ನಿರುಪದ್ರವಿ ಶ್ರೀಲಂಕಾದಲ್ಲಿ ಸರಣಿ ಸ್ಫೋಟ,, ಏನೀ ಅನ್ಯಾಯ

ತನ್ನ ಪಾಡಿಗೆ ತಾನು ಯಾವುದೇ ಧರ್ಮ-ಜಾತಿ,ರಾಜಕೀಯ ದೊಂಬರಾಟ,ಆಂತರಿಕ ಕಲಹ..ಇತ್ಯಾದಿ ಇಲ್ಲದೆ ನೆಮ್ಮದಿಯ ನಾಗರಿಕ ಜೀವನ ನಡೆಸುತ್ತಿದ್ದ ಶ್ರೀಲಂಕದಲ್ಲಿ ಸರಣಿ ಸ್ಪೋಟವೇ?
ನಿಜ ಅಂಗಯ್ ಅಗಲದ ರಾಷ್ಟ್ರವವನ್ನೂ ಬಿಡದ ಉಗ್ರರ ಕ್ರೌರ್ಯಕ್ಕೆ ಇನ್ಯಾವ ರಾಷ್ಟ್ರ ಉಳಿದೀತು ಹೇಳಿ.
ಭದ್ರತಾ ವಿಷಯದಲ್ಲಿ ರಾಷ್ಟ್ರಕ್ಕೆ ಅಭಯ ನೀಡುವ ನಾಯಕ ಬೇಕು.ಹಾಗಾಗಿ ರಾಷ್ಟ್ರ ರಕ್ಷಣೆಗೆ ಎಲ್ಲವನ್ನು ಬದಿಗೊತ್ತಿ ಟೊಂಕ ಕಟ್ಟಿ ನಿಂತು ಅಷ್ಟೇ ಉಗ್ರಕ್ರಮ ಕೈಗೊಳ್ಳುವ ನಾಯಕತ್ವ ಅತ್ಯಗತ್ಯ.

ಅಮೆರಿಕದ ಅವಳಿ ಕಟ್ಟಡಗಳನ್ನು ವೈಮಾನಿಕ ದಾಳಿಯಲ್ಲಿ ಸಾವಿರಾರು ಜನರ ಮರಣಕ್ಕೆ ಕಾರಣವಾದ ಬಿನ್ ಲಾಡೆನ್ ನನ್ನು ಅಮೆರಿಕ ಹೇಗೆ ಹುಡುಕಿ ವಿದೇಶದಲ್ಲಿ ಅಡಗಿದ್ದರು ಅಟ್ಟಾಡಿಸಿ ಹೊಡೆದು ಹಾಕಿತು ನೋಡಿ.ಅಷ್ಟೇ ಏಕೆ ಮೊನ್ನೆ ಮೊನ್ನೆಯ ಉರಿ ಹಾಗೂ ಪುಲ್ವಾಮ ದಾಳಿಯಲ್ಲಿ ಭಾರತ ಇಂಥ ಕ್ರಮ ಕೈಗೊಂಡಿತು ನೋಡಿ.ಇದಕ್ಕೆ ಕಾರಣ ರಾಷ್ಟ್ರ ಮೊದಲು ಎಂಬ ಧೋರಣೆಯ ನಾಯಕತ್ವ ಅಲ್ಲವೇ?
ಈಗ ಶ್ರೀಲಂಕಾ ಬೆನ್ನಿಗೆ ಬಲಿಷ್ಠ ರಾಷ್ಟ್ರಗಳು ನಿಲ್ಲಬೇಕಿದೆ,,ನಿಲ್ಲುತ್ತವೆ.
ಕುಕೃತ್ತ್ಯಕ್ಕೆ ಬಲಿಯಾದವರಲ್ಲಿ ಭಾರತೀಯರು ಇದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ.
ಭಾರತದಲ್ಲಿ ಈಗ ಹೆಲ್ಪ್ ಲೈನ್ ತೆರೆಯಲಾಗಿದೆ.

ಹೆಚ್ಚಿನ ವಿವರಗಳನ್ನು ಈ ಕೆಳಕಂಡ ನಂಬರ್ ನಿಂದ ಪಡೆಯಬಹುದಾಗಿದೆ.
94777 902082 ಅಥವಾ 94112422788

Leave a Reply

Your email address will not be published. Required fields are marked *