ನೀರಿನಿಂದಲೇ ಚಲಿಸುತ್ತೆ ಇನ್ನು ವಾಹನಗಳು….!

ವ್ಯಕ್ತಿಯೊಬ್ಬ ಹೊಸದಾ ಏನನ್ನಾದರೂ ಅವಿಷ್ಕರಿಸಿ ಸಾಧಿಸಲು ಹೊರಟಾಗ ಆತನಿಗೆ ಈ ನಾಡು ಅಥವಾ ಈ ದೇಶ ಪ್ರೋತ್ಸಾಹಿಸಿ ಸಹಕರಿಸದಿದ್ದರೆ ಇದು ದೇಶಕ್ಕೆ ಬಹುದೊಡ್ಡ ನಷ್ಟ ಅಲ್ಲವೇ? ಈಗಲೂ ಹೀಗೆ ಆಗಿದೆ.ಕೊಯಮತ್ತೂರು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರು ಶುದ್ದೀಕರಿಸಿದ ನೀರನ್ನು (ಡಿಸ್ಟಿಲ್ ವಾಟರ್) ಬಳಸಿ ಎಂಜಿನ್ ಓಡಿಸಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆಶ್ಚರ್ಯವೆಂದರೆ ಈತ ನೀರಿನಿಂದಲೇ ಚಲಿಸುವ ಎಂಜಿನ್ ಅನ್ನು ಅವಿಷ್ಕರಿಸುವ ಸಂದರ್ಭದಲ್ಲಿ ಭಾರತ ಸರ್ಕಾರದ ನೆರವು ಕೋರಿದ್ದ.ಆದರೆ ಆತನಿಗೆ ಸ್ಪಂದಿಸದ ಸರ್ಕಾರದ ವಿಳಂಬ ಧೋರಣೆ ಹಾಗೂ ತಾತ್ಸಾರ ಆತನನ್ನು ಜಪಾನ್‌ಗೆ ಕರೆದೊಯ್ದಿತು ಮತ್ತು ಜಪಾನ್ ಆಡಳಿತದ

ನೆರವು ಕೋರುವ೦ತೆ ಮಾಡಿತು. ಸದಾ ಹೊಸ ಹೊಸ ಅವಿಷ್ಕಾರಗಳಿಗೆ ಸಾಕ್ಷಿಯಾಗಿರುವ ಜಪಾನ್ ಸರ್ಕಾರ . ಈತನನ್ನು ಪ್ರೋತ್ಸಾಹಿಸಿದ ಹುರಿದುಂಬಿ ಸಿದ ಪರಿಣಾಮ ಇಂದು ಈತನ ಅವಿಷ್ಕಾರಕ್ಕೆ ಮನ್ನಣೆ
ದೊರೆತಿದೆ. ಹೌದು, ಆ ಮೆಕ್ಯಾನಿಕಲ್ ಇಂಜಿನಿಯರ್ ಹೆಸರು ಸೌಂದರ್ಯರಾಜನ್ ಕುಮಾರ ಸ್ವಾಮಿ, ಕೊಯಮತ್ತೂರು ಮೂಲದ ಈತ ವಾಹನದಲ್ಲಿ ಅಳವಡಿಸುವ ಬ್ಯಾಟರಿಗಳಿಗೆ ಡಿಸ್ಟಿಲ್ ವಾಟರ್ ಬಳಸುವಂತೆ ವಾಹನ ದ ಇ೦ಜಿನ್‌ಗೆ ಪೆಟ್ರೋಲ್, ಡೀಸೆಲ್ ಬದಲಾಗಿ ಡಿಸ್ಟಿಲ್ ವಾಟರ್
ಬಳಸಬಹುದು ಎಂಬುದನ್ನು ಪಾ೦° ಗಿಕ ವಾಗಿ ಸಾಬೀತುಪಡಿಸಿದ್ದು, ಅವರ ಈ ಪ್ರಯತ್ನ ವಿಶ್ವದಲ್ಲಿಯೇ ಪ್ರಥಮವಾಗಿದೆ. ಹೈಡೋಜನ್ ಅನ್ನು ಇಂಧನವಾಗಿ ಬಳಸಿದರೆ ಅದು ಆಮ್ಲಜನಕವಾಗಿ ಪರಿವರ್ತನೆಯಾಗುವ ಮೂಲಕ ಇಂಜಿನ್ ಓಡಿಸಲು ಸಹಾಯಕಾರಿಯಾಗಲಿದೆ.

ಕಳೆದ 10 ವರ್ಷಗಳಿಂದಲೂ ಇದೇ ಸಾಧನೆ ಯಲ್ಲಿ ತೊಡಗಿದ್ದ ಆತ, ತಜ್ಞರ ಸಮುಖದಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ.
ಜಪಾನ್ ಸರ್ಕಾರ ಈ ತಂತ್ರಜ್ಞಾನ ಬಳಸಿ ಸಂಸ್ಕರಿಸಿದ ನೀರಿನಿಂದ ಚಲಿಸುವ
ಎಂಜಿನ್‌ಗಳನ್ನು ತಾನು ತಯಾರು ಮಾಡುವುದಾಗಿ ಹೇಳಿದೆ. ಈ ಸಂಶೋಧನೆ ಯಶಸ್ವಿಯಾದರೆ ಇಂಧನ ಬಳಕೆ ಪ್ರಮಾಣ ಗಣನೀಯ ವಾಗಿ ಕಡಿತಗೊಳ್ಳಲಿದ್ದು, ಪೆಟ್ರೋಲ್, ಡೀಸೆಲ್ ಆಧಾರಿತ ಉದ್ಯಮಗಳ ಮೇಲೆಯೂ ಗಂಭೀರವಾಗಿ ಪರಿಣಾಮ ಬೀರಬಹುದು

Leave a Reply

Your email address will not be published. Required fields are marked *