ಪಾಪಿ ಪಾಕಿಸ್ತಾನದಿಂದ ಮತ್ತೊಂದು ಕಿಡಿಗೇಡಿತನ: ಕೊರೊನಾ ಸೋಂಕಿತರನ್ನು ಭಾರತದ ಗಡಿಗೆ ತಂದು ಬಿಡುತ್ತಿದೆ ಪಾಕ್

ಮೀರ್ ಪುರ ( ಪಾಕಿಸ್ತಾನ): ಕೊರೋನಾದಿಂದ ವಿಶ್ವವೇ ನಲುಗಿ ಹೋಗುತ್ತಿದೆ. ಆದರೆ ಇಂತಹ ಸಂದರ್ಭದಲ್ಲೂ ತನ್ನ ಕುಹಕ ಬುದ್ಧಿಯನ್ನು ಬಿಡದ ಪಾಪಿ ಪಾಕಿಸ್ತಾನ ಕೊರೋನಾ ಸೋಂಕಿತ ರೋಗಿಗಳನ್ನು ಭಾರತದ ಗಡಿಗೆ ತಂದು ಸುರಿಯುತ್ತಿದೆ.

ಭಾರತ ಪಾಕ್ ಗಡಿಯಲ್ಲಿ ಇರುವ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್ – ಬಾಲ್ಚಿಸ್ತಾನ ಪ್ರಾಂತ್ಯಗಳಿಗೆ ಕೊರೋನಾ ವೈರಸ್ ಸೋಂಕಿತರನ್ನು ತಂದು ಸುರಿಯುತ್ತಿದೆ ಪಾಕಿಸ್ತಾನ ಸೇನೆ.

ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಕೊಡಲು ಭಾರತ ಕೋಟ್ಯಾಂತರ ರೂಪಾಯಿ ವ್ಯಯಿಸಿ ಐಸೋಲೇಷನ್ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಇತ್ತ ಪಾಕಿಸ್ತಾನ ಮಾತ್ರ ಕಸ ಸುರಿಯುವ ರೀತಿಯಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ದೇಶದ ಗಡಿ ಭಾಗದಲ್ಲಿ ‘ಡಂಪ್’ ಮಾಡುತ್ತಿದೆ..!
ಪಂಜಾಬ್ ಪ್ರಾಂತ್ಯದಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರನ್ನು ಅಲ್ಲಿಂದ ತೆರವುಗೊಳಿಸಿ ನೇರವಾಗಿ ಗಡಿ ಭಾಗಕ್ಕೆ ಕರೆತರಲಾಗುತ್ತಿದೆ. ಗಡಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕಿತರಿಗಾಗಿಯೇ ವಿಶೇಷ ಶಿಬಿರವನ್ನು ಸಿದ್ಧಗೊಳಿಸಿದ್ದು, ದೇಶದೆಲ್ಲೆಡೆಯ ಸೋಂಕಿತರು ಒಂದೇ ಸೂರಿನಡಿ ಇರಲಿದ್ದಾರೆ. ಪಾಕಿಸ್ತಾನದಾದ್ಯಂತ ಇರುವ ಸೇನಾ ನೆಲೆಗಳು, ಸೈನಿಕರ ವಸತಿ ಗೃಹ ಸೇರಿದಂತೆ ಎಲ್ಲೆಡೆ ಸೋಂಕಿತರನ್ನು ಹುಡುಕಿ ಗಡಿ ಭಾಗಕ್ಕೆ ತಂದು ಸುರಿಯುತ್ತಿದ್ದಾರೆ. ಗಡಿ ಭಾಗದ ಮೀರ್ ಪುರ ಸೇರಿದಂತೆ ಹಲವು ಪ್ರದೇಶಗಳ ಜನರು, ಸರ್ಕಾರದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಜನರ ಪ್ರತಿಭಟನೆಗೆ ಸೇನೆ ಸೊಪ್ಪು ಹಾಕುತ್ತಿಲ್ಲ.
ಭಾರತ ತನ್ನ ಪ್ರಜೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು ದೇಶದ ಪ್ರಧಾನಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೊರೋನಾ ವಿರುದ್ಧ ಹೋರಾಡುತ್ತಿರುವ ರೀತಿಗೆ ವಿದೇಶಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿವೆ. ಒಂದೆಡೆ ಈ ರೀತಿಯ ನಿಯಂತ್ರಣ ಮುಂದುವರೆದರೆ, ಮತ್ತೊಂದಡೆ ಪಾಕಿಸ್ತಾನದ ಈ ಕೃತ್ಯ ಭಾರತವನ್ನು ಧೃತಿಗೆಡಿಸಿವೆ. ಆದರೆ ಇದು ಯುದ್ಧದ ಸಮಯವಲ್ಲ‌. ಒಂದು ವೇಳೆ ಸಂದರ್ಭ ಬೇರೆಯೇ ಆಗಿದ್ದರೆ ಭಾರತದ ಉತ್ತರವೂ ಬೇರೆ ರೀತಿ ಇರುತ್ತಿತ್ತು.

ಭಾರತದಲ್ಲಿ ಮಾಧ್ಯಮಗಳಿಗಿರುವಷ್ಟು ಸ್ವಾತಂತ್ರ್ಯ ಇನ್ನೂ ಪಾಕಿಸ್ತಾನದಲ್ಲಿ ಇಲ್ಲ. ಹಾಗಾಗಿ ಕೊರೋನಾ ಅಲ್ಲಿ ಬಾರಿಸುತ್ತಿರುವ ಮರಣ ಮೃದಂಗದ ಬಗ್ಗೆ ವರದಿಗಳು ಸಿಕ್ಕುತ್ತಿಲ್ಲ ಎಂಬುದೂ ಸತ್ಯ.

ಭಾರತ-ಪಾಕ್ ಗಡಿ ಭಾಗದ ಈ ಶಿಬಿರಗಳಲ್ಲಿ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳೇ ಇಲ್ಲ. ಇನ್ನು ವೈದ್ಯರು ಹಾಗೂ ದಾದಿಯರ ಮುಖವೇ ಕಾಣೋದಿಲ್ಲ. ಹೀಗಾಗಿ, ಪಾಕಿಸ್ತಾನದೆಲ್ಲೆಡೆಯ ರೋಗಿಗಳು ಇಲ್ಲಿಗೆ ಬಂದರೆ, ಇಡೀ ಪ್ರದೇಶವೇ ರೋಗಗ್ರಸ್ತವಾಗುತ್ತೆ ಎಂಬ ಆತಂಕದಲ್ಲಿ ಜನರಿದ್ದಾರೆ.
ಕೊರೊನಾ ವೈರಸ್ ಗೆ ಕಂಗೆಟ್ಟಿದೆ ಪಾಕಿಸ್ತಾನ..! ಇರಾನ್ ಗಡಿಯಲ್ಲಿ ನರಕ ಸೃಷ್ಠಿ..!

ಭಾರತ-ಪಾಕ್ ಗಡಿಯ ಮುಜಾಫರಾಬಾದ್ ನ ನಿವಾಸಿಗಳ ಕಥೆಯೂ ಇದೇ ರೀತಿಯದ್ದಾಗಿದೆ. ತಮ್ಮ ಇಡೀ ನಗರ ಕೊರೊನಾ ವೈರಸ್ ಸೋಂಕಿತರಿಂದಲೇ ತುಂಬಿ ಹೋಗುವ ಭೀತಿಯಲ್ಲಿದ್ದಾರೆ‌ ಪಾಕಿಸ್ತಾನ ಸೇನೆ ಗಡಿ ಭಾಗದ ಜನರ ಬಗ್ಗೆ ಚಿಂತಿಸುತ್ತಿಲ್ಲ. ಅದು ಕೇವಲ ಪಂಜಾಬ್ ಪ್ರಾಂತ್ಯ ಸೇರಿದಂತೆ ಪ್ರಮುಖ ನಗರಗಳ ಬಗ್ಗೆ ಮಾತ್ರ ಆಸಕ್ತಿ ವಹಿಸಿದೆ ಎಂದು ಗಡಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *