ಭಯಾನಕ ಮಾಹಿತಿ ಹೊರಹಾಕಿರುವ ವಿಜ್ಞಾನಿಗಳು “ಗಾಳಿಯಿಂದಲೂ ಹರಡಲಿದೆಯಂತೆ ಕೊರೊನಾ”
ನವದೆಹಲಿ: (ಜು.06) ವಿಶ್ವಾದ್ಯಾಂತ ಚಿಂತೆಗೆ ಈಡು ಮಾಡಿರುವ ಹಾಗೂ ಜಾಗತೀಕ ಪಿಡುಗುಗಾಗಿ ಪರಿಣಮಿಸಿರುವ “ಕೊರೊನಾ” ಎಂಬ ಮಹಾಮಾರಿಯ ಬಗ್ಗೆ ಈವರೆಗಿನ ಅಂಕಿ ಅಂಶಗಳೇ ತಲೆ ತಿರುಗುವಂತೆ ಮಾಡಿದೆ. ಆದರೆ ಇದಕ್ಕಿಂತಲೂ ಮತ್ತಷ್ಟು ಅಘಾತಕಾರಿಯಾದ ಮಾಹಿತಿಯೊಂದನ್ನು 31 ದೇಶಗಳ 239 ವಿಜ್ಞಾನಿಗಳು ಹೊರಹಾಕಿದ್ದಾರೆ.
ಕೊರೋನಾ ರೋಗದ ಸೋಂಕು ಗಾಳಿಯ ಮುಖಾಂತರವೂ ಹರಡಲಿದೆಯೆಂದು ವಿವಿಧ ದೇಶಗಳ ಹಲವು ವೈದ್ಯಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದು ವಿಶ್ವ ಆರೋಗ್ಯ ಸಂಸ್ಥೆಗೆ ಬಹಿರಂಗ ಪತ್ರವೊಂದನ್ನು ಅವರುಗಳು ಬರೆದಿದ್ದು, ಈ ಕುರಿತು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇಷ್ಟು ದಿನ ಕೊರೊನಾ ವ್ಯಕ್ತಿಯಿಂದ ವ್ಯಕ್ತಿಗೆ ಹರಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈಗ ಗಾಳಿಯ ಮುಖಾಂತರವೂ ಹರಡಲಿದೆ ಎಂದು ತಿಳಿದು ಬರುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿ ಪರಿಣಮಿಸಿದೆ.
ಸೈನ್ಸ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟಿಸಲು ಸಂಶೋಧನಾ ವರದಿ ಸಿದ್ಧಪಡಿಸಿರುವ ವೈದ್ಯಕೀಯ ಕ್ಷೇತ್ರದ ತಜ್ಞರು ಸಂಶೋಧನೆಯ ಸಾರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಓಪನ್ ಲೆಟರ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ವೈರಸ್ ಅಬ್ಬರ: ಒಂದೇ ದಿನ 2244 ಕೇಸ್, 1 ಲಕ್ಷ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ ವಿಶೇಷವಾಗಿ ಕಳೆದ ಎರಡು ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮುಖಾಂತರ ಪ್ರಸಾರವಾಗುವ ಬಗ್ಗೆ ಸಾಧ್ಯವಾದಷ್ಡು ಪರಿಗಣಿಸಿದ್ದೇವೆ. ಆದರೆ, ಈವರೆಗೆ ನಮಗೆ ದೃಢವಾದ ಅಥವಾ ಸ್ಪಷ್ಟವಾದ ಪುರಾವೆಗಳು ಲಭಿಸಿಲ್ಲ ಎಂದಿ ಡಬ್ಲೂಹೆಚ್ ಓ ಸೋಂಕಿನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ ಅಭಿಪ್ರಾಯ ಪಟ್ಟಿದ್ದಾರೆ.