“ಪಬ್ ಜಿ” ಮೊಬೈಲ್ ಆಟಕ್ಕೆ ಮತ್ತೊಬ್ಬ ಯುವಕ ಬಲಿ

ಲಕ್ನೋ, ಡಿ.13- ಪಬ್ ಜಿ ಎಂಬ ಮೊಬೈಲ್ ಗೇಮ್ ಈಗಾಗಲೇ ಸಾಕಷ್ಟು ಯುವಕರ ಭವಿಷ್ಯವನ್ನು ಹಾಳುಗೆಡವಿದೆ. ಓದುವ ವಯಸ್ಸಿನಲ್ಲಿ ಈ ಆಟದಲ್ಲಿ ಅನೇಕರು ಅಡ್ಡದಾರಿಗೆ ಇಳಿದಿದ್ದಾರೆ. ಈ ಹುಚ್ಚಾಟಕ್ಕೆ ಅನೇಕರು ಬಲಿಯಾಗಿದ್ದಾರೆ‌ ಇಂದೂ ಸಹ ಅಂಥದ್ದೇ ಘಟನೆ ನಡೆದಿದ್ದು 22ರ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಹೌದು, ಈತ ಆಟದಲ್ಲಿ ಅದೆಷ್ಟು ಮಗ್ನನಾಗಿದ್ದ ಎಂದರೆ ಬಾಟಲಿಯಲ್ಲಿರುವುದು ನೀರೋ ಅಥವಾ ಬೇರೇನೋ ಎಂಬುದನ್ನು ಗ್ರಹಿಸದಷ್ಟು ಎಂದರೆ ಆಶ್ಚರ್ಯ ಅಲ್ಲವೇ? ನೀರೆಂದು ಭಾವಿಸಿ ರಾಸಾಯನಿಕ ಕುಡಿದ ಈತ ಈಗ ಯಮಪಾದ ಸೇರಿದ್ದಾನೆ.

ಉತ್ತರಪ್ರದೇಶದ ಆಗ್ರಾದ ಕಾಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ‌ ಪಬ್ ಜಿ ಹುಚ್ಚಿನಿಂದ ಪ್ರಾಣ ಕಳೆದುಕೊಂಡ ಯುವಕ 22 ವರ್ಷದ ಸೌರಭ್ ಯಾದವ್ ಎಂದು ಗುರುತಿಸಲಾಗಿದೆ.

ನಡೆದದ್ದೇನು?:
ರೈಲಿನಲ್ಲಿ ಪ್ರಯಾಣಿಸುವಾಗ ಈತ ನೀರು ಎಂದು ಭಾವಿಸಿ ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ಕುಡಿದು ಮೃತಪಟ್ಟಿದ್ದಾನೆ.

ರೈಲ್ವೇ ನಿಲ್ದಾಣಸ ಇನ್ ಚಾರ್ಜ್ ವಿಜಯಸಿಂಗ್ ಆಭರಣಗಳ ಡೀಲರ್ ಆಗಿರುವ ತನ್ನ ಸ್ನೇಹಿತ ಸಂತೋಷ್ ಶರ್ಮಾ ಅವರೊಂದಿಗೆ ಯುವಕ ಸೌರಭ ಪ್ರಯಾಣಿಸುತ್ತಿದ್ದ. ಶರ್ಮಾ ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ತನ್ನ ಬ್ಲಾಗಿನಲ್ಲಿ ಇಟ್ಟುಕೊಂಡಿದ್ದರು. ಆಭರಣಗಳನ್ನು ಪಾಲಿಶ್ ಮಾಡುವ ವ್ಯಾಪಾರಕ್ಕಾಗಿ ಸಂತೋಷ್ ಆಗಾಗ ಆಗ್ರಾಕ್ಕೆ ತೆರಳುತ್ತಿದ್ದರು‌ ಇಬ್ಬರೂ ಒಂದೇ ತರಹದ ಬ್ಯಾಗನ್ನು ಹೊಂದಿದ್ದರು‌.

ಪ್ರಯಾಣದ ವೇಳೆ ಸೌರಭ್ ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುವುದರಲ್ಲಿ ತಲ್ಲೀನನಾಗಿದ್ದ‌. ಈ ವೇಳೆ ಬಾಯಾರಿಕೆಗಾಗಿ ಬ್ಯಾಗಿಗೆ ಕೈಹಾಕಿ ನೀರಿನ ಬಾಟಲಿ ಎಂದು ತಿಳಿದು ಆ ರಾಸಾಯಿನಿಕವನ್ನೇ ಕುಡಿದಿದ್ದಾನೆ‌. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಕುಸಿದುಬಿದ್ದಿದ್ದಾನೆ. ರೈಲು ಮುಂದಿನ ನಿಲ್ದಾಣ ತಲುಪುವ ಒಳಗೆ ಆತ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *