ಪಾಕ್ ಯುದ್ದವಿಮಾನ ಹೊಡೆದು ಉರುಳಿಸಿದ ಅಭಿನಂದನ್ ಅವರಿಗೆ ನಾಳೆ”ವೀರ ಚಕ್ರ”
ವೈರಿ ರಾಷ್ಟ್ರ ಪಾಕಿಸ್ತಾನ ದ ಯುದ್ದ ವಿಮಾನ ಬೆನ್ನಟ್ಟಿ ಅದನ್ನು ಹೊಡೆದು ಉರುಳಿಸಿದ ಭಾರತದ ವೀರಯೋಧ ಅಭಿನಂದನ್ ಆವರಿಗೆ ನಾಳೆ ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿ ಪ್ರತಿಷ್ಠಿತ “ವೀರ ಚಕ್ರ” ನೀಡಿ ಗೌರವಿಸಾಗುವುದು.
ಕೆಂಪುಕೋಟೆಯ ಮೇಲೆ ಈ ಗೌರವಕ್ಕೆ ಪಾತ್ರರಾಗುತ್ತಿರುವ ಅಭಿನಂದನ್ ಅವರಿಗೆ ರಾಷ್ಟ್ರದ ಜನತೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 73ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ 36ವರ್ಷ ಅಭಿನಂದನೆಗೆ “ವೀರ ಚಕ್ರ” ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ನಲವತ್ತಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಬಾಗಲಕೋಟ್ ಮೇಲೆ ಮಿಂಚಿನ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ್ದವು.
ಇದಕ್ಕೆ ಸೇಡುತೀರಿಸಿಕೊಳ್ಳಲು ಪಾಕಿಸ್ತಾನ ಯುದ್ಧ ವಿಮಾನಗಳು ಭಾರತೀಯ ವಾಯು ಸರಹದ್ದು ಉಲ್ಲಂಘಿಸಿ ಕಾಶ್ಮೀರ ಕಣಿವೆ ಪ್ರವೇಶಿಸಿದ್ದವು. ತಕ್ಷಣ ಎಚ್ಚೆತ್ತ ಭಾರತೀಯ ವಾಯುಪಡೆಯ ಫೈಟರ್ಜೆಟ್ ಗಳು ಪಾಕ್ ವಿಮಾನವನ್ನು ಬೆನ್ನಟ್ಟಿದ ಮಿಗ್-21 ವಿಮಾನದಲ್ಲಿದ್ದ ಅಭಿನಂದನ್ ವರ್ಧಮಾನ್ ಡಾಗ್ ಫೈಟ್ ನಲ್ಲಿ (ವೈರಿ ವಿಮಾನ ಬೆನ್ನಟ್ಟುವಿಕೆ) ಶತ್ರು ವಿಮಾನವನ್ನು ಹೊಡೆದುರುಳಿಸಿದ್ದರು.
ಅನಂತರ ವಿಮಾನ ದಾಳಿಯಿಂದ ಅಭಿನಂದನ್ ಅವರಿದ್ದ ವಿಮಾನ ಪತನಗೊಂಡು ಪಾಕಿಸ್ತಾನದಲ್ಲಿ ಕೆಲಕಾಲ ಯುದ್ಧ ಖೈದಿಯಾಗಿ ಇದ್ದರು. ನಂತರ ಅವರು ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದರು.