ನರೇಂದ್ರ ಮೋದಿ ಭಾಷಣ: ಪ್ರಧಾನಿ ಹೇಳಿದ್ದೇನು | ಪ್ರಮುಖ ಅಂಶಗಳು
16 ನಿಮಿಷಗಳ ಕಿರು ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದರು. ಇತ್ತೀಚೆಗೆ ಜಾರಿಗೆ ತಂದ ಉಚಿತ ಪಡಿತರ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗುವುದು ಎಂದು ಪಿಎಂ ಮೋದಿ ಹೇಳಿದರು. ಈ ನಿರ್ಧಾರವು 80 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸರ್ಕಾರವು ಇದಕ್ಕೆ 90,000 ಕೋಟಿ ರೂ ಖರ್ಚು ಮಾಡಿದೆ ಎಂದರು.
ಬಡವರ ಕಲ್ಯಾಣಕ್ಕೆ ಮತ್ತಷ್ಟು ನೆರವಾಗುವಂತಹ ಒಂದು ರಾಷ್ಟ್ರ-ಒಂದು-ಪಡಿತರ-ಕಾರ್ಡ್ ವ್ಯವಸ್ಥೆಯನ್ನು ಹೊರತರುವ ಕೆಲಸ ನಡೆಯುತ್ತಿದೆ ಎಂದು ಪಿಎಂ ಮೋದಿ ಹೇಳಿದರು.
ಪಿಎಂ ಮೋದಿ ತಮ್ಮ ಭಾಷಣದಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಜಾಗರೂಕರಾಗಿರಬೇಕು ಮತ್ತು ಕರೋನವೈರಸ್ನಿಂದ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಳಿಕೊಂಡರು.