ಪಾಪಿ ಪಾಕಿಸ್ತಾನ…..”ಜಿಹಾದಿ” ಎಂಬ “ಸೈತಾನ”

ರಾಷ್ಟ್ರವೊಂದರೊಳಗೆ ಇರಬಹುದಾದ ವಿದ್ವಂಸಕರನ್ನು ಮಾತ್ರ ಹುಡುಕಿ ಶಿಕ್ಷಿಸುವುದು ಕಷ್ಟಸಾಧ್ಯವೇನೂ ಅಲ್ಲ. ಆದರೆ ರಾಷ್ಟ್ರಕ್ಕೆ ರಾಷ್ಟ್ರವೇ
ನರರೂಪದ ರಾಕ್ಷಸರನ್ನು ಉತ್ಪಾದಿಸುವ ಕಾರ್ಖಾನೆಗಳಾದರೆ…?

ನಾನೂ ಹಾಗೆ ಅಂದುಕೊಂಡಿದ್ದೆ. ಪಾಕಿಸ್ತಾನದಂತಹ ಪುಟ್ಟ ದೇಶದೊಳಗೆ ಮುಗ್ಧರೂ ಹಾಗೂ ಅಮಾಯಕರ ಸಂಖ್ಯೆಯೂ ಹೆಚ್ಚು ಇರಬೇಕು ಎಂದು. ಎಷ್ಟೋ ಬಾರಿ ಇಡೀ ಪಾಕಿಸ್ತಾನವನ್ನೇ ಅಥವಾ ಆಫ್ಘಾನಿಸ್ತಾನವನ್ನೇ ಭಯೋತ್ಪಾದಕ ರಾಷ್ಟ್ರ ಎಂದು ಇತರರು ಟೀಕಿಸಿದಾಗ ನಾನು ಅವರೊಂದಿಗೆ ವಾದಕ್ಕೆ ಬಿದ್ದಿದ್ದೆ. ಊರೆಂದ ಮೇಲೆ ಹೊಲಗೇರಿ ಇರುವ ಹಾಗೆ ರಾಷ್ಟ್ರವೆಂದ ಮೇಲೆ ರಾಷ್ಟ್ರವೆಂದು ದೂಷಿಸಲಾದೀತೆ? ಅಲ್ಲಿರುವವರೂ ಮನುಷ್ಯರೇ ಅಲ್ಲವೇ ? ಎಲ್ಲರೂ ಹಿಂಸೆಯನ್ನು ಪ್ರೀತಿಸುವವರಲ್ಲ ಎಂದು ಅವರೊಂದಿಗೆ ಚರ್ಚೆಗೆ ತೊಡಗುತ್ತಿದ್ದೆ. ಆದರೆ ದಿನಗಳೆದಂತೆ ಈ ವಿಷಯದಲ್ಲಿ ನನ್ನ ಅನ್ನಿಸಿಕೆ ಹಾಗೂ ಅಭಿಪ್ರಾಯಗಳು ಶೇಕಡ 90ರಷ್ಟು ಸುಳ್ಳು ಎಂಬುದು ಅರಿವಾಗತೊಡಗಿತು.

ಹಿಂಸೆಯನ್ನು ಪ್ರೀತಿಸುವ, ಅರ್ಥವೇ ಇಲ್ಲದ, ತಳಬುಡವೇ ತಿಳಿಯದ “ಜಿಹಾದಿ” ಎಂಬ ಅಸಂಬದ್ಧ ಘೋಷಣೆಯೊಂದಿಗೆ ಜೀವಗಳ ಜೊತೆ ಚೆಲ್ಲಾಟವಾಡುತ್ತಾ ಪೈಶಾಚಿಕ ಕೃತ್ಯ ಎಸಗುವ ಉಗ್ರಗಾಮಿಗಳ ಹುಟ್ಟಡಗಿಸದೆ ಎಷ್ಟೋ ಸಲ ಪರೋಕ್ಷವಾಗಿಯೇ ಅವರುಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನವನ್ನು ವಿಶ್ವದ ಪರಂಪರೆಯಿಂದಲೇ ಬೇರ್ಪಡಿಸಬೇಕು ಎಂಬ ಕೋಟಿಕೋಟಿ ಜನರ ಧ್ವನಿಗೆ ಇಂದು ನನ್ನದೂ ಹಾಗೂ ನನ್ನಂತಹ ಮತ್ತಷ್ಟು ಕೋಟಿ ಕೋಟಿ ಮಂದಿಯ ಧ್ವನಿಯೂ ಸೇರಿದೆ. ಉಗ್ರಗಾಮಿಗಳು ಮಗ್ಗುಲ ಮುಳ್ಳು ಎಂಬ ಸತ್ಯ ಅರಿತಿದ್ದರೂ, ಇವರುಗಳ ತಾಣಗಳು ಹಾಗೂ ತರಬೇತಿ ಶಿಬಿರಗಳ ಕುರಿತು ನೂರಕ್ಕೆ ನೂರರಷ್ಟು ಮಾಹಿತಿ ಇದ್ದರೂ ಮುಚ್ಚಿಕೊಂಡು ಕುಳಿತಿರುವ ಪಾಪಿ ಪಾಕಿಸ್ತಾನಕ್ಕೆ ಇನ್ನು ಯಾವುದೇ ರೀತಿಯ ಕ್ಷಮೆಯೂ ಬೇಡ.

ತಿನ್ನಲು ಅನ್ನವಿಲ್ಲದಿದ್ದರೂ, ಇಂತಹ ಭಯೋತ್ಪಾದಕ ಕೃತ್ಯಗಳಿಂದ ಯಾರಿಗೂ ಒಳಿತಲ್ಲ ಎಂಬುದರ ಅರಿವಿದ್ದರೂ “ಮಾನವ ಬಾಂಬ್” ಆಗಲು ಒಪ್ಪುವ ಹರೆಯದ ಮಂದಿಯ ಮನಸ್ಸನ್ನು ದುರುಳರು ಅದೆಷ್ಟರ ಮಟ್ಟಿಗೆ ಗಟ್ಟಿಗೊಳಿಸಿ ಅಣಿಗೊಳಿಸುತ್ತಾರೋ ಎಂಬುದು ಪರಮಾಶ್ಚರ್ಯ.
“ಕಾಲು ಭಾಗದಷ್ಟು ಭಾರತೀಯರು ಒಮ್ಮೆ ಒಟ್ಟಾಗಿ ನಿಂತು ಉಚ್ಚೆ ಹೊಯ್ದರೆ ಪಾಕಿಸ್ತಾನವೆಂಬುದು ಕಣ್ಣಿಗೆ ಕಾಣದಂತೆ ಕೊಚ್ಚಿ ಹೋಗುತ್ತದೆ” ಎಂದು ನಾನು ಬಿಜಾಪುರದಲ್ಲಿದ್ದಾಗ ಇಂಡಿ ತಾಲ್ಲೂಕಿನ ಹುತಾತ್ಮ ಸೈನಿಕನೊಬ್ಬನ ಸಹೋದರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತು ಇನ್ನೂ ನೆನಪಿದೆ.
ಹೀಗಿರುವಾಗ ಮತ್ತೆ ತಡ ಮಾಡುವುದು ಬೇಡ. ಪದೇ ಪದೇ ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿ ಸಹೋದರತ್ವ ಬೆಳೆಸಲು ಭಾರತ ಕೈಗೊಂಡ ಕ್ರಮಗಳು ಒಂದೆರಡಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ಇಂದಿನ ನರೇಂದ್ರ ಮೋದಿಯವರ ತನಕ ಈ ಪ್ರಯತ್ನಗಳು ನಡೆದೇ ನಡೆದವು. ಆದರೆ ತಿದ್ದಿಕೊಳ್ಳುವ ಮನೋಭಾವ ಪಾಕ್‍ಗೆ ಇದ್ದಂತಿಲ್ಲ. “ಮಾನವೀಯತೆ” ಎಂದರೆ ಏನು? ಹಾಗೂ “ಜೀವ”ಗಳ ಬೆಲೆಯೇನು ಎಂಬುದನ್ನೇ ಅರಿಯದ ಪಾಕಿಸ್ತಾನ ಇನ್ನು ಕ್ಷಮೆಗೆ ಎಂದೂ ಅರ್ಹರಲ್ಲ.

ನನ್ನ ಕಾಡುತ್ತಿದ್ದ ಪ್ರಶ್ನೆ ಇಡೀ ಪಾಕಿಸ್ತಾನವನ್ನೇ ಭಯೋತ್ಪಾದಕ ಘಟನೆಗಳಿಗೆ ಕಾರಣ ಮಾಡಬೇಕೇ? ಅಥವಾ ಬೇಡವೇ? ಎಂಬುದು. ಆದರೆ ಇಂದು ಯಾವುದೇ ಅನುಮಾನ ಉಳಿದಿಲ್ಲ. ಸ್ಪಷ್ಟವಾಗಿದೆ ಅದು ಭಯೋತ್ಪಾದಕರನ್ನು ಉತ್ಪಾದಿಸುವ ಕಾರ್ಖಾನೆಯೆಂದು.
ಅಪರಾಧಿಗಳಿಗೆ ರಕ್ಷಣೆ ಕೊಡುವುದು ಮಹಾ ಅಪರಾಧ ಎಂದಾದಲ್ಲಿ ಆ ಭಗವಂತನೂ ಕ್ಷಮಿಸಲಾರದ ಕುಕೃತ್ಯಗಳನ್ನು ಎಸಗುತ್ತಿರುವ ನರರಾಕ್ಷಸರುಗಳಿಗೆ ನೆಲೆಯೊದಗಿಸಿರುವ ಪಾಕಿಸ್ತಾನದ್ದೂ ಮಹಾ ಅಪರಾಧ ತಾನೇ? ವಿಶ್ವ ಸಮುದಾಯ ಆ ರಾಷ್ಟ್ರಕ್ಕಿನ್ನು ಬಹಿಷ್ಕಾರ ಹಾಕಬೇಕಿದೆ. ವಿಶ್ವದ ಇತರ ರಾಷ್ಟ್ರಗಳ ಸಂಪರ್ಕ ಈ ದೇಶಕ್ಕೆ ಇಲ್ಲದಂತೆ ಮಾಡಬೇಕಿದೆ. ಹಿರಿಯಣ್ಣ ಅಮೇರಿಕ ತನ್ನ ಇಬ್ಬಗೆಯ ಧೋರಣೆಯನ್ನು ನಿಲ್ಲಿಸಬೇಕಿದೆ. ಸತ್ಯ, ನಿಷ್ಠೆ ಹಾಗೂ ಧರ್ಮದ ರಾಷ್ಟ್ರಕ್ಕೆ ಯಾವುದೇ ಷರತ್ತುಗಳೂ ಇಲ್ಲದೆ ಸಂಪೂರ್ಣ ಬೆಂಬಲ ನೀಡಿ ಪಾಕಿಸ್ತಾನವೂ ಸೇರಿದಂತೆ ಇನ್ನಿತರ ಭಯೋತ್ಪಾದಕ ರಾಷ್ಟ್ರಗಳ ಹುಟ್ಟಡಗಿಸಬೇಕಿದೆ. ಹೆಸರಿಗಷ್ಟೇ ವಿಶ್ವಸಂಸ್ಥೆ ಇದ್ದರೆ ಸಾಲದು. ಇಂಥ ಸಂದರ್ಭಗಳಲ್ಲಿ ಅದು ನಿರ್ವೀರ್ಯವಾಗಿ ವರ್ತಿಸಬಾರದು. ತನ್ನ ಪರಮಾಧಿಕಾರವನ್ನು ಚಲಾಯಿಸಲು ಇದಕ್ಕಿಂತಲೂ ಅವಕಾಶ ವಿಶ್ವಸಂಸ್ಥೆಗೆ ಬೇಕೆ?
ಪಕ್ಷಾತೀತವಾಗಿ ನಿನ್ನೆಯ ಘಟನೆಯನ್ನು ಎಲ್ಲರೂ ಖಂಡಿಸಿದ್ದಾರೇನೋ ಸರಿ. ಆದರೆ, ಇಂತಹ ಕೃತ್ಯಗಳಿಗೆ ನೀರೆರೆಯುತ್ತಾ ಬಂದಿರುವ ಕೆಲ ರಾಜಕೀಯ ಪಕ್ಷಗಳ ಬಗ್ಗೆ ಬರೆಯಲು ಇದು ಸಮಯವಲ್ಲ. ಜಾತಿ ಪಂಥಗಳ ಹೆಸರಲ್ಲಿ ಓಟ್‍ಬ್ಯಾಂಕ್ ಮಾಡಿಕೊಂಡು ರೇಷನ್ ಕಾರ್ಡ್ ಹಾಗೂ ಓಟರ್ ಐಡಿ ತನಕ ಬಹುದೊಡ್ಡ ಸಾಲುಗಳಲ್ಲಿ ನಿಲ್ಲುವ ಮಂದಿಗೆ ಆದ್ಯತೆ ನೀಡುತ್ತಾ ಕೇವಲ ಅಧಿಕಾರ ದಾಹಕ್ಕೆ ಒಂದು ಸಮುದಾಯವನ್ನು ಬೆಂಬಲಿಸುತ್ತಿರುವ ಪಕ್ಷಗಳ ಗೋಮುಖ ವ್ಯಾಘ್ರತನವನ್ನು ಮೊದಲು ಭಾರತೀಯರಿಗೆ ಅರ್ಥ ಮಾಡಿಸಬೇಕಿದೆ. ದೇಶ ವಿಭಜನೆಯ ಸಂದರ್ಭದ ಘಟನೆಗಳನ್ನು ಈಗಿನ ಯುವ ಜನಾಂಗಕ್ಕೆ ವಿವರಿಸಿ. ಅಂದಿನ ತಪ್ಪುಗಳನ್ನು ಹೇಗೆ ಸರಿಪಡಿಸಬಹುದು ಎಂಬ ಕುರಿತು ಮಾರ್ಗಗಳನ್ನು ಹುಡುಕಲು ಅವರನ್ನು ತೊಡಗಿಸಬೇಕಿದೆ. ಒಂದು ವೇಳೆ ಇಂದಿನ ಕಾನೂನುಗಳು, ಆದ್ಯತೆಗಳು ಮುಂದುವರೆದದ್ದೇ ಆದಲ್ಲಿ ಭಾರತ ಭವಿಷ್ಯದಲ್ಲಿ ವಿದ್ವಂಸಕರ ಕಪಿಮುಷ್ಟಿಗೆ ಸಿಲುಕಿ ಭಾರತೀಯರು ಅಲ್ಪಸಂಖ್ಯಾತರಾಗಬೇಕಾದ ಸಂದರ್ಭ ಅಲ್ಲಗಳೆಯುವಂತಿಲ್ಲ.

ಸಾಕು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಟ್ಟಕಡೆಯ ಅವಕಾಶವನ್ನು ಪಾಕಿಸ್ತಾನಕ್ಕೆ ಅಂದರೆ ಅಲ್ಲಿರಬಹುದಾದ ಬೆರಳೆಣಿಕೆಯಷ್ಟು ಮಂದಿ ಸಜ್ಜನ ರಾಜಕಾರಣಿಗಳಿಗೆ ನೀಡಿ ಅವರಿಗೊಂದು ಗಡುವು ಕೊಡಿ. ಅವರಾಗಿಯೇ ಉಗ್ರಗಾಮಿಗಳ ರಾಶಿ ರಾಶಿ ಹೆಣಗಳನ್ನು ತಂದು ಭಾರತಕ್ಕೆ ತೋರಿಸಿ, ಸಮುದ್ರಕ್ಕೆ ಎಸೆದು ಜಲಚರ ಪ್ರಾಣಿಗಳಿಗೆ ಆಹಾರ ಒದಗಿಸಿದರೆ ಸರಿ. ಇದರ ಜೊತೆಗೆ ಅಲ್ಲಿರಬಹುದಾದ ಸಜ್ಜನ ಪ್ರಜೆಗಳನ್ನು ದಿಕ್ಕು ತಪ್ಪಿಸುತ್ತಿರುವ ಅಲ್ಲಿನ ಧರ್ಮಗುರುಗಳನ್ನು ಜೈಲಿಗಟ್ಟಲಿ. ಇಲ್ಲದಿದ್ದರೆ ಅನಿವಾರ್ಯವಾಗಿ ದೇಶದೊಳಗೆ ನುಗ್ಗಿ ಸಿಕ್ಕ ಸಿಕ್ಕವರನ್ನು ಸದೆಬಡಿಯುವ ಕೆಲಸವನ್ನು ಭಾರತ ಮಾಡುತ್ತದೆ. ಈ ಸಂದರ್ಭದಲ್ಲಿ ಅಮಾಯಕರನ್ನು ಬೇರ್ಪಡಿಸಲು ಅಥವಾ ರಕ್ಷಿಸಲು ಸಾಧ್ಯವೇ ಇಲ್ಲದಂತಹ ಸಂದರ್ಭ ಸೃಷ್ಠಿಯಾದಾಗ ಸುಸಂಸ್ಕøತ ಭಾರತವನ್ನು ಎಂದೂ ವಿಶ್ವ ಸಮುದಾಯ ದೂರಬಾರದು ಅಷ್ಟೇ.

ನಿನ್ನೇ ಹುತಾತ್ಮರಾದ ವೀರಯೋಧರಿಗೆ “ಜನಮಿಡಿತ ಬಳಗ”, “ಜನಮಿಡಿತ ಓದುಗ ಬಳಗ”, “ಜನಮಿಡಿತ ಕವಿಬಳಗ” ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ. ಹುತಾತ್ಮ ಯೋಧರ ಕುಟುಂಬದ ಜೊತೆ ನಾವಿದೇವೆ ಎಂಬ ನೈತಿಕ ಬೆಂಬಲವನ್ನು ಸಹ ನೀಡುತ್ತದೆ.
– ಜಿ.ಎಂ.ಆರ್. ಆರಾಧ್ಯ

Leave a Reply

Your email address will not be published. Required fields are marked *