ನಿಂತುಕೊಂಡು ನೀರು ಕುಡಿಯುವವರು ತಪ್ಪದೇ ಇದನೊಮ್ಮೆ ಓದಿ…

ನಿಂತ್ಕೊಂಡು ನೀರು ಕುಡಿತೀರಾ, ಹಾಗಾದರೆ ಇಲ್ನೋಡಿ ವಿಜ್ಞಾನಿಗಳು ಹೇಳಿರೋ ಪ್ರಕಾರ , ಈ ಕಾರಣಗಳ್ನ ಓದಿದ್ರೆ ಶಾಕ್ ಆಗೋದು ಖಂಡಿತ. ಓದಿ ನೋಡಿ.

ಎಷ್ಟು ನೀರು ಕುಡಿದ್ರೂ ಇನ್ನೂ ಕುಡೀತಾನೇ ಇರ್ಬೇಕು ಅನ್ಸುತ್ತೆ :-

ನಿಂತು ನೀರು ಕುಡಿದ್ರೆ ಬಾಯಾರಿಕೆ ಹೋಗೋದಿಲ್ಲ. ಆಗಾಗ ನೀರು ಕುಡೀತಾನೇ ಇರ್ಬೇಕು ಅನ್ಸುತ್ತೆ. ಎಷ್ಟು ಕುಡಿದ್ರೂ ಉಪಯೋಗ ಇಲ್ಲ.

ಅಜೀರ್ಣ ಆಗುತ್ತೆ :-

ಕೂತು ನೀರು ಕುಡೀವಾಗ ನಿಮ್ ದೇಹ ರಿಲ್ಯಾಕ್ಸ್ ಆಗಿರುತ್ತೆ, ಆಗ ತಿಂದಿದ್ದು, ಕುಡ್ದಿದ್ದು ಸುಲಭವಾಗಿ ಜೀರ್ಣ ಆಗುತ್ತೆ. ನಿಂತು ಕುಡಿದ್ರೆ ಅಜೀರ್ಣ ಆಗುತ್ತೆ.

ಆರ್ತ್ರೈಟಿಸ್ ಬರುತ್ತೆ :-

ಈಗ ನಿಂತ್ಕೊಂಡು ನೀರು ಕುಡಿದ್ರೆ ವಯಸ್ಕಾಲದಲ್ಲಿ ಆರ್ತ್ರೈಟಿಸ್ ಬರುತ್ತೆ. ನಿಂತ್ಕೊಂಡು ನೀರು ಕುಡೀವಾಗ ನಿಮ್ ಶರೀರದಲ್ಲಿರೋ ದ್ರವ ಪದಾರ್ಥಗಳು ಏರುಪೇರಾಗುತ್ತಂತೆ. ಇದ್ರಿಂದ ಗಂಟುಗಳಲ್ಲಿ ನೀರು ನಿಂತು ಆರ್ತ್ರೈಟಿಸ್ ಬರುತ್ತೆ.

ಟೆನ್ಷನ್ ಹೆಚ್ಚಾಗುತ್ತೆ :-

ನಿಂತ್ಕೊಂಡಿರೋವಾಗ ದೇಹದಲ್ಲಿ ಟೆನ್ಷನ್ ಹೆಚ್ಚಿರುತ್ತೆ. ನೀವು ಒಂದು ಹೊಡೆದಾಟಕ್ಕೆ ರೆಡಿ ಇರೋ ಹಾಗೆನೇ ಅದು, ಅಷ್ಟು ಟೆನ್ಷನ್ ಇರುತ್ತೆ ದೇಹದಲ್ಲಿ.

ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತೆ :-

ನಿಂತು ನೀರು ಕುಡಿದ್ರೆ ಅದು ಹೊಟ್ಟೆಗೆ ರಭಸವಾಗಿ ಬಡಿಯುತ್ತೆ. ಈ ಶಾಕಿನಿಂದಾಗಿ ಜೀರ್ಣಾಂಗ ವ್ಯವಸ್ಥೆ ಹಾಳಾಗಿಬಿಡುತ್ತೆ.

ಕಿಡ್ನಿ ಸರಿಯಾಗಿ ಕೆಲಸ ಮಾಡೊಲ್ಲ :-

ನಿಂತು ನೀರು ಕುಡಿಯೋದ್ರಿಂದ ಕಿಡ್ನಿ ಸರಿಯಾಗಿ ಕೆಲಸ ಮಾಡೋಕಾಗೊಲ್ಲ. ಅದರಿಂದ ಕೊಳೆ ಸರಿಯಾಗಿ ಫಿಲ್ಟರ್ ಆಗದೆ ಅದೆಲ್ಲ ಕಿಡ್ನಿಯಲ್ಲೇ ಉಳಿದು ಬಿಡೋ ಚಾನ್ಸ್ ಇದೆ. ಇದರಿಂದ ಮುಂದೆ ಕಿಡ್ನಿಯಲ್ಲಿ ಸಮಸ್ಯೆ ಬರ್ಬಹುದು.

ದೇಹದಲ್ಲಿರೋ ಆಸಿಡ್ ಮಟ್ಟ ಜಾಸ್ತಿಯಾಗುತ್ತೆ :-

ಕೂತ್ಕೊಂಡು, ಸಣ್ ಸಣ್ ಗುಟುಕಲ್ಲಿ ನೀರು ಕುಡೀಬೇಕು ಅಂತ ಆಯುರ್ವೇದದಲ್ಲೂ ಹೇಳಿದ್ಯಂತೆ. ಇದರಿಂದ ದೇಹದಲ್ಲಿರೋ ಆಸಿಡ್ ಪ್ರಮಾಣ ಕಡಿಮೆ ಆಗುತ್ತೆ. ನಿಂತು ಕುಡಿದ್ರೆ ಆಸಿಡ್ ಪ್ರಮಾಣ ಹೆಚ್ಚಾಗುತ್ತೆ.

ಎದೆಯುರಿ, ಅಲ್ಸರ್ ಖಾಯಿಲೆಗಳು ಬರುತ್ತೆ :-

ನಿಂತು ನೀರು ಕುಡೀವಾಗ ಅದು ಅನ್ನನಾಳಕ್ಕೆ ರಭಸವಾಗಿ ಬಡಿಯುತ್ತೆ. ಇದರಿಂದ ಅನ್ನನಾಳದಲ್ಲಿ ಉರಿ ಹುಟ್ಟಿ ಎದೆಯುರಿ ಬರುತ್ತೆ. ಮುಂದೆ ಅಲ್ಸರ್ ಬರೋ ಚಾನ್ಸ್ ಹೆಚ್ಚಾಗುತ್ತೆ. ಆದ್ದರಿಂದ ಇನ್ಮೇಲೆ ಕುತ್ಕೊಂಡು ನೀರು ಕುಡಿಯೋದು ಒಳ್ಳೆಯದು. ಇದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು. ಎನ್ಮಾಡ್ತಿರಾ ನೋಡಿ….

Leave a Reply

Your email address will not be published. Required fields are marked *