ಬಹುದಿನಗಳ ನಿರೀಕ್ಷೆಯ ಆ ಶನಿವಾರ ಬಂದೇ ಬಿಟ್ಟಿತು

ಅಂದು ಶನಿವಾರ ಬಂದೆ ಬಿಟ್ಟಿತು. ಅದೆಷ್ಟೋ ತಿಂಗಳುಗಳಿಂದ ಆ ದಿವಸಕ್ಕಾಗಿ ಬಹಳಷ್ಟು ಕಾತುರದಿಂದ ಕಾದಿದ್ದೆವು. ಅದು ಜನಮಿಡಿತ ಪತ್ರಿಕೆಯ ದ್ವಿದಶಮಾನೋತ್ಸವ ಕಾರ್ಯಕ್ರಮ. ರಾಜ್ಯದೆಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಸಂಚರಿಸುತ್ತಿರುವ ಯಾವ ಪತ್ರಿಕೆಯು ಮಾಡದ ಅದ್ಬುತ ಕಾರ್ಯಕ್ರಮವೊಂದನ್ನು ಜಿಲ್ಲಾ ಮಟ್ಟದ ಪತ್ರಿಕೆಯೊಂದು ನಡೆಸಿದ್ದು ನನ್ನ ಅರಿವಿಗೆ ಬಂದಂತೆ


ಇದೆ ಮೊದಲಬಾರಿ. ಕಾರ್ಯಕ್ರಮ ಶುರುವಾಗುವ ಮುನ್ನ ನಡೆದ ಚರ್ಚಾಸ್ಪರ್ಧೆ ಎಲ್ಲ ಗಣ್ಯಾತಿಗಣ್ಯರು ಮೆಚ್ಚುವಂತ ವಿಷಯ ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ನಿವೃತ್ತಿ ಬೇಕೆ ಅಥವಾ ಬೇಡವೇ ಎಂಬುದು ಹೆಚ್ಚು ಗಮನ ಸೆಳೆದ ವಿಷಯವಾಗಿತ್ತು. ಒಬ್ಬ ಪತ್ರಕರ್ತನ ದಿಟ್ಟತನ ಈ ಒಂದು ವಿಷಯವನ್ನು ಚರ್ಚೆಗೆ ಆಯ್ಕೆ ಮಾಡುವುದರ ಮೂಲಕ ತೋರಿದ್ದರು.

ಸಮಾರಂಭದಲ್ಲಿ ಭಾಗಿಯಾಗಿದ್ದ ಜನಸಾಗರ ಅವರ ಚತುರತೆಗೆ ಚಪ್ಪಾಳೆಯ ಮೂಲಕ ಬೆನ್ನು ತಟ್ಟಿ ಭೇಷ್ ಅಂದಿತ್ತು. ರಾಜಕಾರಣಿಗಳ ಸಮ್ಮುಖದಲ್ಲೇ ಅವರ ಪರ ಮತ್ತು ವಿರೋಧವನ್ನು ವ್ಯಕ್ತಪಡಿಸುವ ಗಟ್ಟಿತನವನ್ನು ಸ್ಪರ್ಧಿಗಳಿಂದ ಕೆದಕಿದ್ದರು. ಸಂಪಾದಕರಾದ ಶ್ರೀ ಜಿ. ಎಮ್. ಆರ್. ಆರಾಧ್ಯರವರು ಶಿಕ್ಷಕರಾಗಿದ್ದ ತಮ್ಮ ತಂದೆಯವರ ಸ್ಮರಣಾರ್ಥವಾಗಿ ಶಿಕ್ಷಣ ಕ್ಷೇತ್ರವು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ನಾಡು ಕಂಡ ಅತ್ಯಂತ ಪ್ರಾಮಾಣಿಕ ಹಾಗು ದಕ್ಷ ವ್ಯಕ್ತಿ, ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರಿಂದ ಸನ್ಮಾನಿಸಿ ಅವರ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸಿದ್ದು ನಿಜಕ್ಕೂ ಸ್ಮರಣೀಯ.

ಇನ್ನು ದಾವಣಗೆರೆಯ ಯುವಕವಿಗಳನ್ನ ಹಾಗು ಯುವ ಗಾಯಕರನ್ನು ಪ್ರೋತ್ಸಾಯಿಸಿ ಅವರ ಕಲೆಗೆ ತಕ್ಕ ಸ್ಥಾನಮಾನವನ್ನು ನೀಡುವಲ್ಲಿ ಅವರು ಆಯೋಜಿಸಿದ ಸುಗಮ ಸಂಗೀತ ಕಾರ್ಯಕ್ರಮಕ್ಕೆ ನಿಜಕ್ಕೂ ಸಾಹಿತಿಗಳು ಮತ್ತು ಗಾಯಕರು ಅವರಿಗೆ ಅನಂತ ಅನಂತ ಧನ್ಯವಾದಗಳನ್ನು ಹೇಳುವುದರೊಂದಿಗೆ ಅವರಿಗೆ ಋಣಿಯಾಗಿರುವಂತದ್ದು. ಗಾನಕೋಗಿಲೆ, ನಾಡೋಜ ಶ್ರೀಮತಿ ಬಿ. ಕೆ. ಸುಮಿತ್ರಾ ಅವರನ್ನು ಈ ವೇದಿಕೆಗೆ ಕರೆತಂದು ಕಾರ್ಯಕ್ರಮಕ್ಕೆ ರಂಗು ತುಂಬಿದ್ದರು. ಅವರ ಸಮ್ಮುಖದಲ್ಲಿ ನಮ್ಮ ಕವಿತೆಗಳಿಗೆ ರಾಗ ಸoಯೋಜಿಸಿ ಇನಿದನಿಯಲ್ಲಿ ಹಾಡಿದ ಎಲ್ಲ ಗಾಯಕ, ಗಾಯಕಿಯರಿಗೂ ಮನ ತುಂಬಿ ಬಂದಿತ್ತು.

ಇಂತಹ ಒಂದು ಸುಂದರ ವೇದಿಕೆಯನ್ನು ಕಲ್ಪಿಸಿಕೊಟ್ಟ ಆರಾಧ್ಯ ಸರ್ ಅವರಿಗೆ ಹೃದಯದಿಂದ ನಮಿಸಿದರು. ಹೆಮ್ಮೆಯ ಪತ್ರಕರ್ತರು, ಸರಳ ಸಜ್ಜನಿಕೆಯ, ಸೃಜನಶೀಲ ವ್ಯಕ್ತಿತ್ವದ ಸಂಪಾದಕರು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ತಮ್ಮ ಕಾಳಜಿ ಕಳಕಳಿಯನ್ನು ತೋರಿದ್ದರು. ಅವರ ಈ ನಿಸ್ವಾರ್ಥ ಸೇವೆಗೆ ಜೊತೆಯಾದ ಪತ್ನಿ ಶ್ರೀಮತಿ ಪವಿತ್ರಾರಾಧ್ಯ ಅವರ ಸಹಕಾರ ನಿಜಕ್ಕೂ ಅಭಿನಂದನೀಯ,ಹಾಗು ಮಕ್ಕಳು ಮಾತಾಪಿತೃಗಳನ್ನು ಅನುಸರಿಸಿದ ರೀತಿ ಶ್ಲಾಘನೀಯ. ಜಿಲ್ಲಾ ಮಟ್ಟದ ಪತ್ರಿಕೆಯೊಂದು ಸಾಮಾಜಿಕ ಕಳಕಳಿಯ ಇಂತಹ ಅದ್ಬುತ ವೇದಿಕೆಯನ್ನು ನಿರ್ಮಿಸಿ ಸಾಹಿತಿಗಳಿಗೆ, ಗಾಯಕರಿಗೆ ಪ್ರೋತ್ಸಾಹ ನೀಡಿರುವುದು ಅತ್ಯಂತ ಗಮನಾರ್ಹ. ತನ್ನ ಲೇಖನಿಯಿಂದ ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ಗುರುತಿಸಿಕೊಂಡಿರುವ ಅವರು ನಿಜಕ್ಕೂ ಅತ್ಯಂತ ಸರಳ ವ್ಯಕ್ತಿ. ಒಬ್ಬ ಗುರುವಾಗಿ, ಮಾರ್ಗದರ್ಶಕರಾಗಿ ನಮ್ಮನ್ನ ಬೆಳಕಿನೆಡೆ ಕರೆದೊಯ್ಯುತ್ತಿರುವ ಅವರ ಕಾರ್ಯವೈಖರಿಗೆ ಶಿರಬಾಗಿ ವಂದಿಸುವೆವು. ಅವರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯವೆಂದೇ ಭಾವಿಸಿರುವೆ.ಅವರ ನೇತೃತ್ವದಲ್ಲಿ ಇನ್ನು ಹಲವಾರು ವೇದಿಕೆಗಳು ರೂಪುಗೊಳ್ಳಲಿ ಸುಪ್ತ ಪ್ರತಿಭೆಗಳು ಹೊರಹೊಮ್ಮಲಿ ಎಂದು ಆಶಿಸುತ್ತಾ, ಅವರ ಪತ್ರಿಕೆ ಜಿಲ್ಲೆಯಿಂದ ರಾಜ್ಯದೆಡೆ ಸಾಗಲಿ ಎಂದು ಪ್ರಾರ್ಥಿಸುತ್ತೇನೆ. ಜನಮಿಡಿತ ತನ್ನ ದ್ವಿದಶಮಾನೋತ್ಸವವನು ಆಚರಿಸುವುದರ ಜೊತೆಗೆ ನಮ್ಮ ಕವಿತೆಗಳು ಗೀತೆಗಳಾಗಿ ಜನಮಾನಸದಲ್ಲಿ ನೆಲೆಸುವಂತೆ ಮಾಡಿದೆ. ಪತ್ರಿಕೆಗೆ ಮತ್ತು ಸಂಪಾದಕರಿಗೆ ನಾನು ಆಭಾರಿಯಾಗಿದ್ದೇನೆ. ಇಂತಹ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಮ್ಮೆಯನು ನೀಡಿದ ಖ್ಯಾತ ಪತ್ರಕರ್ತರು, ನೇರ ನುಡಿಯಿಂದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀ ಜಿ. ಎಮ್. ಆರ್. ಆರಾಧ್ಯ ಸರ್ ಅವರಿಗೆ ನನ್ನ ಹೃದಯಸ್ಪರ್ಶಿ ಪ್ರಣಾಮಗಳು.

ಶ್ರೀಮತಿ ಸುನಿತಾಪ್ರಕಾಶ್
ಅಂಕಣಕಾರ್ತಿ , ಜನಮಿಡಿತ

Leave a Reply

Your email address will not be published. Required fields are marked *