ಭಾರತಕ್ಕೆ ಕೊರೋನಾ ಬಂದದ್ದು ನಿಜಾಮುದ್ದೀನ್ ಮಸೀದಿಯಿಂದ..!! ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು ಕರ್ನಾಟಕದ 1500 ಮಂದಿ

ಬೆಂಗಳೂರು.ಏ.01- ದೇಶದಲ್ಲಿ ಕೊರೊನಾ ಎಂಬ ಮಹಾಮಾರಿ ವ್ಯಾಪಿಸಲು ಈವರೆಗೆ ಚೀನಾ ಅಥವಾ ಪರದೇಶದಿಂದ ಹಾರಿ ಬಂದ ಕೆಲವರು ಎಂಬ ಅಂಶ ಕೇಳಿಬರುತ್ತಿತ್ತು. ಆದರೀಗ ಬೇರೆಯದೇ ಆದ ಬೆಚ್ಚಿ ಬೀಳಿಸುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ದೇಶಕ್ಕೆ ಕೊರೋನಾ ಬಂದದ್ದು ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಬಂದ ಭಾರತೀಯ ಜನರಿಂದ ಎಂಬುದೇ ಈ ಸ್ಪೋಟಕ ವಿಷಯ.

ದೇಶದ ಕಟ್ಟಾಜ್ಞೆಯನ್ನು ಮೀರಿ ಈ ಧರ್ಮ ಸಮ್ಮೇಳನವನ್ನು ನಡೆಸಿದ ಮರ್ಕಜ್ ಮಸೀದಿಯ ಮೌಲ್ವಿ ಈಗ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧನೆ ನಡೆದಿದೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿಯೂ ನಡೆದ ಈ ಧರ್ಮ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ 10 ಸಾವಿರದಷ್ಟು ಮಂದಿ ಪಾಲ್ಗೊಂಡಿದ್ದರು ಎಂಬ ಅಂದಾಜಿದೆ. ಅದರಲ್ಲಿ ಕರ್ನಾಟಕದವರೇ 1500 ಮಂದಿ ಎಂಬ ಮಾಹಿತಿ ಈಗ ಧೃಡಪಟ್ಟಿದ್ದು, ಇದು ಕರ್ನಾಟಕವನ್ನು ತಲ್ಲಣಗೊಳಿಸಿದೆ.

ಆರಂಭದಲ್ಲಿ ಕೇವಲ 18 ಮಂದಿ ಮಾತ್ರ ಕರ್ನಾಟಕದವರು ಪಾಲ್ಗೊಂಡಿದ್ದರು ಎಂಬ ಮಾತುಗಳು ಕೇಳಿ ಬಂದವು. ಮತ್ತೆ ಕೆಲ ದಿನಗಳ ಬಳಿಕ ಈ ಸಂಖ್ಯೆ 32 ನಂತರ 200 ಹಾಗೂ ಕಡೆಗೆ ಹೆಚ್ಚೆಂದರೆ 300 ಎಂಬ ಅಂಶ ಸಿಕ್ಕಿತ್ತು. ಆದರೆ ಇದೀಗ ರಾಜ್ಯದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಾವೀದ್ ಅಖ್ತರ್ ಅವರೇ ಹೇಳಿರುವಂತೆ ಕರ್ನಾಟಕದಿಂದ 1500 ರಷ್ಟು ಮಂದಿ ಈ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಈವರೆಗೆ ಹರಸಾಹಸ ಪಟ್ಟು 800 ಮಂದಿಯನ್ನು ಹುಡುಕಲಾಗಿದೆ‌ ಆದರೆ ಇನ್ನೂ 700 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹಗಲಿರುಳು ಶೋಧನೆ ನಡೆದಿದೆ.

ತಮಿಳುನಾಡಿನಲ್ಲಿ ಒಟ್ಟು 324 ಮಂದಿ ಕೊರೋನಾ ಸೋಂಕಿತರು ಗುರುತಿಸಲ್ಪಟ್ಟಿದ್ದು ಇದರಲ್ಲಿ ಶೇ. 80 ರಷ್ಟು ಮಂದಿ ಈ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಬಂದವರೇ ಆಗಿದ್ದಾರೆ.
ತೆಲಂಗಾಣದಲ್ಲಿ ಕೊರೋನಾ ದಿಂದ ಮೃತಪಟ್ಟವರು 10 ಮಂದಿ ಸಹ ಇದೇ ಧರ್ಮಸಮ್ಮೇಳನದಲ್ಲಿ ಪಾಲ್ಗೊಂಡು ಹಿಂದಿರುಗಿದವರು ಎಂಬ ಮಾಹಿತಿ ಇದೆ.

ದೇಶದಲ್ಲಿ ಇಂದು ಪತ್ತೆಯಾಗಿರುವ 110 ಹೊಸ ಪ್ರಕರಣಗಳ ಪೈಕಿ 110 ಪ್ರಕರಣಗಳೂ ಸಹ ಈ ಸಮ್ಮೇಳನದಲ್ಲಿ ಪಾಲ್ಗೊಂಡು ಬಂದವರು ಅಥವಾ ಅವರ ಕುಟುಂಬದವರೇ ಆಗಿದ್ದಾರೆ ಎಂಬುದು ಅಘಾತಕಾರಿ ಬೆಳವಣಿಗೆ.
ಆಡಿಯೋದಲ್ಲಿ ಸಿಕ್ಕ ಮಾಹಿತಿ: ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ಅಲ್ಲಿನ ಮೌಲ್ವಿ ಮಾತನಾಡಿರುವ ಆಡಿಯೋ ಲಭ್ಯವಾಗಿದ್ದು, ಅದರಲ್ಲಿ ಆತ “ಯಾರೋ ಡಾಕ್ಟರು ಹೇಳಿದರು ಎಂಬ ಕಾರಣಕ್ಕೆ ನಾವು ನೀವು ಸಾಮೂಹಿಕ ಪ್ರಾರ್ಥನೆಯನ್ನು ನಿಲ್ಲಿಸಲು ಆಗುತ್ತದೆಯೇ? ಮಸೀದಿಯಲ್ಲಿ ಒಂದು ವೇಳೆ ನಾವು ನೀವೆಲ್ಲಾ ಸತ್ತರೂ ಸಹ ಪುಣ್ಯ ಪ್ರಾಪ್ತಿಯಾಗುತ್ತದೆ. ಯಾರೋ ಹೇಳಿದರೆಂದು ನಾವು ಗುಂಪುಗೂಡುವುದನ್ನು ಬಿಡಲು ಅಸಾಧ್ಯ” ಎಂಬ ಮಾತುಗಳನ್ನು ಈ ಕುಹುಕಿ ಮೌಲ್ವಿ ಹೇಳಿದ್ದಾನೆ.

ಭಾರತದ ಭದ್ರತಾ ಸಲಹಗಾರರೇ ಹೋಗಬೇಕಾಯಿತು:
ಗುಂಪು ಸೇರಲು ದಿಗ್ಭಂಧನ ಇದ್ದರೂ ಸಹ ಈ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಧರ್ಮ ಸಭೆ ನಡೆಯುತ್ತಿದ್ದುದನ್ನು ತಡೆಯಲು ದೆಹಲಿಯ ಪೋಲಿಸರಿಂದಲೂ ಸಾಧ್ಯವಾಗಲಿಲ್ಲ. ಮುಸ್ಲೀಮರ ಮತಗಳನ್ನೇ ಅವಲಂಬಿಸಿ ಗೆದ್ದು ಬಂದ ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಅದನ್ನು ನಿಲ್ಲಿಸಲು ಆಗಲಿಲ್ಲ. ಆಗ ದೇಶದ ಗೃಹಸಚಿವ ಅಮಿತ್ ಶಾ ಆದೇಶದಂತೆ ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವೆಲ್ ಅವರೇ ರಾತ್ರೋ ರಾತ್ರಿ ಅಲ್ಲಿಗೆ ನುಗ್ಗಿ ಬಲಿಹಾಕಬೇಕಾಯಿತು. ಹೇಗೋ ಈ ವಿಷಯವನ್ನು ಅರಿತ ಆ ಮಸೀದಿಯ ಮೌಲ್ವಿ ನಾಪತ್ತೆಯಾಗಿ ಬಿಟ್ಟ. ನಂತರ ಮಸೀದಿ ಹಾಗೂ ಸುತ್ತ ಮುತ್ತ ರಾಸಾಯಿನಿಕ ಸಿಂಪಡಿಸಲಾಯಿತು.
ಯಾರು ಆ ವಿದೇಶಿಯರು?

ನಿಜಾಮುದ್ದೀನ್ ನ ಈ ಧರ್ಮ ಸಮ್ಮೇಳನದಲ್ಲಿ ಒಟ್ಟು 281 ಮಂದಿ ಪಾಲ್ಗೊಂಡಿದ್ದರು ಎಂಬ ದೃಢ ಮಾಹಿತಿ ಕೇಂದ್ರಕ್ಕೆ ಸಿಕ್ಕಿದೆ. ಅವರೆಲ್ಲಾ ಟೂರಿಸ್ಟ್ ವೀಸಾ ಅಡಿ ಭಾರತಕ್ಕೆ ಬಂದಿದ್ದರಂತೆ. ಆದರೆ ಟೂರಿಸ್ಟ್ ವೀಸಾದಲ್ಲಿ ಬರುವ ಯಾರಿಗೂ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ. ಹಾಗಿದ್ದರೂ ಇವರುಗಳನ್ನು ಈ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಅವಕಾಶ ನೀಡಿದ್ದು ಯಾಕೆ ಎಂಬುದು ತೀವ್ರ ಅನುಮಾನಕ್ಕೆ ಆಸ್ಪದ ನೀಡಿದೆ. ಮಸೀದಿಯಿಂದ ಹೊರ ಹಾಕುವಾಗ ಈ ವಿದೇಶಿಯರು ಕೆಲವರು ಸಿಕ್ಕಿ ಬಿದ್ದಿದ್ದಾರೆ‌ ಆತಂಕಕಾರಿ ವಿಷಯವೆಂದರೆ ಇದರಲ್ಲಿ 62 ಜನ ಕರ್ನಾಟಕ ಕ್ಕೂ ಬಂದಿದ್ದು, ಇವರುಗಳು ಎಲ್ಲಿದ್ದಾರೆ ಎಂಬುದನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚುತ್ತಿದೆ‌. ಈ ಎಲ್ಲಾ ಬೆಳವಣಿಗೆಗಳು ಭಾರತದಲ್ಲಿ ಕೊರೋನಾ ಹಬ್ಬಿಸಲು ಏನಾದರೂ ಷಡ್ಯಂತ್ರ ನಡೆದಿದೆಯೇ ಎಂಬ ಕುರಿತು ಊಹೆಗಳು ಏಳತೊಡಗಿವೆ.

ನಮ್ಮ ವೈದ್ಯರ, ಇಲಾಖೆಗಳ ಶ್ರಮ ವ್ಯರ್ಥವೇ?:
ಭಾರತದ ಪ್ರಧಾನ ಮಂತ್ರಿ ಮೋದಿ ಅವರಿಂದ ಹಿಡಿದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಡಳಿತ ಗಳು ಲಾಕ್ ಡೌನ್ ಯಶಸ್ವಿಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲಿರುಳು ದೇಶದ ವೈದ್ಯಕೀಯ ಸಿಬ್ಬಂದಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದರೆ ನಮ್ಮ‌ ಪೋಲಿಸ್ ಇಲಾಖೆ ಸಿಬ್ಬಂದಿ ಮನೆಗಳನ್ನು ಬಿಟ್ಟು, ಸಂಸಾರವನ್ನು ಬಿಟ್ಟು ಲಾಕ್ ಡೌನ್ ಪೂರ್ಣ ಯಶಸ್ವಿಗೆ ದುಡಿಯುತ್ತಿದ್ದಾರೆ. ಹಾಗಾದರೆ ಇದೆಲ್ಲವೂ ವ್ಯರ್ಥವೇ? ಭಾರತೀಯರಾಗಿದ್ದುಕೊಂಡು ಭಾರತದ ಕಾನೂನನ್ನು ಹಾಗೂ ನಮ್ಮ ಸರ್ಕಾರಗಳು ಹೊರಡಿಸುವ ಆದೇಶಗಳನ್ನೇ ಉಲ್ಲಂಘಿಸಿ ಧರ್ಮ ಸಮ್ಮೇಳನಗಳನ್ನು ಮಾಡುವುದಾದರೆ ಇಂತಹ ಸಮುದಾಯವನ್ನು ದೇಶಪ್ರೇಮಿ ಸಮುದಾಯ ಎನ್ನಲು ಸಾಧ್ಯವೇ ಎಂಬ ಮಾತುಗಳು ದೇಶದೆಲ್ಲೆಡೆ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *