ಪೋಲೀಸ್ ಮೆಟ್ಟಿಲೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ..!ತಿಳಿಯಲು ಈ ಲೇಖನ ಓದಿ…

ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೋ, ಅಷ್ಟು ಅಪಾಯ ಕೂಡ ಇದೆ. ಹೀಗಾಗಿಯೇ ಕೆಲವು ಕಿಡಿಗೇಡಿಗಳು ಕೆಲವು ಸೆಲೆಬ್ರೆಟಿಗಳ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಫೇಕ್ ಖಾತೆಗಳನ್ನು ತೆಗೆದು, ಅವರ ಹೆಸರಿಗೆ ಮಸಿ ಬೆಳೆಯುವುದಲ್ಲದೆ, ಅವರಿಗೆ ಹಲವು ರೀತಿಯ ಕಿರುಕುಳವನ್ನು ಕೊಟ್ಟಿರುವ ಹಲವಾರು ಉದಾಹರಣೆಗಳಿವೆ.

ಇದೇ ರೀತಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ರವರಿಗೆ ಕೆಲವು ಕಿಡಿಗೇಡಿಗಳು   ಫೇಸ್ ಬುಕ್ ನಲ್ಲಿ ಕಿರುಕುಳ ನೀಡಿರುವ ಘಟನೆಯೊಂದು ನಡೆದಿದೆ.

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿ ತಮ್ಮ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮತ್ತು ಅವರ ಕುಟುಂಬದವರ ಚಿತ್ರ ಬಳಸಿ ಫೇಸ್ ಬುಕ್ ನಲ್ಲಿ ಕೀಳುಮಟ್ಟದ ಪದ ಬಳಕೆ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.

ಕಿರುಳುಕಳ ಕೊಡುತ್ತಿರುವ ಆರೋಪಿಯು ದರ್ಶನ್ ಮತ್ತು ನಾನು ಯಾರುವ ಫೋಟೋವೊಂದರಲ್ಲಿ, ದರ್ಶನ್ ಜಾಗದಲ್ಲಿ ತನ್ನ ಫೋಟೋ ಹಾಕಿಕೊಂಡು ಆರೋಪಿ ಆಕೆ ನನ್ನ ಪತ್ನಿ, ಮೈ ವೈಫ್ ಎಂದು ಬರೆದುಕೊಂಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದು, ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *