ಭಾರತ – ಪಾಕಿಸ್ತಾನ ಸೇನೆಯ ಬಲಾಬಲ
ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಸಂಭವಿಸಿದರೆ ಎಂಬ ಪ್ರಶ್ನೆ ಮೂಡಿದಾಗ ಉಭಯ ರಾಷ್ಟ್ರಗಳ ಸೇನಾ ಬಲಾಬಲ ಹೇಗಿದೆ ಎಂದು ಕುತೂಹಲ ಸಹಜ .
ಮಿಲಿಟರಿ ಬಜೆಟ್
2008 ರ ಬಜೆಟ್ ನಲ್ಲಿ ಭಾರತ ಸರ್ಕಾರ ಸೇನೆಗಾಗಿ 4 ಲಕ್ಷ ಕೋಟಿ ಹಣ ಮೀಸಲಿರಿಸಿದೆ. ಇದು ದೇಶದ ಜಿಡಿಪಿಯ ಶೇ 2.1 ಭಾಗವಾಗಿದೆ. ಭಾರತೀಯ ಸೇನೆ ಒಟ್ಟು 14 ಲಕ್ಷ ಕ್ಷಿಪ್ರ ಪಡೆಯನ್ನು ಹೊಂದಿದೆ ಎಂದು ಐಐ ಎಸ್ಎಸ್ ವರದಿ ಮಾಡಿದೆ.
ಪಾಕಿಸ್ತಾನ ಮಿಲಿಟರಿಗಾಗಿ 1.26 ಲಕ್ಷ ಕೋಟಿ ಮೀಸಲಿರಿಸಿದೆ. ಇದು ಪಾಕಿಸ್ತಾನ ಪಾಕಿಸ್ತಾನದ ಜಿಡಿಪಿಯ ಶೇಕಡ 3.6 ರಷ್ಟು ಭಾಗವಾಗಿದೆ. ಪಾಕ್ ಸೇನೆ 6.5ಲಕ್ಷ ಪಡೆಯನ್ನು ಹೊಂದಿದೆ .
ಕ್ಷಿಪಣಿಗಳು ಮತ್ತು ಅಣು ಬಾಂಬ್ ಗಳು
ಎರಡು ದೇಶಗಳು ಅಣು ಬಾಂಬ್ ಅನ್ನು ಸಿಡಿಸಬಲ್ಲ ಕ್ಷಿಪಣಿಗಳನ್ನು ಹೊಂದಿವೆ. ಭಾರತದ ಬಳಿ ಮೂರು ಸಾವಿರದಿಂದ ಐದು ಸಾವಿರ ಕಿಲೊಮೀಟರ್ ವರೆಗೆ ಸಾಗಬಲ್ಲ ಅಗ್ನಿ ಮೂರು ಕ್ಷಿಪಣಿ ಒಳಗೊಂಡಂತೆ 9 ವಿಧದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಕ್ಷಿಪಣಿಗಳು ಇವೆ.
ಎರಡು ಸಾವಿರ ಕಿಲೋಮೀಟರ್ ಸಾಗಬಲ್ಲ ಸಾಮರ್ಥ್ಯ ಇರುವ ಕ್ಷಿಪಣಿಗಳನ್ನು ಪಾಕಿಸ್ತಾನ ಹೊಂದಿದೆ. ಪಾಕ್ ಬಳಿ ನೂರ ನಲವತ್ತು ರಿಂದ ನೂರ ಐವತ್ತು ಕ್ಷಿಪಣಿ ಗಳಿದ್ದರೆ ಭಾರತದ ಬಳಿ ಅಷ್ಟೇ ಸಂಖ್ಯೆಯ ಕ್ಷಿಪಣಿಗಳು ಇವೆ .
ಸೇನೆಯ ಬಲಾಬಲ
ಭಾರತದ ಬಳಿ ಹನ್ನೆರಡು ಲಕ್ಷ ಬಲಿಷ್ಠ ಸೇನೆ ಇದೆ. ಯುದ್ಧ ಟ್ಯಾಂಕರ್ ಗಳಿವೆ. ಕಾಲಾಳು ಪಡೆಯ ಯುದ್ಧ ವಾಹನಗಳು. ಶಸ್ತ್ರಸಜ್ಜಿತ ಸಿಬ್ಬಂದಿ ಮತ್ತು 9719ಫಿರಂಗಿಗಳು ಇವೆ.
ಪಾಕಿಸ್ತಾನದ ಬಳಿ ಐದು ಲಕ್ಷದ ಅರುವತ್ತು ಸಾವಿರ ಪಡೆ 2496 ಯುದ್ಧ ಟ್ಯಾಂಕರ್,ಶಸ್ತ್ರಸಜ್ಜಿತ ಸೈನಿಕರು ಇದ್ದು ಇದು 4,472 ಫಿರಂಗಿಗಳನ್ನು ಹೊಂದಿದೆ .
ವಾಯುಸೇನಾ ಬಲಾಬಲ
ಭಾರತೀಯ ವಾಯುಪಡೆ 1,27,200 ಸಿಬ್ಬಂದಿ ಮತ್ತು 814 ಯುದ್ಧ ವಿಮಾನಗಳನ್ನು ಹೊಂದಿದೆ.590 ಫೈಟರ್ ಜೆಟ್ಗಳು, 708ಸಾಗಣೆ ವಿಮಾನಗಳು, 15 ದಾಳಿ ನಡೆಸುವ ಹೆಲಿಕಾಪ್ಟರ್ ಗಳು ಹಾಗೂ ಇತರೆ ಉದ್ದೇಶಗಳಿಗಾಗಿ720 ಹೆಲಿಕಾಪ್ಟರ್ಗಳ ವಾಯುಸೇನೆ ಹೊಂದಿದೆ. ರಷ್ಯಾ ನಿರ್ಮಿತ ಮಿಗ್ 24 ಹಾಗೂ ಫ್ರಾನ್ಸ್ ತಂತ್ರಜ್ಞಾನದ ಮಿರಾಜ್ 2000 ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಯ ಪ್ರಬಲ ಅಸ್ತ್ರಗಳು .
ಪಾಕಿಸ್ತಾನದ ವಾಯುಪಡೆಯಲ್ಲಿ 70 ಸಾವಿರ ಸಿಬ್ಬಂದಿ, 425 ಯುದ್ಧ ವಿಮಾನಗಳು, 320 ಫೈಟರ್ ಜೆಟ್ ಗಳು, 49 ದಾಳಿ ಹೆಲಿಕಾಪ್ಟರ್ ಗಳು ಸೇರಿ 375 ಹೆಲಿಕಾಪ್ಟರ್ ಗಳಿವೆ. ಚೀನಾ ನಿರ್ಮಿತ ಎಫ್ 7ಪಿಜಿ, ಮತ್ತು ಅಮೆರಿಕಾದ ಎಫ್. 16 ಯುದ್ಧವಿಮಾನಗಳಿವೆ.
ನೌಕಾಪಡೆ ಬಲ
ಭಾರತೀಯ ನೌಕಾಪಡೆಯು 67.500 ಸಿಬ್ಬಂದಿ ಹೊಂದುವ ಮೂಲಕ ತೀರಾ ಬಲಿಷ್ಠವಾಗಿದೆ. ಯುದ್ಧ ವಿಮಾನ ವಾಹಕ ವಿಕ್ರಮಾದಿತ್ಯ ಪ್ರಬಲ ಅಸ್ತ್ರವಾಗಿದೆ. 16 ಸಭೆ ಮ್ಯಾರಿನ್, 14 ಡೆಸ್ಟ್ರಾ ಯರ್ ಗಳು, 14 ಫ್ರಿಗ್ರೆಟ್ಸ್, 106 ಕರಾವಳಿ ಯುದ್ಧವಾಹಕ ನೌಕೆಗಳು ಮತ್ತು 75 ಯುದ್ಧ ಸಾಮರ್ಥ್ಯ ನೌಕೆಗಳನ್ನು ಇದು ಹೊಂದಿದೆ.
ಪಾಕಿಸ್ತಾನ ಕಡಿಮೆ ಕರಾವಳಿ ಪ್ರದೇಶ ಹೊಂದಿರುವುದರಿಂದ ಸಣ್ಣ ವಾಯುಪಡೆಯನ್ನು ಹೊಂದಿದೆ. 9 ಫ್ರಿಗ್ರೆಟ್ಸ್, 8 ಸಭೆ ಮ್ಯಾರಿನ್, 17 ಪೆಟ್ರೋಲ್ ಮತ್ತು ಕರಾವಳಿ ನೌಕೆಗಳು ಹಾಗು 8 ಯುದ್ಧ ವಿಮಾನಗಳು ಇವೆ.