ಬೈಕ್ ಅಪಘಾತ: ರಾಷ್ಟ್ರೀಯ ಈಜುಪಟು ಬಾಲಕೃಷ್ಣ ದುರಂತ ಸಾವು

ದ್ವಿಚ್ರವಾಹನ ಅಪಘಾತದDಲ್ಲಿ ರಾಷ್ಟ್ರೀಯ ಈಜುಪಟು ಎಮ್.ಬಿ. ಬಾಲಕೃಷ್ಣ ಅವರು ನಿನ್ನೆ ರಾತ್ರಿ ದುರಂತ ಸಾವಿಗೀಡಾಗಿದ್ದಾರೆ.
ತಮ್ಮ ಗೆಳತಿ ಜೊತೆ ಅವರು ಬೈಕ್ ನಲ್ಲಿ ಅರೂಮ್ ಬಾಕಮ್ ನಿಂದ ಮನೆಗೆ ಮರಳುವ ಸಂಧರ್ಭದಲ್ಲಿ ಈ ದುರಂತ ಸಂಭವಿಸಿದೆ.
ಕಾಂಕ್ರೀಟ್ ಮಿಸ್ಚರ್ ಟ್ರಕ್ ಒಂದನ್ನು ಹಿಂದೆ ಹಾಕಿ ಮುಂದೆಸಾಗಳು ಯತ್ನಿಸಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು ಬೈಕ್ ಟ್ರಕ್ ಗೆ ತಾಗಿತು. ನಿಯಂತ್ರಣ ಕಳೆದುಕೊಂಡ ಬಾಲಕೃಷ್ಣ ಅವರು ಕೆಳಗೆ ಬಿದ್ದಾಗ ಅವರ ಮೇಲೆ ಟ್ರಕ್ ಹರಿದಿದೆ.ಅದೃಷ್ಟವಶಾತ್ ಹಿಂದೆ ಕುಳಿತಿದ್ದ ಅವರ ಗೆಳತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಅವರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ನೀಡಲಾಯಿತು.

ಟ್ರಕ್ ಚಾಲಕ ಸುಬ್ರಮಣ್ಯಂನನ್ನು ಬಂಧಿಸಲಾಗಿದೆ.
ವೈದ್ಯ ದಂಪತಿಯ ಪುತ್ರರಾಗಿರುವ ಬಾಲಕೃಷ್ಣ ಅವರು 2010 ರ ಢಾಕಾ ಸೌತ್ ಏಶಿಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.
ಎಂಜಿನಿಯರಿಂಗ್ ಬಳಿಕ ಯು.ಎಸ್.ನಲ್ಲಿ ಎo ಎಸ್ ಮುಗಿಸಿ ಅಲ್ಲಿಯೇ ಸೇವೆಸಲ್ಲಿಸುತ್ತಿದ್ದರು.
ಕೆಲದಿನಗಳ ರಜೆಯ ಮೇಲೆ ಬಂದಿದ್ದ ಅವರು ತಮ್ಮ ಮೆಚ್ಚಿನ ಬೈಕ್ ನಲ್ಲಿ ಗೆಳತಿಜೊತೆ ಸುತ್ತಾಡಿ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ರಾಷ್ಟ್ರ ಒಬ್ಬ ಪ್ರತಿಭಾವಂತ ಕ್ರೀಡಾ ಪಟು ಅವರನ್ನ ಕಳೆದುಕೊಂಡಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪಾರ್ಥಿಸೋಣ.

Leave a Reply

Your email address will not be published. Required fields are marked *