ನಾಚಿಕೆಯಾಗಬೇಕು ಮತವಿದ್ದೂ ಮತಚಲಾಯಿಸದ ದಾವಣಗೆರೆ ಮಾಹಾನಗರದ ದರಿದ್ರರಿಗೆ…

ಪ್ರಜಾಪಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಪ್ರತಿ ಪ್ರಜೆಗೂ ನೀಡಲ್ಪಟ್ಟಿರುವ ಹಕ್ಕು. ತನಗೆ ಎಂತಹ ಜನಪ್ರತಿನಿಧಿ ಬೇಕು ಎಂಬುದನ್ನು ಆಯ್ಕೆ ಮಾಡಲು ಇರಬಹುದಾದ ಸಾಮಾನ್ಯ ಪ್ರಜೆಯ ಬಹುದೊಡ್ಡ ಅಸ್ತ್ರ ವೆಂದರೆ ಇದೊಂದೇ ಅಲ್ಲವೇ? ಅರ್ಹ ಮತದಾರರಾಗಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತ ಚಲಾವಣೆಗೆ ಬಾರದ ಮಂದಿಗೆ ಏನನ್ನಬೇಕು?

ಇಂದು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ನಡೆದ ಮತದಾನ ಪ್ರಮಾಣ ಕೇವಲ ಶೇ. 56.31 ಮಾತ್ರ. ಅಂದರೆ ಹೆಚ್ಚುಕಡಿಮೆ ಅರ್ಧದಷ್ಟು ಮಂದಿ ಮತದಾನದಿಂದ ದೂರ ಉಳಿದಿದ್ದಾರೆ .ಇದರಲ್ಲಿ ಶೇ. 5ರಷ್ಟು ತಾಂತ್ರಿಕ ದೋಷದಿಂದ ಅಥವಾ ಮತಪಟ್ಟಿಯಲ್ಲಿ ಹೆಸರಿದ್ದೂ ದೂರದ ಊರುಗಳಲ್ಲಿ ನೆಲೆಸಿರುವ ಮತದಾರರು ಮತ ಚಲಾಯಿಸದೆ ಇದ್ದರೂ ಉಳಿದ ಶೇ 40 ರಷ್ಟು ಮಂದಿಗೆ ಗರ ಬಡಿದಿದೆಯೇ? ಇಷ್ಟೊಂದು ದರಿದ್ರರೇ ನಮ್ಮ ದಾವಣಗೆರೆ ಮಹಾನಗರದಲ್ಲಿ ವಾಸಿಸುವ ನಾಗರೀಕರು?
ನೂರಕ್ಕೆ 56ರಷ್ಟು ಮತ ಚಲಾವಣೆಯಾಗಿದೆ. ಇದರಲ್ಲಿ 28 ಮತ ಪಡೆದ ಅಭ್ಯರ್ಥಿ ಚುನಾಯಿತ ನಾಗುತ್ತಾನೆ. ಆದರೂ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತಗಳನ್ನು ಹಂಚಿಕೊಳ್ಳುವುದರಿಂದ ಈ 56 ಮತಗಳಲ್ಲಿ 20 ಮತಗಳನ್ನು ಪಡೆದ ವ್ಯಕ್ತಿ ಆಯ್ಕೆಯಾಗುತ್ತಾನೆ. ಹಾಗಾದರೆ ಇದನ್ನು ಪ್ರಜಾಪ್ರಭುತ್ವ ಪದ್ಧತಿ ಎಂದು ನಾವು ಒಪ್ಪಲೇ ಬೇಕೇ? ಆಯ್ಕೆಯಾದ ವ್ಯಕ್ತಿ ಇನ್ನೂ ಉಳಿಯಬಹುದಾದ ಶೇ 80 ರಷ್ಟು ನಾಗರೀಕರ ಅಥವಾ ಮತದಾರರ ಆಯ್ಕೆಗೆ ಅರ್ಹ ಅಲ್ಲ ಎಂಬ ಅರ್ಥವನ್ನೇಕೆ ನಾವು ನೀಡಬಾರದು.

ಸದ್ಯ ಮಹಾರಾಷ್ಟ್ರದಲ್ಲೂ ಇದೇ ತರಹದ ಸ್ಥಿತಿ ಇದೆ.ಯಾವೊಂದು ಪಕ್ಷವೂ ಆಡಳಿತಕ್ಕೆ ಬರುವಷ್ಟು ಬಹುಮತ ಪಡೆಯದ ಕಾರಣದಿಂದಾಗಿ ಅಲ್ಲಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲಾಗಿದೆ. ಇದರ ಅರ್ಥವೂ ಅದೇ…. ಇಲ್ಲೂ ಸಹ ಮತದಾರರು ನಿಗದಿತ ಪಕ್ಷಕ್ಕೆ ಶೇಕಡ 30ಕ್ಕಿಂತ ಹೆಚ್ಚು ಮತ ನೀಡಿಲ್ಲ.
ಅನೇಕ ಬಾರಿ ನಾನು ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದ್ದೇನೆ. ಏನೆಲ್ಲ ಬೇಕು-ಬೇಡಗಳನೆಲ್ಲ “ಕಡ್ಡಾಯ” ಮಾಡುವ ನಮ್ಮ ವ್ಯವಸ್ಥೆ ಮತದಾನವನ್ನೇಕೆ ಕಡ್ಡಾಯ ಮಾಡಬಾರದು. ಅದು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಗಳಲ್ಲಿ ಒಂದು ದಿನ ಮತಗಟ್ಟೆಗೆ ಬರಲು ಸಾಧ್ಯವಾಗದಿದ್ದರೆ ಇಂತಹ ಪ್ರಜೆಯನ್ನು ಭಾರತೀಯ ಪ್ರಜೆ ಎಂದು ಏಕಾದರೂ ಒಪ್ಪಿಕೊಳ್ಳಬೇಕು?

ರೇಷನ್ ಕಾರ್ಡ್ ಪಡೆಯಲು, ಆಧಾರ್ ಕಾರ್ಡ್ ಪಡೆಯಲು, ಮತದಾರರ ಗುರುತಿನ ಚೀಟಿ ಪಡೆಯಲು, ಬಸ್ – ರೈಲ್ವೆ ಗಳಲ್ಲಿ ರಿಸರ್ವೇಶನ್ ಪಡೆಯಲು, ಸಿನಿಮಾ ಮಂದಿರಗಳಲ್ಲಿ ಟಿಕೆಟ್ ಪಡೆಯಲು ಉದ್ದುದ್ದ ಸಾಲುಗಳಲ್ಲಿ ಕಾಣಿಸಿಕೊಳ್ಳುವ ಮಂದಿ ಮತದಾನ ಮಾಡಲು ಮಾತ್ರ ಸಾಲುಗಳಲ್ಲಿ ಕಾಣಿಸಿಕೊಳ್ಳುದಿರುವುದು ನಮ್ಮ ವ್ಯವಸ್ಥೆಯ ದುರದೃಷ್ಟವೇ ಸರಿ.

ಬಡತನ ರೇಖೆಯ ಕೆಳಗೆ ಇದ್ದೇವೆ ಎಂದು ಬಿಪಿಎಲ್ ಕಾರ್ಡ್ ಪಡೆದ ಸಾವಿರಾರು ಮಂದಿ ಐ.ಎಂ.ಎ ಹಗರಣದಲ್ಲಿ ತಾವು ಸಹ ಲಕ್ಷಾಂತರ ರೂ.ಗಳನ್ನು ಹೂಡಿ ವಂಚನೆಗೆ ಒಳಗಾಗಿದ್ದೇವೆ ಎಂದು ಬೊಬ್ಬೆ ಹೊಡೆದಾಗ, “ಬಡತನ ರೇಖೆಯ ಕೆಳಗಿರುವ ನಿಮಗೆ ಈ ಹೂಡಿಕೆಗೆ ಹಣ ಎಲ್ಲಿಂದ ಬಂತು”? ಎಂದು ನಮ್ಮ ವ್ಯವಸ್ಥೆ ಪ್ರಶ್ನಿಸಲಿಲ್ಲ. ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ಕೊಟ್ಟು ಬಿ.ಪಿ.ಎಲ್ ಕಾರ್ಡ್ ಪಡೆದ ಇಂತಹ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಈ ರೀತಿಯ ವಂಚಕರನ್ನು ಕಪ್ಪುಪಟ್ಟಿ ಎಂದು ಮಾಡಿ ಸೇರಿಸಬಾರದೇಕೆ ? ಹಾಗೆಯೇ ಮತದಾನಕ್ಕೆ ಅರ್ಹರಾಗಿದ್ದು ಮತಚಲಾಯಿಸದ ದರಿದ್ರನನ್ನೂ ಕಪ್ಪುಪಟ್ಟಿಗೆ ಸೇರಿಸಿ ಸೌಲಭ್ಯಗಳಿಂದ ಅವರನ್ನು ದೂರ ವಿಡಬಾರದೇಕೆ ?

ಶೇ 56 ಮತದಾನವಾದ ಕಡೆ ಗೆಲ್ಲುವ ಅಭ್ಯರ್ಥಿ ಶೇ 28 ಮತ ಪಡೆದರೂ ಸಾಕಲ್ಲವೇ? ಹಾಗಾದರೆ ಈ ಆಯ್ಕೆಯನ್ನು ಸರ್ವಸಮ್ಮತ ಆಯ್ಕೆ ಎಂದು ಯಾವ ಅರ್ಥದಲ್ಲಿ ಕರೆಯಬಹುದು ಎಂಬುದು ಓದುಗರ ವಿವೇಚನೆಗೆ ಬಿಟ್ಟದ್ದು.

              -ಜಿ.ಎಂ.ಆರ್.ಆರಾಧ್ಯ

One thought on “ನಾಚಿಕೆಯಾಗಬೇಕು ಮತವಿದ್ದೂ ಮತಚಲಾಯಿಸದ ದಾವಣಗೆರೆ ಮಾಹಾನಗರದ ದರಿದ್ರರಿಗೆ…

  • November 13, 2019 at 7:52 am
    Permalink

    ನಾಚಿಕೆಯಾಗಬೇಕು ಮತ ಚಲಾಯಿಸಲು ಬಂದ ಜನಗಳನ್ನು ಲಿಸ್ಟ್ ನಿಂದ ಕೈ ಬಿಟ್ಟಿರುವುದಕ್ಕೆ, ನಾಚಿಕೆಯಾಗಬೇಕು ಎಷ್ಷ್ಟೋ ಜನಗಳ ಹೆಸರು ಲಿಸ್ಟ್ ನಲ್ಲಿ ಸಿಗದೆ ಇರುವುದಕ್ಕೆ, ನಾಚಿಕೆಯಾಗಬೇಕು ಜನಗಳನ್ನು ಅತಂತ್ರಗೊಳಿಸಿದ್ದಕ್ಕೆ….

    Reply

Leave a Reply

Your email address will not be published. Required fields are marked *