ಬೇಸಿಗೆಯಲ್ಲಿ ಬಿಸಿಲಿನ ತಾಪ ತಣಿಸುವ, ನೈಸರ್ಗಿಕ ಪಾನೀಯಗಳು

ಬೇಸಿಗೆಯಲ್ಲಿ ಸುಡುವ ಬಿಸಿಲು, ಏರುತ್ತಿರುವ ಉಷ್ಣತೆ, ಮೈಯೆಲ್ಲಾ ಹರಿಯುತ್ತಿರುವ ಬೆವರು…ಇಂತಹ ಸಮಯದಲ್ಲಿ ಮೈಯನ್ನು ತಂಪಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಇಲ್ಲವಾದಲ್ಲಿ ನಿರ್ಜಲೀಕರಣ ಉಂಟಾಗಿ ದೇಹದ ನಿಶ್ಯಕ್ತಿಗೆ ಒಳಗಾಗಬಹುದು.ಇದರಿಂದ ಬೇಸಿಗೆ ಕಾಲದಲ್ಲಿ ದೇಹದ ತೇವಾಂಶವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಅತಿಯಾಗಿ ಬೆವರುವ ಕಾರಣದಿಂದ ದೇಹದಲ್ಲಿರುವ ನೀರಿನಾಂಶವು ಬೇಗನೆ ಮಾಯವಾಗುವುದು. ಬಾಯಾರಿಕೆ ನಿವಾರಣೆ ಮಾಡಲು ನೀರು ಅತೀ ಮುಖ್ಯ ಪಾನೀಯವಾಗಿದೆ. ಅದೇ ರೀತಿಯಾಗಿ ನೀವು ಬೇರೆ ಕೆಲವು ಪಾನೀಯಗಳನ್ನು ಕೂಡ ಪ್ರಯತ್ನಿಸಿ ನೋಡಬಹುದು ಇದರ ಬಗ್ಗೆ ನೀವು ಓದುತ್ತಾ ಸಾಗಿ. .. ಬಿರು ಬೇಸಗೆಯಿಂದ ಪಾರು ಮಾಡುವ ಪಾನೀಯಗಳು ಇಲ್ಲಿವೆ….

ಜಲಜೀರಾ

My fizzy Aam Panna

ಜೀರಿಗೆ ಮತ್ತು ನೀರನ್ನು ಹಾಕಿಕೊಂಡು ಜಲಜೀರಾವನ್ನು ತಯಾರಿ ಮಾಡಲಾಗುತ್ತದೆ. ಜೀರಿಗೆಯನ್ನು ಹುರಿದುಕೊಂಡು ಇದರ ಹುಡಿ ಮಾಡಿದ ಬಳಿಕ ಅದನ್ನು ನೀರಿಗೆ ಹಾಕಲಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೆ ಇದು ಅತ್ಯುತ್ತಮವಾದ ಪಾನೀಯವಾಗಿದೆ. ಅದರಲ್ಲೂ ಬೇಸಗೆಯಲ್ಲಿ ಇದು ತುಂಬಾ ಒಳ್ಳೆಯದು. ತಂಪಾಗಿರುವಂತಹ ಜಲಜೀರಾವನ್ನು ನೀವು ಕುಡಿದೆ ಬಿಸಿಲಿನಿಂದ ಪಾರಾಗಲು ಇದು ತುಂಬಾ ನೆರವಾಗುವುದು

ಆಮ್ ಪನ್ನಾ

ಹಣ್ಣುಗಳ ರಾಜನೆಂದು ಕರೆಯಲ್ಪಡುವಂತಹ ಮಾವಿನ ಹಣ್ಣಿನಿಂದ ಮಾಡಲ್ಪಡುಂತಹ ಈ ಪಾನೀಯವು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಜನಪ್ರಿಯವಾಗಿದೆ. ಈ ಆಹ್ಲಾದಕರ ಬೇಸಿಗೆಯ ಪಾನೀಯವನ್ನು ಮಾವಿನ ಹಣ್ಣಿನ ತಿರುಳು, ಜೀರಿಗೆ, ಪುದೀನಾ ಎಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. ಇದು ದೇಹಕ್ಕೆ ಆಹ್ಲಾದ ನೀಡುವುದು ಮಾತ್ರವಲ್ಲದೆ, ಬೇಸಗೆಯಲ್ಲಿ ದೇಹದಕ್ಕೆ ಬೇಕಾಗಿರುವಂತಹ ಶಕ್ತಿ ನೀಡುವುದು.

ಮಜ್ಜಿಗೆ

ಮೊಸರಿನಿಂದ ತಯಾರಿಸಲ್ಪಡುವಂತಹ ಮಜ್ಜಿಗೆಯು ಭಾರತದಲ್ಲಿ ಹೆಚ್ಚು ಬಳಸಲ್ಪಡುವಂತಹ ಪಾನೀಯವಾಗಿದೆ. ಮಜ್ಜಿಗೆಯು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ಇದಕ್ಕೆ ಸ್ವಲ್ಪ ಮಟ್ಟಿಗೆ ಜೀರಿಗೆ ಹಾಕಿದರೆ ಅದರಿಂದ ಮಜ್ಜಿಗೆ ರುಚಿ ಮತ್ತಷ್ಟು ಹೆಚ್ಚಾಗುವುದು.

ಕಬ್ಬಿನ ಹಾಲು

ಕಬ್ಬಿನ ಹಾಲು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿದೆ. ಇದು ಒಂದು ರೀತಿಯ ಶಕ್ತಿ ಪೇಯವಾಗಿದೆ ಮತ್ತು ಇದು ಪ್ಲಾಸ್ಮಾ ಮತ್ತು ದೇಹದಲ್ಲಿ ದ್ರವನ್ನು ನಿರ್ಮಾಣ ಮಾಡಲು ನೆರವಾಗುವುದು. ಇದರಿಂದ ನಿರ್ಜಲೀಕರಣ ಮತ್ತು ನಿಶ್ಯಕ್ತಿಯು ಕಡಿಮೆ ಆಗುವುದು. ಇದಕ್ಕೆ ಪುದೀನಾ ಎಲೆಗಳನ್ನು ಹಾಕಿಕೊಂಡು ಕುಡಿದರೆ ಅದರಿಂದ ಇದಕ್ಕೆ ಮತ್ತಷ್ಟು ರುಚಿ ಸಿಗುವುದು.

ಎಳನೀರು

ಒಂದು ಲೋಟ ತಂಪಾಗಿರುವಂತಹ ಎಳ ನೀರು ದೇಹಕ್ಕೆ ಶಕ್ತಿ ಬರುವುದು. ಇದರ ಲಘು ಸಿಹಿತ ಮತ್ತು ತಾಜಾ ರುಚಿಯಿಂದಾಗಿ ಬಿರು ಬೇಸಗೆಯಿಂದ ಹೊರಗೆ ಬರಲು ಇದು ತುಂಬಾ ನೆರವಾಗುವುದು. ಇದರಲ್ಲಿ ಅತ್ಯುತ್ತಮವಾಗಿರುವಂತಹ ವಿದ್ಯುದ್ವಿಚ್ಛೇದಗಳು ಇವೆ. ಇದರಿಂದ ನೀವು ಪ್ರತೀ ಸಲ ಇದನ್ನು ಕುಡಿದರೆ, ಆಗ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯು ನಿವಾರಣೆ ಆಗುವುದು. ನೀವು ಬೇಸಗೆಯಲ್ಲಿ ಸ್ವಲ್ಪ ಮಟ್ಟಿನ ಎಳನೀರನ್ನು ಕುಡಿಯಿರಿ. ಇದರಿಂದ ನಿಮ್ಮ ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *