ಭಯಾನಕ ಕಾಡು, ಸುರಿಯುತ್ತಿದ್ದ ಜಡಿ ಮಳೆ,ತಾನು ಹೆತ್ತ ಮಗುವನ್ನು ಆ ರಕ್ಕಸಿ ತಾಯಿ ಬಿಟ್ಟುಹೋದ್ಳು.!ಆಮೇಲೆ ಏನಾಯ್ತು ಗೊತ್ತಾ?ಒಂದು ನಿಮಿಷ ಸಮಯ ಇದ್ರೆ ಓದಿ ಶೇರ್ ಮಾಡಿ…

ಕಟುಕ ತಾಯಿ ತನ್ನ  ಕರಳು ಬಳ್ಳಿಯನ್ನೆ ಕತ್ತರಿಸಿ, ರಕ್ತ ಮೆತ್ತಿದ ಹಸುಗೂಸೆನ್ನದೆ ಕಾಡಿಗೆಸದ ಆ ನಾಗರ ಪಂಚಮಿ ನೆನಪಾದರೆ ನನ್ನ ಮೈ ರೇೂಮ ಸೆಟೆದು ಬಿಡುತ್ತೆ. ಕಾರಣ ಒಂದು ಹಗಲು,ಒಂದು ಸಂಪೂರ್ಣ ಕರಾಳ ರಾತ್ರಿ ಅದೂ ಒಂಟಿ ಭಯಾನಕ ಕಾಡಲ್ಲಿ, ಅದರಲ್ಲೂ ಒಂದೇ ಸವನೆ ಸುರಿಯುತ್ತಿದ್ದ ಜಡಿ ಮಳೆಯಲ್ಲು ಆ ಮಗು ತನ್ನ ಜೀವವನ್ನ ಪಣಕಿಟ್ಟಂತ್ತೆ ಬೊರಾಲಾಗಿ ಚೂಪು ಕಲ್ಲುಚೂರುಗಳ ಮೇಲೆ, ಹರಿಯುವ ನೀರಿನ ಮೇಲೆ ಇನ್ನೊಂದು ರಾತ್ರಿಗಾಗಿ ಉಸಿರು ಬಿಗಿಹಿಡಿದು ಕೊಂಡು, ಸೊಳ್ಳೆಗಳಿಂದ ಕಚ್ಚಿಸಿಕೊಂಡು ಮಲಗಿದ್ದ ಆ ಎಳೆ ಹಸುಳೆಯನ್ನ ಈಗ ನೆನೆಸಿಕೊಂಡರೆ ಮೈ ನಡುಗುತ್ತೆ ಕಣ್ರಿ.

ಹೌದು, ಈಗ ಅದನ್ನ ನೆನೆದರೆ ಒಂದು ಕ್ಷಣ ಭಯ ಕಾಡುತ್ತೆ. ನನ್ನ ವೃತ್ತಿ ಜೀವನದಲ್ಲಿ ಇದು ನನಗೆ ಭಯಕಾಡಿಸಿದ್ದ ಸುದ್ದಿ.ಆದರೆ ಅಷ್ಟೇ ಸಂತೋಷಕ್ಕಿಂತ ಥ್ರಿಲ್ಲಿಂಗ್ ಕೊಟ್ಟ ಸುದ್ದಿ ಕೂಡ.

ಅಂದು ರಾತ್ರಿ ನನಗೂಂದು ಸುದ್ದಿಗಾಗಿ ಕರೆ ಬಂತು. ಸುದ್ದಿ ಕೇಳಿದಾಕ್ಷಣ ಕುಂದಾಪುರ ಪೊಲೀಸ್ ಠಾಣೆಗೆ ಪೋನಾಯಿಸಿ ಸುದ್ದಿ ಮುಟ್ಟಿಸಿದೆ.ಅದುವೆ ಅಪ್ರಾಪ್ತ ಹುಡುಗಿಯೊ೯ವಳು ಗರ್ಭಿಣಿಯಾಗಿ, ಕೊನೆಗೆ ಆ ಗರ್ಭವನ್ನ ಬಲಾತ್ಕಾರವಾಗಿ ತೆಗೆಸುವದಕ್ಕಾಗಿ ಆ ಅಪ್ರಾಪ್ತ ಹುಡುಗಿಯ ತಾಯಿ ಮುಂದಾಗಿದ್ದಾಳೆ. ಇದಕ್ಕೆ ಊರವರು ವಿರೇೂದ ವ್ಯಕ್ತ ಪಡಿಸಿದಾಗ ಆ ತಾಯಿ ಬೇರೊಂದು ಪ್ಲಾನ್ ಮಾಡುತ್ತಾಳೆ. ಅದುವೆ ಗರ್ಭಿಣಿ ಹುಡುಗಿಯನ್ನ ಸಾಗರದಲ್ಲಿ ಬಿಟ್ಟು ಬರಲು.

*ಎಣಿಸಿದ್ದೆ ಒಂದು ನೆಡೆದ್ದದ್ದು ಇನ್ನೊಂದು*

ತುಂಬು ಗರ್ಭಿಣಿಯನ್ನ ಬಾಡಿಗೆ ಕಾರನ್ನ ಮಾಡಿಕೊಂಡು, ಹುಡುಗಿಯ ತಾಯಿ ಕೊಲ್ಲೂರು ಮಾರ್ಗವಾಗಿ ಸಾಗುವ ಹೊತ್ತಿಗೆ ಆ ಹುಡುಗಿಗೆ ಅತೀವ ರಕ್ತ ಸ್ರಾವವಾಗಿ ಹೆರಿಗೆ ನೋವು, ಹೊಟ್ಟೆ ನೇೂವಿನಿಂದ ಕಿರುಚಾಡುತ್ತಿದ್ದಂತೆ ಜನ್ನಾಲು ಎಂಬಲ್ಲಿ, ಅದರಲ್ಲೂ ಕೊಲ್ಲೂರಿನ ದಟ್ಟವಾದ ಅಭಯಾರಣ್ಯ ಕಾಡಿನಂಚಿನಲ್ಲಿ ಕಾರನ್ನ ನಿಲ್ಲಿಸಲು ಡ್ರೈವರ್’ಗೆ ಹೇಳಿದ್ರು.

ಆಕೆಗೆ ಮೂತ್ರ ಶಂಕೆಯಾಗಿದೆ. ಕಾಡಿನ ಒಳಗೆ ಹೇೂಗಿ ಬರುತ್ತೇವೆ ಎಂದು‌ ಡ್ರೈವರ್’ಗೆ ಹೇಳಿ ಆ ದಟ್ಟ ಕಾಡಿನ ಒಳಗೆ ಕರೆದೊಯ್ದು ಆಕೆಯನ್ನ ಅಲ್ಲಿ ಮಲಗಿಸಿದ ಹೊತ್ತಿಗೆ ಆಕೆಗೆ ಹೇರಿಗೆ ಆಗಿತ್ತು. ಹೆಣ್ಣು ಹಸುಳೆಯನ್ನ ನೋಡಿದ ಆ ಕಟುಕ ಅಪ್ರಾಪ್ತೆಯ ತಾಯಿ ಆ ಮಗುವಿನ ಕರಳು ಬಳ್ಳಿಯನ್ನ ಕಲ್ಲಿನಿಂದ ಜಜ್ಜಿ ಆಗ ತಾನೆ ಕಣ್ಣ್ ಬಿಟ್ಟ ಆ ಹಸುಳೆಯನ್ನ, ತಾನು ಒಬ್ಬಳು ತಾಯಿ ಎನ್ನುದನ್ನ ಮರೆತು ಸುರಿಯುತ್ತಿದ್ದ ಆ ಮಳೆಯಲ್ಲಿಯೆ ಎಸೆದು, ಆಗ ತಾನೆ ಹಡೆದ ತಾಯಿಯನ್ನ ನಡೆಸಿಕೊಂಡು ಕಾರಿನ ಬಳಿ ಬಂದು ಪುನಃ ಮನೆಗೆ ತೆರಳುವಂತೆ ಕಾರಿನವರಿಗೆ ಸೂಚಿಸುತ್ತಾಳೆ ಅಂತೆ ಮನೆ ಸೆರುತ್ತಾಳೆ.

*ಜಾಗೃತರಾದ ಊರಿನವರು*

ಅಂದು ನಾಗರ ಪಂಚಮಿ ಎಲ್ಲರು ರಜೆಯಲ್ಲಿ ಹಬ್ಬವನ್ನ ಆಚರಿಸುತ್ತಿದ್ದ ಆ ಕಾಲೊನಿಯವರು ಹುಡುಗಿಗೆ ಹೆರಿಗೆ ಮಾಡಿಸಿ ಎಲ್ಲೋ ಮಗುವನ್ನು ಎಸೆದು ಬಂದಿದ್ದಾಳೆಂದು ಗುಲ್ಲು‌ಎಬ್ಬಿಸಿದಾಗ ಆಕೆ ಮೈ ಮೇಲೆ ದೆವ್ವ ಬಂದವಳಂತಾಡಿ ನನ್ನ ಮಗಳ ಹೊಟ್ಟೆಯಲ್ಲಿ ಗಡ್ಡೆ ಬೇಳೆದಿದ್ದು ಅದನ್ನ ತೆಗೆಸಿದೆ ಅಷ್ಟೇ ಎಂದು ಮಾತೆ ಬದಾಲಾಯಿಸಿದಳು. ಆದರೆ ಊರಿನವರಿಗೆ ಇದು ಸುಳ್ಳು ಎಂದರಿತರು.

*ಮತ್ತೆ ಕಾಲ್ ಮಾಡಿದರು ನನಗೆ*

ಮತ್ತೆ ನನಗೆ ಊರಿನವರ ಕಾಲ್ ಬಂದಾಗ ಆಗಿನ ಠಾಣಾಧಿಕಾರಿಯಾಗಿದ್ದ ನಾಸಿರ್ ಹುಸೇನ್ ರವರಿಗೆ ಖಡಕ್ ಆಗಿ ಹೇಳಿದಾಕ್ಷಣ ನಂತರ ಆಕೆಯ ಮನೆಗೆ ಜೀಪ್ ನಲ್ಲಿ ಬರುತ್ತಾರೆ.ನಂತರ ವಿಚಾರಿಸುತ್ತಾರೆ ಅದಕ್ಕೆ ಆಕೆ ಏನು ನಡೆದಿಲ್ಲ ಅದೆಲ್ಲ ಸುಳ್ಳು ಎನ್ನುತ್ತಾಳೆ.ಅದರಂತೆ ಈ ಪೊಲೀಸರು ವಾಪಾಸು ಬರುತ್ತಾರೆ.ಹಾಗೆ ಆ ದಿನ ಮುಗಿದು ಹೊಯಿತು.ಯಾಕೆಂದರೆ ನಾನು ಬಿಝಿ ಇದ್ದಿದ್ದೆ. ಮಾರನೆಯ ದಿನ ನಾ ಅಂದಿನ ಗೆಳೆಯನಿಗೆ ಸುದ್ದಿ ಹೇಳಿ ಖುದ್ದಾಗಿ ನಾವೆ ಠಾಣೆಗೆ ಹೇೂಗಿ ವಿಚಾರಿಸಿದಾಗ ಅದೇನಿಲ್ಲ ಅದೇನೊ ಗಡ್ಡೆ ಅಂತೆ ಅದಕ್ಕೆ ಒಂದು ಸ್ಟೇಟ್ ಮೆಂಟ್ ಮಾಡಿ ಕಳಿಸಿದ್ದೆವೆ ಎಂದರು. ಆದರೆ ಅದು ನಮಗೆ ಸರಿ ಕಾಣಲಿಲ್ಲ.ಕೊನೆಗೆ ಅಂದಿನ ವೃತ್ತ ನೀರಿಕ್ಷಕರಾದ ದಿವಾಕರ್ ಅವರಿಗೆ ತಿಳಿಸಿ, ಅವರನ್ನ ಕರೆದುಕೊಂಡು ಹೇೂದ ಬಾಡಿಗೆ ಕಾರ್ ಡ್ರೈವ್ ರನ್ನ ವಿಚಾರಿಸುವಂತೆ ಹೇಳಿ ನಾವು ಬೇರೊಂದು ಸುದ್ದಿಗೆ ತೆರಳಿ ಸಂಜೆ ‌ನಾಲ್ಕು ಗಂಟೆಯ ಸಮಯಕ್ಕೆ ಠಾಣೆಗೆ ಏನಾಯಿತು ಎಂದು ಕೇಳಲು ಬಂದೆವು.

ಆಗಲೂ ಆ ಡ್ರೈವ್ ರನ್ನದ್ದು ಅದೇ ರಾಗ ಎಂಬಂತೆ ಒಂದು ಸ್ಟೇಟ್ ಮೆಂಟ್ ಮಾಡಿಸಿ ಕಳುಹಿಸಿದ್ದರು.ಇದು ನಮಗೆ ಸರಿ ಕಾಣಲಿಲ್ಲ.ಕೂಡಲೆ ಹೊರಗೆ ಬಂದೆವು ಆಗ ಸಂಜೆ ಸುಮಾರು ಐದು ಗಂಟೆಯಾಗಿತ್ತು.ಠಾಣೆಯಿಂದ ಹೊರಗೆ ಬರುತ್ತಿದ್ದಂತೆ ಆ ಡ್ರೈವ್ ರ್ ಕಾಣ ಸಿಕ್ಕ ಅವನೊಂದಿಗೆ ಕಾರ್ ಮಾಲೀಕರಾದ ಸುದಾಕರ ಪೂಜಾರಿ, ಹಾಗೂ ಅಲ್ಸಮ್ ಇದ್ದರು.ಆಗ ನಾವು ಆ ಡ್ರೈವ್ ರಲ್ಲಿ ಸತ್ಯ ಹೇಳು ನಿನ್ನೇ ಮಧ್ಯಾನ್ಹ ಅವರನ್ನ ಎಲ್ಲಿ ಬಿಟ್ಟಿದ್ದು ಹೇಳು ಎಂದು ಒತ್ತಡ ಹಾಕಿದೆವು. ಆತ ತಡವರಿಸಲು ಶುರುವಿಟ್ಟು ಕೊಂಡ ಕೂಡಲೆ ಆತನ್ನ ನನ್ನ ಕಾರಿಗೆ ಬಾಗಿಲೆಳೆದು ಕೂರಿಸಿದೆ ಎಲ್ಲಿ ತೋರಿಸು ಎಂದು.

ಆಗ ಕಕ್ಕಾ ಬಿಕ್ಕಿಯಾದ ಡ್ರೈವ್ ರ್ ನೊಂದಿಗೆ ಕಾರ್ ಮಾಲಕರು ನನ್ನ ಕಾರ್ ಹತ್ತಿ ತೋರಿಸು ಮಾರಾಯ ನಿನಗೆ ಏನು ಆಗಲ್ಲ ಎಂದು ಹೆಳಿದರು ಅಂತೆಯೆ ಕುಂದಾಪುರದಿಂದ ಆ ಸುರಿಯುವ ಮಳೆಯಲ್ಲಿ ಹೊಂಡ,ಗುಂಡಿ ರಸ್ತೆಯಲ್ಲಿ ಶರ ವೇಗದಿ ಸಾಗಿದೆವು.ಆಗ ಕತ್ತಲು ಕವಿಯುವ ಹೊತ್ತಾಗಿತ್ತು.ಕೊನೆಗೂ ಆ ಸ್ಥಳವನ್ನ ತಲುಪಿದೆವು.ಇಲ್ಲೆ ನಾನು ಕಾರು ನಿಲ್ಲಿಸಿದೆ ಅವರು ಅತ್ತ ಹೊಗಿದ್ದರು ಎಂದು ಎಡ ಬದಿಯ ದಟ್ಟ ಅರಣ್ಯವನ್ನ ತೊರಿಸಿದ.

*ದಟ್ಟ ಅಭಾಯರಣ್ಯ ಒಳಹೊಕ್ಕಗಾ ಕಾದಿತ್ತು ನಮಗ ಆಶ್ಚರ್ಯ*

ಮಳೆ ಸಣ್ಣಗೆ ಸುರಿಯುತ್ತಿತ್ತು. ನಾಲ್ಕು ಜನರು ಒಟ್ಟಾಗಿ ಮಾತಾನಾಡುತ್ತಾ ಸೊಳ್ಳೆ ಕಚ್ಚಿಸಿಕೊಂಡು ಮಾತಾನಾಡುತ್ತಾ ಮುಂದೆ ಸಾಗುವ ಹೊತ್ತಿಗೆ ಮಗುವಿನ ಅಳುವ ಧ್ವನಿಯೊಂದು ಕೇಳಿಸಿತು. ಎಲ್ಲಿ ಎಂದು ನೊಡುವಾಗ ಆ ಅದ್ಬುತ ಕಣ್ಮುಂದೆ ಕಾಣಿಸಿದಾಗ ಒಮ್ಮೆಗೆ ಬೆದರಿದೆವು. ಮಳೆಯ ನೀರಲ್ಲಿ ನೆನೆದು ಮೈ ಬೆಳಚಾಗಿತ್ತು. ಒಂದೇ ಬೇೂರಲು ಮಗ್ಗಲಲ್ಲಿ ಅತ್ತು, ಅತ್ತು ಸುಸ್ತಾಗಿತ್ತು. ತಡ ಮಾಡಲಿಲ್ಲ ಎತ್ತಿಕೊಂಡು ಸಾಗಬೇಕು ಅದರೆ ನಮ್ಮಲ್ಲಿ ಬೇರೆ ಬಟ್ಟೆ ಇಲ್ಲಾವಾಗಿತ್ತು. ಕೇೂಡಲೆ ಮತ್ತೆ ಕಾಡಿನಿಂದ ಹೂರಗೆ ಓಡಿ ಬಂದೆ ದೂರದಲ್ಲಿ ಮನೆ ಕಾಣಿಸಿತು. ಅವರ ಮನೆಗೆ ಓಡಿ ಒಂದು ಬಟ್ಟೆಯನ್ನ ಎಳೆದುಕೊಂಡು ಓಡಿ ಬಂದೆ.

ಆ ಮನೆಯವರಿಗೆ ಏನು,ಎತ್ತ, ಎಂದು ತಿಳಿಯದೆ ನನ್ನ ಹಿಂದೆಯೆ ಓಡಿ ಬಂದರು ಕೇೂಡಲೆ ಆ ಮಗುವನ್ನ ಎತ್ತಿಕೊಂಡೆ ಅಳಲು ಪ್ರಾರಂಭಿಸಿತು. ನಂತರ ಎತ್ತಿಕೊಂಡು ಕಾರತ್ತ ಓಡಿ ಬಂದೆವು. ನಂತರ ನನ್ನ ಕಾರನ್ನ ಸುಧಾಕರರವರಲ್ಲಿ ಚಾಲಾಯಿಸುವಂತೆ ಹೇಳಿ ಮುಂದಿನ ಸೀಟ್ನಲ್ಲಿ ಮಗುವನ್ನ ಎತ್ತಿ ಕೊಂಡು ಕುಳಿತೆ. ಆಗ ಮಗುವಿನ ಹೂಕ್ಕಳ ಬಳ್ಳಿ ನನ್ನ ಮೈಗಂಟಿಕೊಂಡೆ ನೆತಾಡುತ್ತಿತ್ತು. ಅದನ್ನೆ ಕಲ್ಲಿನಿಂದ ಜಜ್ಜಿ ಅಂದು ತುಂಡು ಮಾಡಿದ್ದರು. ನಂತರ ಮಗು ಸಿಕ್ಕ ವಿಚಾರ, ಇನ್ನೂ ಜೀವಂತ ಇರುವ ವಿಚಾರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಅವರಿಗೆ ತಿಳಿಸಿದಾಕ್ಷಣ ಕೂಡಲೆ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬರಲು ಹೇಳಿದರು. ಅಲ್ಲಿ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರು.

ಅಂತೆಯೆ ಆಸ್ಪತ್ರೆಯನ್ನ ಸೇರಿ ಮಗುವನ್ನ ವೈದ್ಯರ ಕೈಗೆ ಒಪ್ಪಿಸಿದೆ. ಆಗ ರಾತ್ರಿ ಎಂಟು ಗಂಟೆಯಾಗಿತ್ತು. ನಂತರ ಒಂದು ಗಂಟೆಯ ನಂತರ ಮಗು ಆರೊಗ್ಯ ವಾಗಿದೆ ಅಂದಾಗ ನಾನು ಅಂದು ಎಷ್ಟು ಸಂಭ್ರಮಿಸಿದೆ ಎಂದರೆ, ಅದು ನನಗೆ ಮಾತ್ರ ಗೊತ್ತು.ಯಾಕೆಂದರೆ ಒಂದು ಹಗಲು, ಒಂದು ರಾತ್ರಿ ಮಳೆಯಲ್ಲಿ ಬೇೂರಾಲಾಗಿ ಎಸೆದ ಮಗುವನ್ನ ಉಳಿಸಿದೆನ್ನ ಎಂಬ ಹೆಮ್ಮ ನನ್ನ ಪಾಲಾಯಿತು ಎಂದರೆ ಅದು ಹೆಮ್ಮೆಯಲ್ಲವೆ.

*ಎಚ್ಚರ ಗೊಂಡ ತಾಲೂಕು ಆಡಳಿತ*

ಸುದ್ದಿ ಎಲ್ಲೆಡೆಯೂ ಹಬ್ಬುತ್ತಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಬಂದು ನಮಗೆ ಬೇಷ್ ಹೇಳಲು ಮುಂದಾದರು ಅದರಲ್ಲೂ ಪೋಲೀಸ್ ಇಲಾಖೆ ಮುಜುಗರಕ್ಕೆ ಇಡಾಗಿತ್ತು. ಅಂದಿನ ಡಿ ವೈ ಎಸ್ ಪಿ ಸಿ ಬಿ ಪಾಟೀಲ್ ನಮ್ಮ ಕೆಲಸ ನೀವು ಮಾಡಿ ನಮಗೆ ಹೆಮ್ಮೆ ತಂದ್ದಿದ್ದೀರಿ. ಅಷ್ಟಾಗಿ ಒಂದು ಪ್ರಾಣವನ್ನ ಉಳಿಸಿದ್ದೀರಿ ಎಂದು ಬೆನ್ನು ತಟ್ಟಿದರು.

*ತಾಯಿಯೊಂದಿಗೆ ಆಕೆಯ ತಾಯಿ ಆಸ್ಪತ್ರೆಗೆ*

ವಿಷಯ ತಿಳಿದಾಗ ಪೋಲೀಸರು ಈ ಪ್ರಕರಣವನ್ನ ಗಂಬೀರವಾಗಿ ಪರಿಗಣಿಸಿ ತನಿಖೆ ನೆಡೆಸಿ ಈ ಅಕ್ರಮಕ್ಕೆ ಕಾರಣನಾದವನ್ನ ಅರೆಸ್ಟ ಮಾಡಿ ಜೈಲಿಗಟ್ಟುತ್ತಾರೆ. ಮಗುವನ್ನ ನಂತರ ತಾಯಿಯ ಬಳಿ ಸೇರಿಸುತ್ತಾರೆ. ಮಗುವನ್ನ ನೊಡಲು ಜನ ಮುಗಿ ಬಿಳುತ್ತಾರೆ. ಅಷ್ಟೇಕೆ ಮಗುವನ್ನ ನಾವು ಸಾಕುತ್ತೆವೆ ಎಂದು ಅದೇಷ್ಟೂ ಜನ ಮುಂದೆ ಬಂದರು.

ಆದರೆ ಕಾನೂನು ಬಿಡ ಬೇಕಲ್ಲ. ಕೊನೆಗೆ ಒಂದು ವರ್ಷಗಳ ನಂತರ ಮಗುವಿನ ತಾಯಿಗೆ ಹದಿನೆಂಟು ತುಂಬಿದ ಕ್ಷಣ ಮಗುವಿನ ತಂದೆ ಎನಿಸಿಕೊಂಡವ ಕುಂದಾಪುರ ರಕ್ತೇಶ್ವರಿ ದೇವಸ್ಥಾನದಲ್ಲಿ ಪೋಲೀಸರು ಹಾಗೂ ಪತ್ರಕರ್ತರ ಸಮ್ಮುಕದಲ್ಲಿ ಮದುವೆ ನೆಡೆಯಿತು.ಈ ಪ್ರಕರಣ ನಡೆದು ಈ ನಾಗರ ಪಂಚಮಿಗೆ ನಾಲ್ಕನೆ ವರುಷ. ಅಷ್ಟಕ್ಕೂ ಆ ಹೆಣ್ಣು ಮಗುವಿಗೆ ಅಂದೆ ಪಂಚಮಿ ಎಂದು ನಾಮಕರಣ ಮಾಡಿದ್ದೆವು.


*ಎಲ್ಲೆ ಇರು,ಹೇಗೆ ಇರು ಪಂಚಮಿ ನಿ ಚೆನ್ನಾಗಿರು*   ಇಂತಿ *ಚಂದ್ರಮ ತಲ್ಲೂರು ಚಾಲುಕ್ಯ*

ಭಯಾನಕ ಕಾಡಿಗೆ ಹೋಗಿ, ಒಂದು ಹಸುಗೂಸಿನ ಪ್ರಾಣವನ್ನು ಉಳಿಸಿದ ಚಂದ್ರಮ ತಲ್ಲೂರಿಗೆ ನಮ್ಮದೊಂದು ಸಲಾಮ್…

ಕೃಪೆ : ಚಂದ್ರಮ ತಲ್ಲೂರು ಚಾಲುಕ್ಯ

One thought on “ಭಯಾನಕ ಕಾಡು, ಸುರಿಯುತ್ತಿದ್ದ ಜಡಿ ಮಳೆ,ತಾನು ಹೆತ್ತ ಮಗುವನ್ನು ಆ ರಕ್ಕಸಿ ತಾಯಿ ಬಿಟ್ಟುಹೋದ್ಳು.!ಆಮೇಲೆ ಏನಾಯ್ತು ಗೊತ್ತಾ?ಒಂದು ನಿಮಿಷ ಸಮಯ ಇದ್ರೆ ಓದಿ ಶೇರ್ ಮಾಡಿ…

  • September 5, 2018 at 10:43 pm
    Permalink

    Realy great. One life is saved. Glad that Child has grown to four years. More over god only has sa ved the new born in Sun and rain. OMG.

    Reply

Leave a Reply

Your email address will not be published. Required fields are marked *