ಪವರ್ ಫುಲ್ ಮನೆಮದ್ದುಗಳು!! ಕಪ್ಪು ಕಲೆ ಮತ್ತು ಇತರ ಗುರುತುಗಳನ್ನು ನಿವಾರಿಸಲು

ಹಿಂದೆಂದೋ ಆಗಿದ್ದ ಗಾಯ ಅಥವಾ ಇತರ ಕಾರಣಗಳಿಂದ ಕಾಲುಗಳ ಮೇಲೆ ಉಳಿದುಕೊಂಡಿರುವ ಕಲೆ ಅಥವಾ ಗುರುತುಗಳು ನಿಮಗೆ ಕಾಲುಗಳನ್ನು ತೋರುವ ಉಡುಗೆ ಉಟ್ಟುಕೊಳ್ಳಲು ಮುಜುಗರ ತರಿಸುತ್ತಿದ್ದಿರಬಹುದು. ನಿವಾರಿಸುವ ಕೆಲವು ಸಮರ್ಥ ಮನೆಮದ್ದುಗಳಿವೆ ಹಾಗೂ ಇವುಗಳ ಪ್ರಭಾವ ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಈ ಭಾಗದ ಚರ್ಮ ಸಹಜವರ್ಣವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ನಿಮ್ಮ ಅಡುಗೆಮನೆಯಲ್ಲಿ ಸದಾ ಲಭಿಸುವ ಸಾಮಾಗ್ರಿಗಳೇ ಸಾಕಾಗುತ್ತವೆ. ಬನ್ನಿ, ನೋಡೋಣ…. 


ಆಲೋವೆರಾ

ಆಲೋವೆರಾ ಅಥವಾ ಲೋಳೆಸರದಲ್ಲಿ ಅತ್ಯುತ್ತಮ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಇವು ಚರ್ಮದ ಉರಿಯೂತವನ್ನು ಶಮನಗೊಳಿಸುತ್ತದೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಿ ಗಾಯಗಳನ್ನು ಮಾಗಿಸಲೂ ನೆರವಾಗುತ್ತದೆ. ವಿಶೇಷವಾಗಿ, ಗಾಯವಾದಾದ ಲೋಳೆಸರದ ತಿರುಳನ್ನು ನೇರವಾಗಿ ಹಚ್ಚಿಕೊಳ್ಳುವ ಮೂಲಕ ಗಾಯ ಕಲೆಯಿಲ್ಲದೇ ಮಾಗುವ ಜೊತೆಗೇ ಊದಿಕೊಳ್ಳುವುದನ್ನೂ ತಡೆಯಬಹುದು. ಕಲೆ ಮತ್ತು ಗಾಯದ ಗುರುತು ಇಲ್ಲವಾಗಿಸಲು ಇದರ ತಾಜಾ ತಿರುಳನ್ನು ನಿತ್ಯವೂ ಒಂದೇ ಸಮಯದಲ್ಲಿ ಹೆಚಿಕೊಳ್ಳುತ್ತಾ ಬರುವ ಮೂಲಕ ಶೀಘ್ರವೇ ಉತ್ತಮ ಪರಿಣಾಮವನ್ನು ಗಮನಿಸಬಹುದು.

ಕೋಕೋ ಬೆಣ್ಣೆ

ಕೋಕೋ ಬೆಣ್ಣೆ. (Cocoa Butter) ಕಲೆಗಳನ್ನು ನಿವಾರಿಸುವ ಶಕ್ತಿ ಇರುವ ನೈಸರ್ಗಿಕ ಉತ್ಪನ್ನಗಳಲ್ಲಿ ಕೋಕೋ ಬೆಣ್ಣೆ ಸಹಾ ಒಂದು. ಈ ಬೆಣ್ಣೆ ತಾಜಾ ರೂಪದಲ್ಲಿ ಲಭಿಸುವುದು ದುರ್ಲಭವಾಗಿರುವ ಕಾರಣ ಕೋಕೋ ಬೆಣ್ಣೆಯನ್ನು ಬಳಸಿರುವ ಉತ್ತಮ ಗುಣಮಟ್ಟದ ಪ್ರಸಾದನಗಳನ್ನು ಬಳಸಬಹುದು. ಈ ಪ್ರಸಾದನವನ್ನು ಕಲೆಯಿರುವ ಭಾಗದ ಮೇಲೆ ತೆಳುವಾಗಿ ಹಚ್ಚಿ ಹೆಚ್ಚಿನ ಒತ್ತಡವಿಲ್ಲದ, ವೃತ್ತಾಕಾರದಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಉತ್ತಮ ಹಾಗೂ ಶೀಘ್ರ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬೇಕು.

ಲಿಂಬೆ

ಲಿಂಬೆ ಹುಳಿಯಾಗಿರಲು ಇದರಲ್ಲಿರುವ ಸಿಟ್ರಿಕ್ ಆಮ್ಲ ಕಾರಣ. ಇದರ ಆಮ್ಲೀಯತೆ ಚರ್ಮದ ಹೊರಪದರದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು ಹಾಗೂ ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಚರ್ಮದ ಸೆಳೆತ ಹೆಚ್ಚಿಸಲೂ ನೆರವಾಗುತ್ತದೆ. ಇದಕ್ಕೆ ಒಂದು ಲಿಂಬೆಹಣ್ಣಿನ ರಸವನ್ನು ಸಂಗ್ರಹಿಸಿ ಹತ್ತಿಯುಂಡೆಯೊಂದನ್ನು ಹೀರಿಕೊಳ್ಳುವಂತೆ ಮಾಡಿ ಇದನ್ನು ಅಗಲವಾಗಿ, ಕಲೆ ಇರುವ ಭಾಗದ ಮೇಲೆ ನೇರವಾಗಿ ತಾಕುವಂತೆ ಹತ್ತು ನಿಮಿಷ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕಲೆ ಮಾಯವಾಗುವವರೆಗೂ ನಿತ್ಯವೂ ಈ ವಿಧಾನವನ್ನು ಅನುಸರಿಸಿ.

ಜೇನು

ವಿಶೇಷವಾಗಿ ಗಾಯದ ಗುರುತುಗಳನ್ನು ಇಲ್ಲವಾಗಿಸಲು ಜೇನು ಹೆಚ್ಚು ಸಕ್ಷಮವಾಗಿದೆ. ಇದಕ್ಕಾಗಿ ಸುಮಾರು ಎರಡು ದೊಡ್ಡಚಮಚದಷ್ಟು ಜೇನನ್ನು ಎರಡು ದೊಡ್ಡಚಮಚ ಅಡುಗೆ ಸೋಡಾದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಗಾಯದ ಗುರುತಿರುವ ಭಾಗ್ದ ಮೇಲೆ ನಯವಾದ ಮಜಾಸ್ ನೊಂದಿಗೆ ಹಚ್ಚಿಕೊಂಡು ಮೂರು ನಿಮಿಷ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ಗಾಯದ ಗುರುತಿನ ಬಣ್ಣವೂ ಗಾಢವಾಗಿದ್ದರೆ ಅಡುಗೆ ಸೋಡಾದ ಬದಲು ಸಮಪ್ರಮಾಣದ ಲಿಂಬೆರಸದೊಂದಿಗೆ ಬೆರೆಸಿ. ಪರಿಣಾಮ ಇನ್ನಷ್ಟು ಶೀಘ್ರವಾಗಿ ಆಗಲು ಈ ವಿಧಾನವನ್ನು ನಿತ್ಯವೂ ಒಂದೇ ಸಮಯದಲ್ಲಿ ನಿರ್ವಹಿಸಿ. ಈ ಮೂಲಕ ಕಲೆಗಳು ಮಾಯವಾಗುವ ಜೊತೆಗೇ ಜರ್ಮದ ಸತ್ತ ಜೀವಕೋಶಗಳು ನಿವಾರಣೆಯಾಗಲು ಮತ್ತು ಸೆಳೆತವೂ ಹೆಚ್ಚುತ್ತದೆ.

Leave a Reply

Your email address will not be published. Required fields are marked *