ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಸಾವು ಆಕಸ್ಮಿಕವಲ್ಲ,….. ಕೊಲೆ !

ಖ್ಯಾತ ನಟಿ ಶ್ರೀದೇವಿ ನಿಧನರಾಗಿ ಅನೇಕ ತಿಂಗಳುಗಳೇ ಕಳೆದಿವೆ. ಆಗಲೇ ಅವರ ಸಾವಿನ ಸುತ್ತ ಅನುಮಾನದ ಹುತ್ತ ಸುಟ್ಟಿಕೊಂಡಿತ್ತಾದರೂ ಅದನ್ನ ಖಚಿತ ಪಡಿಸುವ ಅಥವಾ ದೃಢ ನಿರ್ಧಾರದಿಂದ ” ಇದು ಕೊಲೆ” ಎಂದು ಹೇಳುವ ಸಾಕ್ಷ್ಯಾಧಾರಗಳು ಇರಲಿಲ್ಲ. ಇರಬಹುದಾಗಿದ್ದರು ಸಹ ಯಾರೊಬ್ಬರೂ ಮುಂದೆ ಬಂದು ಹೇಳಿರಲಿಲ್ಲ. ಆದರೆ ಇದೀಗ ಐ ಪಿ ಎಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತ ಪಡಿಸಿ ಉಹಾ ಪೋಹಾ ಗಳನ್ನು ಜೀವಂತವಾಗಿರಿಸಿದ್ದಾರೆ.

ಬಾಲಿವುಡ್ ನ ಖ್ಯಾತ ಹಿರಿಯ ನಟಿ ಶ್ರೀದೇವಿ ಅವರದು ಸಹಜ ಸಾವಲ್ಲ ಅದೊಂದು ಕೊಲೆ ಎಂದು ಕೇರಳ ಕೇಡರ್ನ ಐಪಿಎಸ್ ಅಧಿಕಾರಿ ರಿಷಿರಾಜ್ ಸಿಂಗ್ ಹೇಳುವ ಮೂಲಕ ಶ್ರೀದೇವಿ ಸಾವಿನ ಪ್ರಕರಣದ ಬಗ್ಗೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ .

ಪತ್ರಿಕೆಯೊಂದರ ಸಂದರ್ಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು ನಟಿ ಸಾವು ಕೊಲೆ ಎಂದು ಸಾಬೀತುಪಡಿಸಲು ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ವಿಧಿ ವಿಜ್ಞಾನ ತಜ್ಞರಾದ ತಮ್ಮ ಸ್ನೇಹಿತ ಉಮಾದತ್ತನ್ ಅವರು ನಟಿ ಶ್ರೀದೇವಿ ಅವರು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ ಅವರು ಕೊಲೆಯಾಗಿರುವ ಸಾಧ್ಯತೆಗಳಿವೆ ಎಂದು ಕೊಲೆಯಾದ ಜಾಗದ ಸುತ್ತಮುತ್ತಲಿನ ಸಾಕ್ಷಿಗಳ ಬಗ್ಗೆ ಮಾತನಾಡಿದ್ದರು. ಎಂದು ರಿಷಿರಾಜ್ ತಿಳಿಸಿದ್ದಾರೆ .ಶ್ರೀದೇವಿ ಅವರ ಶವ ಪರೀಕ್ಷೆ ನಡೆಸಿದ್ದ ತನ್ನ ಸ್ನೇಹಿತ ದಿವಂಗತ ಡಾ ಉಮಾದತ್ತನ್ ಯಾವುದೇ ವ್ಯಕ್ತಿಯು ಒಂದು ಅಡಿ ಆಳದಲ್ಲಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಶ್ರೀದೇವಿ ಅವರು ಫೆಬ್ರವರಿ 24 ರಂದು ದುಬೈನ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ, ಆದರೆ ಅವರ ಸಾವು ಅಪಘಾತ ಎಂದು ವರದಿ ಮಾಡಲಾಗಿದೆಯಷ್ಟೆ ಎಂದಿದ್ದರು.

ಪಾನಮತ್ತರಾದವರು ಯಾರೇ ಆದರು ಬಾತ್ ಟಬ್ ನಲ್ಲಿ ಒಂದು ಅಡಿ ಆಳದಲ್ಲಿ ಮುಳುಗಲು ಸಾಧ್ಯವಿಲ್ಲ. ಬಾಹ್ಯ ದಬ್ಬಿಕೆ ಇಲ್ಲದೆ ಯಾರೂ ಕೂಡ ಬಾತ್ ಟಬ್ನಲ್ಲಿ ಮುಳುಗುವುದು ಅಸಾಧ್ಯ ಎಂದು ಉಮಾದತ್ತನ್ ತಿಳಿಸಿದ್ದ ಎಂದು ಅವರು ಹೇಳಿದ್ದಾರೆ. ಸ್ನೇಹಿತ ಉಮಾದತ್ತನ್ ನಟಿ ಸಾವಿನ ಬಗ್ಗೆ ಪ್ರಸ್ತಾಪಿಸಿ ಶ್ರೀದೇವಿ ಸಾವು ಆಕಸ್ಮಿಕವಲ್ಲ ಎಂದು ಸಾಬೀತುಪಡಿಸಲು ಹಲವಾರು ಸಾಂದರ್ಭಿಕ ಪುರಾವೆಗಳನ್ನು ತೋರಿಸಿದ್ದರು ಎಂದು ರಿಷಿ ರಾಜ್ ಹೇಳಿಕೊಂಡಿದ್ದಾರೆ.

ನಟಿ ಸಾವಿನ ಪ್ರಕರಣದ ಬಗ್ಗೆ ಹಲವಾರು ಮಂದಿ ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದು ನಿವೃತ್ತ ಎಸಿಪಿ ಕೂಡ ಕೊಲೆ ಸಾಧ್ಯತೆಯನ್ನು ಎತ್ತಿ ಹಿಡಿದಿದ್ದರು. ದೆಹಲಿಯ ನಿವೃತ್ತ ಎಸಿಪಿ ಭೂಷಣ್ ಶರ್ಮಾ ಕೂಡ ನಟಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಖಾಸಗಿ ತನಿಖೆ ಏಜೆನ್ಸಿ ಹೊಂದಿರುವ ಭೂಷಣ್ ಅವರಿಗೆ ಶ್ರೀದೇವಿ ಅವರ ಕೊಠಡಿಯನ್ನು ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಇದರಿಂದ ನಟಿ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು ಎಂದು ಭೂಷಣ್ ಕೂಡ ಕೊಲೆ ಶಂಕೆ ವ್ಯಕ್ತಪಡಿಸಿದ್ದರು .

Leave a Reply

Your email address will not be published. Required fields are marked *