉಳದಿದೆ. ಹಾಗಾದರೆ ಪ್ರಯಾಣಕ್ಕೂ ಮುನ್ನ ಹೆಲಿಕಾಪ್ಟರ್ ತಪಾಸಣೆ ಮತ್ತು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಹೇಗೆ ದುರಂತ ಕಂಡಿತು. ಸೇನಾ ಸಿಬ್ಬಂದಿಗಳು ಸರಿಯಾಗಿ ಹೆಲಿಕಾಪ್ಟರ್ ತಪಾಸಣೆಗೆ  ಒಳಪಡಿಸಲಿಲ್ಲವೇ. ಇಲ್ಲಾ ಸೇನೆಯಲ್ಲಿ ಹೆಲಿಕಾಪ್ಟರ್ ಮೇಲೆ ಅತಿ ಆತ್ಮವಿಶ್ವಾಸವೇ. ಇಲ್ಲಾ ನಿಕರತೆ ಮತ್ತು ಗುರಿ ಮೇಲೆ ಗಮನ ಹರಿಸಲಿಲ್ಲವೆ. ಅತ್ಯಾಧುನಿಕ ಹೆಲಿಕಾಪ್ಟರ್ ನೆಲಕುರಳಿಸುವಷ್ಟು ನಿಸರ್ಗದ ಹವಮಾನ ವೈಪರಿತ್ಯವೇ ಅನಿಸುತ್ತದೆ. ಬ್ಲಾಕ್ ಬಾಕ್ಸ್ ಮುಖಾಂತರ ಅಪಘಾತದ ಸವಿವರ ಕಲೆ ಹಾಕಿ ಈ ದುರ್ಘಟನೆ ಮತ್ತು ವಿಫಲತೆಗೆ ಉತ್ತರ ಹುಡಕಬೇಕು. ಮುಂದೊಮ್ಮೆ  ಈ ರೀತಿ ಘಟನೆ ನಡೆಯದಂತೆ ಗಮನ ಹರಿಸಬೇಕು. ಈ ತನಿಖೆ ಅತಿ ಶೀರ್ಘ ಮುಗಿಯಬೇಕು. ಭಾರತ ವಿಶ್ವಕ್ಕೆ ಸೇನಾ ತಾಕತ್ತು ಸಾರುವಂತಿರಬೇಕು. 

-: ಶತ್ರು ದೇಶಗಳು ಅಣಕಿಸುತ್ತಿವೆ :-

              ಭಾರತದ ಪರಮ ವೈರಿ ದೇಶಗಳು ಚೀನಾ ಮತ್ತು ಪಾಕ್ ಈಗ ಅಪಘನ್ ಕೂಡಾ ಸೇರುತ್ತಿದೆ. ಭಾರತ ದೇಶದಲ್ಲಿ ಏನಾದರು ಅನಾಹುತವಾದರೆ ಶತ್ರು ದೇಶಗಳಿಗೆ ಹುಗ್ಗಿ ಹೋಳಿಗೆ. ಆದ್ದರಿಂದ ದೇಶದ ಶಕ್ತಿಶಾಲಿ ಶಸ್ತ್ರಾಸ್ತ್ರ ಮತ್ತು ವಾಹನಗಳಲ್ಲಿ ಎಂಐ17ವಿ5 ಪ್ರಮುಖವಾದದ್ದು. ಇಂತಹ ಹೆಲಿಕಾಪ್ಟರ್ ನಲ್ಲಿಯೇ ಅಪಘಾತ ಸಂಭವಿಸಿದ್ದು ಶತ್ರು ದೇಶಗಳು ನಮ್ಮ ಸೇನೆಯನ್ನು ಅಣಕಿಸುತ್ತಿವೆ. ಚೀನಾದ ಪತ್ರಿಕೆ ಗ್ಲೋಬಲ್ ಭಾರತ ಸೇನೆ ಹೆಸರಿಗೆ ಶಕ್ತಿಯಾಗಿದೆ ಕಾರ್ಯದಲ್ಲಿ ಪರಿಶ್ರಮದಲ್ಲಿ ಕೊರತೆ ಎದುರಿಸುತ್ತಿದೆ ಅಂತಾ ರಾಗದಲ್ಲಿ ಅಣುಕಿಸಿದ್ದು ಭಾರತೀಯ ಸೇನೆ ಮತ್ತು ಭಾರತೀಯರನ್ನು ಕೆರಳಿಸಿದೆ. 

                  ಈಗಾಗಲೇ ಶತ್ರು ದೇಶಗಳು ಭಾರತವನ್ನು ಆಮೆಗತಿ ಸುತ್ತುವರಿಯುತ್ತಿವೆ. ಇದು ದೇಶಕ್ಕೆ ಗಂಡಾಂತಕಾರಿಯಾಗಿದೆ. ಚೀನಾ ದೇಶ ಶ್ರೀಲಂಕಾದ ಆಯಕಟ್ಟಿನ ಮತ್ತು ಭಾರತ ದೇಶದ ಭದ್ರತೆಗೆ ಆತಂಕಕಾರಿಯಾದ ದ್ವೀಪವಾದ ಹಂಬಂಟೊಟಾ ಎನ್ನುವ ದ್ವೀಪವನ್ನು ಚೀನಾ 99 ವರ್ಷ ಗುತ್ತಿಗೆ ಪಡದಿದೆ ಇದು ಚೀನಾದ ತರಬೇತಿ ಮತ್ತು ಸೇನಾ ನೆಲೆಯಾಗುತ್ತಿದೆ. 

                ಮಾಲ್ಡೀವ್ಸ ಮಾಲೇ ದ್ವೀಪದಲ್ಲಿ ಚೀನಾ 10 ದ್ವೀಪ ಗುತ್ತಿಗೆ ಪಡೆದು ಇಲ್ಲಿ ಸೇನೆ ನಿಯೋಜಿಸುತ್ತಿದೆ. ಇದು ಭಾರತದ ಕರಾವಳಿ ಮತ್ತು ಗಡಿಗೆ ಆತಂಕವಾಗಿದೆ. ಪಾಕಿಸ್ತಾನದ ಗ್ವಾದರ್ ಬಂದರು ಗುತ್ತಿಗೆ ಪಡೆದು ಅಭಿವೃದ್ಧಿ ಪಡಿಸಿ ತನ್ನ ಸೇನಾ ಶಕ್ತಿ ಭಾರತದ ಮೇಲೆ ಪ್ರದರ್ಶನ ಮಾಡಲು ಸಮಯಕ್ಕೆ ಕಾಯುತ್ತಿದ್ದೆ. ಆದ್ದರಿಂದ ಈ ಬೆಳವಣಿಗೆ ದಕ್ಷಿಣ ಭಾರತ, ಅಂಡಮಾನ್, ಹಿಂದೂ ಮಹಾಸಾಗರಕ್ಕೆ ಆತಂಕವಾಗಿದೆ. ಈ ಬೆಳವಣಿಗೆ ದೇಶದ ಸೇನಾ ಶಕ್ತಿ ಪ್ರದರ್ಶನಕ್ಕೆ ಮುಂದಾಗಲು ಅಗತ್ಯವಿದೆ. ವಿಶ್ವ ಆಧುನಿಕ ಶಸ್ತ್ರಾಸ್ತ್ರ ಮತ್ತು ಯುದ್ಧಾಸ್ತ್ರಗಳಿಂದ ಬೆಳೆಯುತ್ತಿದೆ. ರಾಡರ್, ಉಪಗ್ರಹ ಇತ್ಯಾದಿ ಮಾಹಿತಿ ಕಲೆಹಾಕುವ, ಗುರುತಿಸುವ, ಪತ್ತೆಹಚ್ಚುವ, ನಾಶ ಮಾಡುವ ಆಯುಧಗಳಿಗೆ ಕಣ್ಣು ತಪ್ಪಿಸುವ ಶಸ್ತ್ರಾಸ್ತ್ರ ಆಯುಸ್ಕಾರವಾಗಿ ಹೊರ ಬರುತ್ತಿವೆ. ಆದ್ದರಿಂದ ಈ ಹೆಲಿಕಾಪ್ಟರ್ ಪತನದ ಹಿಂದೆ ಶತ್ರು ದೇಶಗಳನ್ನು ಹಗುರವಾಗಿ ಕಾಣುವಂತಿಲ್ಲಾ. ಆದ್ದರಿಂದ ಭಾರತ ಸೇನೆಯ ತ್ರಿಪಡೆ ಮುಖ್ಯಸ್ಥರಾಗಿ ಮನೋಜ್ ಮುಕುಂದ್ ನರವಾಣೆ ಆಯ್ಕೆ ಮಾಡಲಾಗಿದೆ. ಆದ್ದರಿಂದ ಇವರು ದೇಶದ ಸೇನಾ ಶಕ್ತಿ ಶತ್ರುಗಳ ಮುಂದೆ ಪ್ರದರ್ಶಿಸುವ ಅಗತ್ಯವಿದೆ. ಈ ಅಣುಕಿಸುವ ದೇಶಗಳಿಗೆ ಭಾರತ ಸೇನಾ ತಾಕತ್ತು ತೋರಪಡಿಸಬೇಕು.

-: ಒಳಶತ್ರುಗಳ ಮೇಲೆ ಗಮನ :-

                ಹೊರ ಶತ್ರುಗಳಿಗಿಂತ ದೇಶದ ಒಳಶತ್ರುಗಳು ಬಹಳ ಅಪಾಯಕಾರಿ ಆದ್ದರಿಂದ ದೇಶದ ಒಳಶತ್ರುಗಳನ್ನು ಮಟ್ಟಹಾಕಬೇಕಿದೆ. ದೇಶದ ಸೇನಾ ಮುಖ್ಯಸ್ಥ ವೀರ ಮರಣ ಹೊಂದಿದರೆ ಸಂಭ್ರಮಿಸುವ ದೇಶದ್ರೋಹಿಗಳು ದೇಶಕ್ಕೆ ಗಂಡಾಂತಕಾರಿಗಳು ಇವರು ಶತ್ರುದೇಶಗಳಿಗೆ ಮಾಹಿತಿ ರಮಾನೆ ಮತ್ತು ಒಳ ನುಗ್ಗಲು ಅನುವು ಮಾಡುವ ಅಪಾಯಕಾರಿಗಳು ಇವರನ್ನು ಮಟ್ಟಹಾಕುವ ಅತ್ಯಗತ್ಯವಿದೆ.

                   ವಿಶ್ವದ ಎಲ್ಲಾ ದೇಶಗಳಲ್ಲಿ ಹುದ್ದೆಯಗಾಗಿ ಪೈಪೋಟಿ ಸೇವೆಯಲ್ಲಿದೆ. ಗುಂಪುಗಾರಿಕೆ, ಸ್ಪರ್ಧೆ ಸಂಘರ್ಷಕ್ಕೆ ಎಡೆಮಾಡಿದ ನಿದರ್ಶನಗಳಿವೆ. ಆದ್ದರಿಂದ ಎಲ್ಲಾ ಕೋನದಲ್ಲಿ ದೇಶದ ಒಳಶತ್ರುಗಳನ್ನು ಪತ್ತೆ ಹಚ್ಚಬೇಕು. 

                    ಅಮೆರಿಕ ಸೇನೆ ಇರಾನ್ ದೇಶದಲ್ಲಿ ಬಂಡುಕೊರರ ಸಹಾಯದಿಂದ ಇರಾನ್ ಸೇನಾ ಮುಖ್ಯಸ್ಥನನ್ನು ಡ್ರೂನ್ ಮೂಲಕ ಕಾರ ಸ್ಫೋಟಿಸಿ ಹತ್ಯೆ ಮಾಡಿದರು. ಆದರೆ ಬಂಡುಕೂರರ ಸಹಾಯ ಮಾಡದೆ ಹೋಗಿದ್ದರೆ. ಸೇನೆಯ ಹೊಡೆತಕ್ಕೆ ಡ್ರೂನ್ ಛಿದ್ರವಾಗುತಿತ್ತು. ಆದ್ದರಿಂದ ದೇಶದ ಎಲ್ಲಾ ಕೋನದಲ್ಲಿ ತನಿಖೆ ಮಾಡಿದರೆ ಸತ್ಯ ಹೊರಬರಲು ಸಾಧ್ಯ.

                   ಭಾರತ ಸೇನೆಯ ಬಗ್ಗೆ ವಿಶ್ವದಲ್ಲಿ ಘನ ಗೌರವವಿದೆ. ಈ ಘಟನೆ ಸೇನಾ ತಾಕತ್ತಿಗೆ ಪ್ರಶ್ನೆಯಾಗಿದೆ. ಆದ್ದರಿಂದ ನಮ್ಮ ಸೇನೆ ತನಿಖೆ ಶೀರ್ಘದಲ್ಲಿ ಮುಗಿಸಿ ಮಡಿದ 14 ಮಂದಿ ವೀರ ಸೇನಾನಿಗಳಿಗೆ ದೇಶ ಗೌರವದೊಂದಿಗೆ ಸತ್ಯ ತಿಳಿಯಬೇಕು. ವಿಶ್ವಕ್ಕೆ ಸೇನಾ ತಾಕತ್ತು ಪ್ರದರ್ಶಿಸಬೇಕು.

ಲೇಖಕರು :- ಶರೀಫ ಗಂಗಪ್ಪ ಚಿಗಳ್ಳಿ ( ಸಾಹಿತಿ )
ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ/ ಧಾರವಾಡ – 580024

Leave a Reply

Your email address will not be published. Required fields are marked *