ನನ್ನದೊಂದು ಬರವಣಿಗೆ; ಕ್ಯಾಪ್ಟನ್ ಕೂಲ್ ಜನ್ಮದಿನಕ್ಕೆ

೧೯೮೧ ರ ಜುಲೈ ೭ರಂದು ಭೂಮಿಗೆ ಒಂದು ಉಡುಗೊರೆ ಬಂತು. ಆ ಉಡುಗೊರೆ ಶಾಂತ ಮೂರ್ತಿಯಾಗಿ ಹೊರಹೊಮ್ಮಿ, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಛಾಪು ಮೂಡಿಸಿ, ಎದುರಾಳಿಗಳಿಗೆ ಒಂದು ತರಹದ ಭಯ ಹುಟ್ಟಿಸಿತು. 28 ವರ್ಷಗಳ ನಂತರ ವಿಶ್ವಕಪ್ ಗೆದ್ದು ಭಾರತಕ್ಕೆ ಅರ್ಪಿಸಿತು. ಆ ಉಡುಗೊರೆಯ ಹೆಸರೇ ಮಹೇಂದ್ರ ಸಿಂಗ್ ಧೋನಿ.

ಎಂ. ಎಸ್. ಧೋನಿಯ ಆಟವೆಂದರೆ ಎಲ್ಲವನ್ನು ಬಿಟ್ಟು, ದೂರದರ್ಶನದ ಮುಂದೆ ತಪ್ಪದೆ ಹಾಜರಾಗುತ್ತಿದ್ದ, ಅದೆಷ್ಟು ಕೋಟಿ ಅಭಿಮಾನಿಗಳಲ್ಲಿ ನಾನೂ ಒಬ್ಬ. ಆತನ ಬ್ಯಾಟಿಂಗ್ ವೈಖರಿ, ತಂಡ ನಿರ್ವಹಣೆ, ಆತ್ಮೀಯತೆಯ ಸ್ವಭಾವ ಮತ್ತು ತೋರಿಕೆಯ ಆಟಗಾರರ ಪಟ್ಟಿಯಲ್ಲಿ ಇರದ ವ್ಯಕ್ತಿತ್ವ, ಉತ್ತಮ ಕೀಪರ್ ಇದೆಲ್ಲವನ್ನೂ ನೋಡಿದರೆ ಎಂಥಹ ವ್ಯಕ್ತಿಯೇ ಸರಿ; ಮಾಹಿಯ ಅಭಿಮಾನಿಯಾಗಿಬಿಡುತ್ತಾನೆ. ಕ್ರಿಕೆಟನಿಂದ ಹಣಗಳಿಸಿ, ಐಷಾರಾಮಿ ಜೀವನ ನಡೆಸಿದ ಅದೆಷ್ಟೋ ಜನರ ಮುಂದೆ ಭಾರತದ ಗಡಿ ಸೇವೆಗೆ ಹೆಜ್ಜೆಹಾಕಿ ಇತಿಹಾಸ ಸೃಷ್ಟಿಸಿದ ಮೊದಲಿಗನೆಂದು ಹೇಳಲು ನನಗೆ ಅತಿ ಹೆಮ್ಮೆಯಾಗುತ್ತದೆ. ಜನರು ಕಷ್ಟದ ಪರಿಸ್ಥಿತಿಯಲ್ಲಿ ದೇವರನ್ನು ನೆನೆಯುತ್ತಾರೆ ಆದರೆ ಕ್ರಿಕೆಟ್ ಅಂಗಳದಲ್ಲಿ ಸೋಲು ಎದುರು ಕಂಡರೆ ಮಾಹಿಯೆ ದೇವರಾಗಿ ಗೆಲ್ಲಿಸಿದ ಅದೆಷ್ಟೋ ಪಂದ್ಯಗಳನ್ನು ನಾವೆಲ್ಲರೂ ನೋಡಿದ್ದೇವೆ. 28 ವರ್ಷಗಳಿಂದ ಗೆಲ್ಲಲಾಗದ ವಿಶ್ವಕಪ್ಪನ್ನು ದೇಶಕ್ಕೆ ಅರ್ಪಿಸಿದ ಮಹಾನ್ ಆಟಗಾರನ ಬಗ್ಗೆ ಒಂದಷ್ಟು ಮಾಹಿತಿ…

೧. ಎಷ್ಟು ಪಂದ್ಯಗಳನ್ನು ಗೆಲ್ಲಿಸಲು ತನ್ನ ಪಾತ್ರ ಮಹತ್ವದಾಗಿದ್ದರು, ಇತರ ಆಟಗಾರರಿಗೆ ಕಪ್ ಒಪ್ಪಿಸಿ ದೂರಸರಿದು ಬಿಡುತ್ತಾರೆ.
ಇದರಲ್ಲಿ ಜೊತೆಗಾರರು ಸಂಭ್ರಮಿಸುತ್ತಾರೆ ಮತ್ತು ಗರ್ವ ಪಡುತ್ತಾರೆ ಆದರೆ ಮಾಹಿ …..

೨. ಆರಂಭದಲ್ಲಿ ಅತಿ ನಿಧಾನವಾಗಿ ಆಡಿ ಸ್ಥಿರಗೊಂಡು ಆಟದ ದಿಕ್ಕನ್ನು ಬದಲಿಸುತ್ತಾರೆ.

೩. ಹೆಲಿಕ್ಯಾಪ್ಟರ್ ಶಾಟ್ ವಿಶ್ವ ಜನರಿಗೆ ಪರಿಚಯಿಸಿದ. ಇದನ್ನು ನೋಡಿ ಈಗಲೂ ಕೆಲವು ಆಟಗಾರರು ಅದನ್ನು ಪ್ರಯತ್ನಿಸುತ್ತಿದ್ದಾರೆ.

೪. ಸಹನೆ ಮತ್ತು ತಾಳ್ಮೆ ಕಾಯ್ದುಕೊಂಡು ಅದ್ಭುತ ಆಟಗಾರ.

೫. ಅತಿವೇಗದ ಸ್ಟಂಪಿಂಗನಲ್ಲೂ ಎತ್ತಿದ ಕೈ.

೬. ಸೋತರೂ ಅತಿ ಬೇಸರಪಡದ ಗೆದ್ದರು ಅತಿ ಸಂಭ್ರಮಿಸಿದ ವ್ಯಕ್ತಿತ್ವ.

೭. ಎದ್ದು ತೋರುವುದು ಎದುರಾಳಿ ತಂಡದವರೊಂದಿಗಿನ ಆತ್ಮೀಯತೆ.

೮. ಬಲಿದಾನ ಚಿಹ್ನೆಯನ್ನು ಬಳಸಿ ವಿವಾದಕ್ಕೀಡಾದ/ಸುದ್ದಿಯಾದ ಮೊದಲ ಕ್ರಿಕೆಟಿಗ.

೯. ಕ್ರಿಕೆಟ್ ಆಟದ ಎಲ್ಲಾ ವಿಭಾಗದ ( best batsman, best keeper, best finisher, best captain) ತಂದೆ ಎಂದರು ತಪ್ಪಿಲ್ಲ.

೧೦. ಬಹುಶಹ ಭಾರತ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ ಭಾರತದ ಮೊದಲ ಕ್ರಿಕೆಟ್ ಆಟಗಾರ.

೧೧. ಕರ್ನಾಟಕ ಮತ್ತು ತಮಿಳುನಾಡಿಗೆ ಸಂಬಂಧಪಟ್ಟ ಕಾವೇರಿ ನದಿ ವಿಚಾರದಲ್ಲಿ ಖಡಕ್ಕಾಗಿ ರಜನಿಕಾಂತ್ಗೆ ಉತ್ತರಿಸಿ ಕನ್ನಡಿಗರ ಮನಸ್ಸನ್ನು ಗೆದ್ದವ.

೧೨. ನಾಯಕ ಸ್ಥಾನದ ಅರಿವು ಮೂಡಿಸಿ ಅದನ್ನು ವಿರಾಟ್ ಕೊಹ್ಲಿಗೆ ಧಾರೆಯೆರೆದ ತ್ಯಾಗಮಯಿ.

೧೩. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಕುಟುಂಬದವರಿಗೆ ಎರಡು ಕೋಟಿ ನೀಡಿ ಪಂದ್ಯ ಪ್ರಾರಂಭಿಸಿದ ದಾನಿಗಳ ಪಟ್ಟಿಯಲ್ಲಿ ಮೊದಲಿಗ.

೧೪. ಮತ್ತಷ್ಟು ಜನರ ಮನಸ್ಸನ್ನು ಕದಿಯಲು ಅವಕಾಶವಾದ M S Dhoni the untold story ಚಲನಚಿತ್ರ.

ಹೀಗೆ ಹೇಳುತ್ತಾ ಹೋದರೆ ಒಂದೋ, ಎರಡೋ ಲೆಕ್ಕ ಸಿಗದಷ್ಟು. ಎಂಎಸ್ ಧೋನಿ ಕ್ರೀಸ್ ನಲ್ಲಿ ಇರುವವರಿಗೆ ಆಟ ಎಂದಿಗೂ ಮುಗಿಯುವುದಿಲ್ಲ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ನಿಮ್ಮನ್ನು ಬಿಟ್ಟರೆ ನನ್ನ ಮೆಚ್ಚಿನ, ಒಳ್ಳೆಯ ಮತ್ತು ಶ್ರೇಷ್ಠ ಆಟಗಾರ ಮಹೇಂದ್ರಸಿಂಗ್ ಧೋನಿ. ಅವರು ಸರ್ವಕಾಲಿಕ ಸಿಕ್ಸರ್ ಹೊಡೆಯುತ್ತಾರೆ ಎಂದು ಶೇನ್ ವಾಟ್ಸನ್ ಮಗ ಹೇಳಿದ್ದುಂಟು. ನಿವೃತ್ತಿಯ ಬಗ್ಗೆ ಯೋಚಿಸಬೇಡಿ ಭಾರತಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ಲತಾ ಮಂಗೇಶ್ಕರ್ ಮನವಿ ಮಾಡಿದ್ದಾರೆ. ಆತ ಆಟವಾಡಲು ಹೆಚ್ಚಿನ ಅವಕಾಶಗಳು ಬಿಸಿಸಿಐ ನೀಡುತ್ತಿಲ್ಲ. ಈಗಲೂ ಕಣಕ್ಕೆ ಇಳಿದರೆ ಪಂದ್ಯ ರೋಮಾಂಚನ ವಾಗುವಲ್ಲಿ ಎರಡು ಮಾತಿಲ್ಲ. ಮತ್ತೆ ನಾವು ನಿಮ್ಮನ್ನು, ನಿಮ್ಮ ಆಟವನ್ನು ನೋಡಬೇಕೆನ್ನುವ ಆಸೆ ಈಗಲೂ ಹಸಿಯಾಗಿಯೆ ಇದೆ. ಬಿಸಿಸಿಐ ಇನ್ನಷ್ಟು ಅವಕಾಶಗಳನ್ನು ನೀಡಲಿ. ಈ ಮೂಲಕ ನಿಮ್ಮ ಸಾಧನೆಗಳ ಪಟ್ಟಿ ವಿಸ್ತರಿಸಲಿ. ನಿಮ್ಮ ಆಯಸ್ಸು, ಆರೋಗ್ಯ ಮತ್ತು ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.

-ಇರಾಜ ವೃಷಭ ಎ.

Leave a Reply

Your email address will not be published. Required fields are marked *