ಭಾರತೀಯ ನೌಕಾಪಡೆಗೆ ಬರಲಿವೆ; ದಿಗಿಲು ಹುಟ್ಟಿಸುವ ಸೀಹಾಕ್ ಹೆಲಿಕಾಫ್ಟರ್‍ಗಳು

ಶತ್ರುಗಳ ಜಲಾಂತರ್ಗಾಮಿ ನೌಕೆಗಳಿಗೆ ದಿಗಿಲು ಹುಟ್ಟಿಸುವ ಸಾಮರ್ಥ್ಯದ 24 ಸೀಹಾಕ್ ಹೆಲಿಕಾಫ್ಟರ್‍ಗಳು ಶೀಘ್ರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ.

ದಶಕದಿಂದ ಇದ್ದ ಭಾರತದ ಬೇಡಿಕೆಗೆ ಕೊನೆಗೂ ಅಮೇರಿಕ ಒಪ್ಪಿಗೆ ಸೂಚಿಸಿದೆ.

ಎಂ.ಹೆಚ್.-60 ರೋಮಿಯೋ ಸೀಹಾಕ್ ಕಾಫ್ಟರ್‍ಗಳನ್ನು ತುರ್ತಾಗಿ
ಪೂರೈಸುವಂತೆ ಕೇಂದ್ರ ಸರ್ಕಾರವು ಅಮೇರಿಕಕ್ಕೆ ಮನವಿ ಮಾಡಿತ್ತು.
ಅಮೇರಿಕ ಸಂಸತ್ತು ಈ ಖರೀದಿ ಒಪ್ಪಂದಕ್ಕೆ ಮಂಗಳವಾರ ಸಮ್ಮತಿ ನೀಡಿದೆ.

ಇತ್ತೀಚೆಗೆ ನಡೆದಿದ್ದ ಜಿ-20 ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ
ಹಾಗೂ ಅಮೇರಿಕ ಅಧ್ಯಕ್ಷ ಟ್ರಂಪ್ ಈ ಒಪಂದಕ್ಕೆ ಮಂಗಳವಾರ ಸಮ್ಮತಿ ನೀಡಿದ್ದೆ. ಅಂದಾಜು 16.5 ಸಾವಿರ ಕೋಟಿಗೆ(ಯುಎಸ್‍ಡಿ 2.4 ಬಿಲಿಯನ್) ಈ ಹೆಲಿಕಾಫ್ಟರ್‍ಗಳನ್ನು ಖರೀದಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಭಾರತ-ಅಮೇರಿಕದ ನಡುವೆ ರಕ್ಷಣಾ ಖರೀದಿ ವ್ಯವಹಾರ ಹೆಚ್ಚಾಗಿದ್ದು, ಅಮೇರಿಕವು ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳುತ್ತಿದೆ.


`ಸೀಹಾಕ್’ ವಿಶೇಷತೆ ಏನು?

ಕಡಲಭದ್ರತೆಗೆ ಹೇಳಿ ಮಾಡಿಸಿದ ಜಗತ್ತಿನ ಅತ್ಯಾಧುನಿಕ ಹೆಲಿಕಾಫ್ಟರ್ ಎಂದು ಸೀಹಾಕ್ ಪರಿಗಣಿತವಾಗಿದೆ. ಅಮೇರಿಕದ ನೌಕಾಪಡೆಗೆ ಬಲ ತುಂಬಿರುವ ಸೀಹಾಕ್ ಹೆಲಿಕಾಫ್ಟರ್‍ಗಳನ್ನು ವಿಮಾನ ವಾಹಕಗಳು, ಯುದ್ಧ ನೌಕೆಗಳು, ವಿಧ್ವಂಸಕ ನೌಕೆಗಳು ಹಾಗೂ ಕ್ರೂಸರ್‍ಗಳಲ್ಲಿ ಬಳಸಬಹುದು.
ಹಿಂದೂ ಮಹಾಸಾಗರದಲ್ಲಿ ಬೆದರಿಕೆ ಒಡ್ಡುತ್ತಿರುವ ಚೀನಾಕ್ಕೆ ತಿರುಗೇಟು
ನೀಡಲು ಸೀಹಾಕ್ ಹೆಲಿಕಾಫ್ಟರ್ ಅತ್ಯಂತ ಸೂಕ್ತ ಎಂದು ತಜ್ಞರು ಅಭಪ್ರಾಯಪಟ್ಟಿದ್ದಾರೆ. ಇವು ಭಾರತೀಯ ನೌಕಾಪಡೆಗೆ ಅಸೀಮ ಬಲ ತುಂಬಲಿವೆ ಎನ್ನಲಾಗಿದೆ.

ಹತ್ತು ಹಲವು ಸಾಮರ್ಥ್ಯಗಳನ್ನು ಇದು ಹೊಂದಿದೆ. ಜಲಾಂತರ್ಗಾಮಿಗಳ
ಮೇಲೆ ಯುದ್ಧ, ಸರ್ವೇಕ್ಷಣೆ, ಸಂವಹನ, ಶೋಧ ಮತ್ತು ರಕ್ಷಣಾ
ಕಾರ್ಯ, ಸರಕು ಸಾಗಾಟಕ್ಕೆ ಇದು ಹೆಸರುವಾಸಿಯಾಗಿದೆ.

Leave a Reply

Your email address will not be published. Required fields are marked *