ನಿಮ್ಮದು ನಾಲಿಗೆಯೋ ಅಥವಾ…….

 

ಕುಮಾರಸ್ವಾಮಿ ಅವರೇ, ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ, ಯಾರ ಮುಲಾಜಿಗೂ ಒಳಪಟ್ಟವನಲ್ಲ. ಈ ವಿಷಯವನ್ನು ಮೊದಲು ನಿಮ್ಮ ಗಮನಕ್ಕೆ ತಂದು ಒಂದೆರಡು ಸಾಲುಗಳನ್ನು ಬರೆದಿರುವೆ.
ಎಲ್ಲಾ ಪಕ್ಷಗಳಲ್ಲಿ ಹೇಗೆ ಸಭ್ಯರು, ಉತ್ತಮ ಚಾರಿತ್ಯ ಉಳ್ಳವರು, ಸಾಮಾಜಿಕ ಕಳಕಳಿ ಉಳ್ಳವವರು ಇಲ್ಲವೋ ಅದೇರೀತಿ ಎಲ್ಲ ಪಕ್ಷಗಳಲ್ಲೂ ಕೆಲವರು ಒಳ್ಳೆಯವರು,ಪ್ರಾಮಾಣಿಕರು ಇದ್ದಾರೆ, ಬಹುಶಃ ನಿಮ್ಮನ್ನು ಈ ಸಾಲಿನಲ್ಲಿ ಕಂಡವನು ನಾನು. ನೀವು ಆಗ 20 ತಿಂಗಳು ನಡೆಸಿದ ಆಡಳಿತವನ್ನು ಮೆಚ್ಚಿದ ಬಹುತೇಕರಲ್ಲಿ ನಾನು ಒಬ್ಬ,ಆದರೆ ಈಗ ನೀವು ಹಿಗೇಕೆ ವರ್ತಿಸುತಿದ್ದಿರೋ ತಿಳಿಯುತ್ತಿಲ್ಲ.
ಮೇಲಿನ ವಿಡಿಯೋವನ್ನು ಒಮ್ಮೆ ನೋಡಿ. ನೀವೇ ಆಡಿರುವ ಮಾತುಗಳು.
“ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಹೋಗುವುದಿಲ್ಲ, ಎಂಥದ್ದೇ ಪರಿಸ್ಥಿತಿಯಲ್ಲಿಯು ಅವರ ಜೊತೆ ಕಯ್ ಜೋಡಿಸುವುದಿಲ್ಲ”ಎಂದು ನೀವೇ ಹೇಳಿದ್ದಿರಲ್ಲವೇ?
ಕೇವಲ 38 ಸೀಟು ಪಡೆದಿರುವ ನಿಮಗೆ ಸಿಎಂ ಆಗುವ ನೈತಿಕ ಹಕ್ಕು ಇದೆಯಾ?.. ಇರಬಹುದು ,ರಾಜಕೀಯ ಎಂದರೆ ಚದುರಂಗ ಆಟವೇ ಆಗಿರಬಹುದು ಆದರೆ ಒಂದಿಷ್ಟು ಮಾನ ಮರ್ಯಾದೆ ಇಟ್ಟುಕೊಂಡು ಮುಂದುವರೆಯಬೇಕಲ್ಲವೇ?
ಅಧಿಕ ಸಂಖ್ಯೆಯಲ್ಲಿ ಸೀಟು ಗಳಿಸಿದ ಪಕ್ಷ ಅಧಿಕಾರಕ್ಕೆ ಬರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಗೌರವ ಅಲ್ಲವೇ?
ಈಗಾಗಲೇ ಸಮಯಸಾಧಕರು ಎಂಬ ಪಟ್ಟ ನಿಮಗೆ ನಿಮ್ಮ ತಂದೆಯವರಿಗೆ ಸಿಕ್ಕಾಗಿದೆ,. ಅನೇಕ ಸಂಧರ್ಭಗಳಲ್ಲಿ ಇದು ಧೃಢ ಪಟ್ಟಿದೆ ಕೂಡ,..ಬೇಡ,.ಬಿಟ್ಟುಬಿಡಿ. ಗೌರವಯುತ ರಾಜಕಾರಣ ಮಾಡಿ.
ನಿವಾಗಿ ನೀವೇ ಆಡಿರುವ ಮಾತುಗಳನ್ನು ಉಳಿಸಿಕೊಳ್ಳಿ.
ನೀವು ಕೇಳಬಹುದು,ಅತಂತ್ರ ಸ್ಥಿತಿ ಇದೆಯಲ್ಲ ಅಂದು,ಆದ್ರೆ ಅದು ಉತ್ತರ ಅಲ್ಲ, ಏಕೆಂದರೆ ನಿಮ್ಮನ್ನು ಅಂದು ಟಿವಿ ಮಾಧ್ಯಮಗಳು ಪ್ರಶ್ನಿಸಿದ್ದು ಇಂಥ ಸ್ಥಿತಿಯಲ್ಲಿ ನೀವು ಏನು ಮಾಡುತ್ತೀರಾ ಎಂದೇ,.. ಆಗ ನೀವು ಕೊಟ್ಟ ಉತ್ತರದಿಂದ ನಾನು ಪ್ರಭಾವಿತನಾಗಿದ್ದೆ, ಆದರೆ ನೀವು, ನಿಮ್ಮ ತಂದೆಯವರು ಈಗ ವರ್ತಿಸುತ್ತಿರುವ ರೀತಿ ನನಗೆ ಆಶ್ಚರ್ಯ ಮೂಡಿಸಿದೆ,
ಒಮ್ಮೆ,ಮತ್ತೊಮ್ಮೆ ಈ ವಿಡಿಯೋ ನೋಡಿ,
ಮುಂದೊಮ್ಮೆ ನಮ್ಮ ಯುವಜನಾಂಗ “ಅಯ್ಯೋ ಇಂಥ ನೀಚರು ಇದ್ದಾರಾ, ಆಡಿದ ಮಾತಿಗೆ ತಪ್ಪಿ ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಅಯೋಗ್ಯರು ಇದ್ದಾರಾ” ಎಂದು ಭಾವಿಸಿ ಒಟ್ಟಾರೆ ರಾಜಕೀಯ ವ್ಯವಸ್ಥೆ ಯನ್ನೇ ತಿರಸ್ಕರಿಸಿಯಾರು.
ಇಂಥ ರಾಜಕೀಯ ಬಿಕ್ಕಟ್ಟಿಗೆ ಒಂದು ಪರಿಹಾರ ಇದೆ.
ಎಲ್ಲ ಪಕ್ಷದಲ್ಲಿಯು ಯಾರಾದರೂ ಯೋಗ್ಯರು ಇದ್ದರೆ ಅವರನ್ನು ಆಯ್ದುಕೊಳ್ಳಿ,ಒಟ್ಟಿಗೆ ಸೇರಿ ರಾಜ್ಯಕ್ಕೆ ಒಳ್ಳೆ ಆಡಳಿತ ನೀಡಿ. ಗೆದ್ದಿರುವ ನೀವುಗಲಾರು ನಿಮ್ಮ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಆಸ್ತಿ ತಂದು ಹಾಹಿ ರಾಜ್ಯ ಉದ್ದಾರ ಮಾಡೋಲ್ಲ,ನಮ್ಮದೇ ಹಣ ತಾನೇ?
ನಮಗೆ ಬೇಕಿರುವುದು ಪಕ್ಶಗಳಲ್ಲ,ಒಳ್ಳೆ ಆಡಳಿತ ವ್ಯವಸ್ಥೆ ಸ್ವಾಮಿ.
ಬನ್ನಿ ಎಲ್ಲ ಪಕ್ಶಗಳ ಸಜ್ಜನರನ್ನು ಸೇರಿಸಿ ಉತ್ತಮ ಆಡಳಿತ ನೀಡಿ ರಾಷ್ಟ್ರಕ್ಕೆ ಮಾದರಿ ಆಗಿ,ಅತಂತ್ರ ಸ್ಥಿತಿ ನಿರ್ಮಾಣ ಆದರು ಈ ರೀತಿ ಆಡಳಿತ ನೀಡಿ ದೇಶಕ್ಕೆ ಮಾದರಿಯಾಗಿ. ಅದ ಬಿಟ್ಟು ಮುಖ್ಯ ಮಂತ್ರಿ ಸ್ಥಾನ ದೊರೆಯುತ್ತದೆಂದು ಹೀನ ರಾಜಕೀಯಕ್ಕೆ ಕಯ್ ಹಾಕಬೇಡಿ, ಅತ್ಯಂತ ಅಧಿಕ ಸ್ಥಾನ ಪಡೆದ ಪಕ್ಶಕ್ಕೆ ಅಗೌರವ ತೋರಿ ಸಂವಿಧಾನಕ್ಕೆ ಅಪಚಾರ ಮಾಡಬೇಡಿ,.. ನಿಮ್ಮದು ಸಹ ನಾಳಿಗೆಯೇ ಎಂಬ ಮಾತು ಉಳಿಸಿಕೊಳ್ಳಿ.
– ಜಿ.ಎಂ.ಆರ್.ಆರಾಧ್ಯ

Leave a Reply

Your email address will not be published. Required fields are marked *