ಬಿಲ್ ಗೇಟ್ಸ್ ಅವರನ್ನು ಒಬ್ಬರು ಪ್ರಶ್ನಿಸಿದರು “ನಿಮಗಿಂತ ಶ್ರೀಮಂತ ಇರುವರೇ?”.. ಆಗ ಬಿಲ್ ಗೇಟ್ಸ್ ಹೇಳಿದರು…
ವಿಶ್ವದ ಶ್ರೀಮಂತ ವ್ಯಕ್ತಿ ಯಾರು ಎಂದು ಚಿಕ್ಕಾ ಹುಡುಗರನ್ನು ಪ್ರಶ್ನಿಸಿದರು ಸಹ ಅವರಿಂದ ತಕ್ಷಣ ಬರುವ ಉತ್ತರವೇ ಬಿಲ್’ ಗೇಟ್ಸ್’.
ನಿಜ,.ಬಿಲ್ಗೇಟ್ಸ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಈಗ.
ಆದರೆ ಅದೊಂದು ಕಾಲದಲ್ಲಿ ಆತನಿಗೆ ದಿನಪತ್ರಿಕೆ ಕೊಂಡು ಓದುವುದು ಸಹ ಸಾಧ್ಯವಾಗದಷ್ಟು ಹಣದ ತೊಂದರೆ ಇತ್ತು ಎಂದರೆ ನಂಬಲು ಸಾಧ್ಯವೇ?..ಆದರೆ ಇದು ಸತ್ಯ.
ನಿಮಗಿಂತ ಶ್ರೀಮಂತ ವ್ಯಕ್ತಿ ಇರುವರೇ ಎಂದು ಪ್ರಶ್ನಿಸಿದ ಸ್ನೇಹಿತನಿಗೆ ಬಿಲ್ ಗೇಟ್ಸ್ ಉತ್ತರಿಸಿದ ಪರಿ “ಆ”ಇನ್ನೊಬ್ಬ ಶ್ರೀಮಂತನ ಬಗ್ಗೆ ಬಿಲ್ ಗೇಟ್ಸ್ ಅವರಿಗೆ ಇರುವ ಗೌರವ ಹಾಗೂ ಅದನ್ನು ಒಪ್ಪಿಕೊಂಡು ಇಂದೂ ಸಹ ಮನಸಾರೆ ಇದನ್ನು ಹೇಳಿ ಆತನೇ ನನಗಿಂತ ಶ್ರೀಮಂತ ಎನ್ನುವ ಹೃದಯ ವಿಶಾಲತೆ ಇದೆಯಲ್ಲ ಅದೇ ಬಿಲ್ ಗೇಟ್ಸ್ ರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಆ ದಿನಗಳಲ್ಲಿ ಕಂಪನಿಯೊಂದರಲ್ಲಿ ಬಿಲ್ ಗೇಟ್ಸ್ ಕೆಲಸ ಮಾಡುತ್ತಿದ್ದರು.ನ್ಯೂಯಾರ್ಕ್ ನಲ್ಲಿನ ಆ ಕಂಪನಿ ಅವರನ್ನು ಕೆಲಸದಿಂದ ವಜಾ ಮಾಡಿತ್ತು.ಕೆಲ ಸಮಯ ಆಗ ಹೀಗೆ ಅಲ್ಲಿ ಇಲ್ಲಿ ಕಾಲ ಕಳೆಯುವ ಸಂಧರ್ಭ ಅದು.ದಿನಪತ್ರಿಕೆ ಓದುವುದು ಹಾಗೂ ಸುದ್ದಿಗಳ ಹೆಡ್ಡಿಂಗ್ ಬಗ್ಗೆ ಸದಾ ಕುತೂಹಲ ಹೊಂದಿದ್ದ ಅವರು ಪೇಪರ್ ಸ್ಟಾಲ್ ನಲ್ಲಿ ಸ್ಟ್ಯಾಂಡ್ ನಲ್ಲಿ ತೂಗು ಹಾಕಿದ್ದ ಪತ್ರಿಕೆಗಳನ್ನು ನೋಡುತ್ತಾ ನಿಲ್ಲುತಿದ್ದರಂತೆ.ಅವರಿಗೆ ಇರುವ ಆಸಕ್ತಿ ನೋಡಿ ಆ ಸ್ಟಾಲ್ ನ ವ್ಯಕ್ತಿ(ಓರ್ವ ನಿಗ್ರೋ )ಅವರಿಗೆ ಪತ್ರಿಕೆ ಕೊಡಲು ಹೋದನಂತೆ.”ನನ್ನ ಬಳಿ ಹಣ ಇಲ್ಲ,ದಯವಿಟ್ಟು ಬೇಡ”ಎಂದು ವಿನಯವಾಗಿಯೆ ನಿರಾಕರಿಸಿದರು ಸಹ ಆ ನಿಗ್ರೊ ಬಿಡಲಿಲ್ಲ.ಇದನ್ನು ನನ್ನ ಲಾಭದ ಹಣದಲ್ಲಿ ಕೊಡುತ್ತಿದ್ದೇನೆ.ತೊಂದರೆ ಇಲ್ಲ ಇಟ್ಟುಕೊಳ್ಳಿ ಎಂದು ಬಲವಂತವಾಗಿ ಪತ್ರಿಕೆ ಕೊಟ್ಟರು.
ಹದಿನೈದು ದಿನಗಳ ಬಳಿಕ ಇದು ಮತ್ತೆ ಮರುಕಳಿಸಿತು. ಆಗಲು ಸಹ ಆತ ಪತ್ರಿಕೆ ನೀಡಿದ.
ಮುಂದೆ ಬಿಲ್ ಗೇಟ್ಸ್ ಬೃಹತ್ ಸಾಫ್ಟ್ವೇರ್ ಕಂಪನಿಯ ಮಾಲೀಕನಾಗಿ ಸಾಕು,ಸಾಕಾಗುವಷ್ಟು ಹಣ ಗಳಿಸಿದರು.
ಒಮ್ಮೆ ನ್ಯೂಯಾರ್ಕ್ ಗೆ ಬಂದಾಗ ಈ ನೀಗ್ರೋ ನೆನಪಾಗಿ ಆತನನ್ನು ನೋಡಲು ಬಂದರು.ಆತ ಅಲ್ಲಿ ಅದೇ ಸ್ಟಾಲ್ ನಲ್ಲಿ ಇದ್ದ.”ನೀನು ನನ್ನನ್ನು ಗುರುತು ಹಿಡಿಯುವೆಯಾ ಎಂದು ಕೇಳಿದರು ಬಿಲ್ ಗೇಟ್ಸ್.ಆತ ಅಷ್ಟೇ ವಿನಯವಂತಿಕೆ ಹಾಗೂ ದೃಢತೆಯಿಂದ ಉತ್ತರಿಸಿದ”ನೀವು ಬಿಲ್ ಗೇಟ್ಸ್”ಎಂದು.
ನೀನು ನನಗೆ ಪುಕ್ಕಟೆ ಪತ್ರಿಕೆ ಕೊಟ್ಟ ನೆನಪು ಇದೆಯಾ ಎಂದು ಕೇಳಿದ್ದಕ್ಕೆ ಹೌದು ಎಂದು ಖಚಿತ ಧ್ವನಿ ಯಲ್ಲಿ ಹೇಳಿದ.
ನೋಡು ನಂಗೀಗ ಸಾಕಷ್ಟು ಹಣ ಇದೆ.ನೀನು ಕೇಳಿದ ಎಲ್ಲವನ್ನೂ ಕೊಡಬಲ್ಲೆ ಎನ್ನುತ್ತಾ ಏನು ಬೇಕು ಕೇಳು ಎಂದರಂತೆ.ಆಗ ಆ ನೀಗ್ರೋ ,ಕ್ಷಮಿಸಿ ..ಏನು ಬೇಡ.ನನ್ನ ಬಳಿ ಏನೂ ಇಲ್ಲದಾಗ ನನಗೆ ಸಾಧ್ಯವಾದಷ್ಟು ಸಹಾಯ ಮಾಡುವ ಮನಸ್ಸು ಇತ್ತು ಹಾಗೂ ಇದೆ.ಆದರೆ ಉಚಿತವಾಗಿ ಸಿಗುತ್ತದೆ ಎಂದು ನಿಮ್ಮಿಂದ ಪಡೆದರೆ ಅದು ನನ್ನ ವೃತ್ತಿ ಪ್ರೀತಿಯನ್ನು ಮರೆಸಬಹುದು.ನಿಮ್ಮಂತ ದೊಡ್ಡ ಮನುಷ್ಯರ ಪರಿಚಯವೇ ಸಾಕು.. ಬಿಲ್ ಗೇಟ್ಸ್ ಅವರು ನನ್ನನ್ನು ಗುರುತು ಹಿಡಿಯಬಲ್ಲರು ಎಂದು ಹೆಮ್ಮಯಿಂದ ಹೇಳಿಕೊಳ್ಳುವೆ ಎನ್ನುತ್ತಾ ಸಹಾಯ ಹಾಗೂ ಹಣವನ್ನು ನಿರಾಕರಿಸಿದನಂತೆ ಆ ಕರಿಯ ಮನುಷ್ಯ.
ಪ್ರಶ್ನೆ ಕೇಳಿದ ಸ್ನೇಹಿತನಿಗೆ
ಈ ಘಟನೆಯನ್ನು ತಿಳಿಸಿದ ಬಿಲ್ ಗೇಟ್ಸ್ ನನಗೆ ಈಗಲೂ ಅನ್ನಿಸುತ್ತಿದೆ ಆ ಪೇಪರ್ ಸ್ಟಾಲ್ ನ ಕರಿಯ(ನೀಗ್ರೋ)ನನಗಿಂತ ಶ್ರೀಮಂತ ಎಂದು.
ಈ ಘಟನೆಯನ್ನು ಬಿಲ್ ಗೇಟ್ಸ್ ವಿವರಿಸುವಾಗ ಅವರ ಕಣ್ಣಾಲಿಗಳು ಹನಿಗೂಡಿದ್ದವಂತೆ.