ಪ್ರಿಯಾಂಕ ರೆಡ್ಡಿಗೆ ಅನ್ಯಾಯವಾದ ಸ್ಥಳದಲ್ಲೇ.. ಸಿಕ್ಕಿತು ನ್ಯಾಯ

ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನ್ ಅವರ ನೇತೃತ್ವದ ತಂಡ ಇಂದು 3:30 ಸುಮಾರಿಗೆ ಅತ್ಯಾಚಾರ ಹಾಗೂ ಕೊಲೆಗೀಡಾದ ಪ್ರಿಯಾಂಕ ರೆಡ್ಡಿ ಆತ್ಮಕ್ಕೆ ಶಾಂತಿ ದೊರೆಯುವ ಕೆಲಸ ಮಾಡಿದೆ.

ಪ್ರಿಯಾಂಕಾ ರೆಡ್ಡಿ ಅವರ ಮೇಲೆ ವಾರದ ಕೆಳಗೆ ನಡೆದ ಪೈಶಾಚಿಕ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ಘಟನೆಯ ಆರೋಪಿಗಳಾದ ಶರೀಫ್, ಶಿವ ,ಚೆನ್ನಕೇಶವುಲು, ಹಾಗೂ ನವೀನ್ ಎಂಬುವರನ್ನು ನಾಲ್ಕು ದಿನಗಳ ಕೆಳಗೆ ಬಂಧಿಸಿದ್ದ ಪೊಲೀಸರು , ಇಂದು ಬೆಳಗಿನ ಜಾವ ಅವರುಗಳನ್ನು ಘಟನೆ ನಡೆದ ಸ್ಥಳಕ್ಕೆ ಮಹಜರಿಗಾಗಿ ಕರೆದೊಯ್ದ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಹಾಗೂ ಪೊಲೀಸರ ಮೇಲೆ ಕಲ್ಲು ತೂರಲು ಆರಂಭಿಸಿದರು. ಆಗ ಅನಿವಾರ್ಯವಾಗಿ ನಾಲ್ವರ ಮೇಲೂ ಪೊಲೀಸರು ಗುಂಡು ಹಾರಿಸಿದರು.
ಹತ್ಯೆ ನಡೆದ ಸ್ಥಳದಲ್ಲಿಯೇ ನಾಲ್ವರ ಹೆಣಗಳು ಉರುಳಿದ್ದು, ಕಾಕತಾಳಿಯ ಎಂಬಂತೆ ಪ್ರಿಯಾಂಕ ಅವರ ಆತ್ಮಕ್ಕೆ ಶಾಂತಿ ದೊರೆತಿದೆ.

ಶಾದ್ ನಗರದ ಚಟಾನ್ ಸೇತುವೆಯ ಬಳಿ (NH 44 ) ಘಟನೆ ನಡೆದಿದ್ದು, ನಾಲ್ವರು ಆರೋಪಿಗಳ ಈ ಎನ್ ಕೌಂಟರ್ ಗೆ ದೇಶದಾದ್ಯಂತ ಪೊಲೀಸರನ್ನು ಪ್ರಶಂಶಿಸಲಾಗಿದೆ.

well_done_sir…! 🙏🙏🙏

ಕರ್ನಾಟಕದ ಹುಬ್ಬಳ್ಳಿ ಮೂಲದ ಐಪಿಎಸ್ ಅಧಿಕಾರಿ, ಪ್ರಸ್ತುತ ಸೈಬರಾಬಾದ್ ಪೋಲಿಸ್ ಕಮಿಷನರ್ ವಿಸಿ ಸಜ್ಜನರ್ ರವರ ನೇತೃತ್ವದ ಪೋಲಿಸ್ ತಂಡ ದೇಶದ ಜನಮನದ ಭಾವನೆಯಂತೆ ನಾಲ್ವರು ಅತ್ಯಾಚಾರಿ, ಅಮಾನುಷ ರಾಕ್ಷಸರನ್ನು ನಟ್ಟ ನಡುರಸ್ತೆಯಲ್ಲಿ ಹೊಡೆದು ಹಾಕಿದೆ. ದಶಕಗಳ ಹಿಂದೆ ಇಬ್ಬರು ಇಂಜಿನಿಯರಿಂಗ್ ವಿಧ್ಯಾರ್ಥಿನಿಯರ ಅಸಿಡ್ ದಾಳಿ ಮಾಡಿದ್ದ ಮೂವರು ವಿಕೃತರ ಎನ್‌ಕೌಂಟರ್ ಮೂಲಕ ನೊಂದವರಿಗೆ ನ್ಯಾಯ ಒದಗಿಸಿದ್ದ ಪೋಲಿಸ್ ತಂಡದ ನೇತೃತ್ವವನ್ನು ವಿ.ಸಿ ಸಜ್ಜನರ್ ವಹಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸದೆ ಇರಲಾರದು. ಇಂತಹ ನಮ್ಮ ಹೆಮ್ಮೆಯ ಅಧಿಕಾರಿಗಳ ಸಂಖ್ಯೆ ಸಾವಿರವಾಗಲಿ. ದೇಶದಲ್ಲಿ ಶಾಂತಿ, ಸುಭದ್ರತೆ ಸಮೃದ್ಧವಾಗಿರಲಿ.

Leave a Reply

Your email address will not be published. Required fields are marked *