ದೋನಿ ಗ್ಲೌಸ್ ಬಗ್ಗೆ ಮಾತನಾಡಿದ ಐಸಿಸಿ ಗೆ ಅಭಿಮಾನಿಗಳ ತಪರಾಕಿ
ಪುಲ್ವಾಮ ದಾಳಿ ಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಸಲ್ಲಿಸುವ ಸಲುವಾಗಿ ಭಾರತದ ಖ್ಯಾತ ಕ್ರಿಕಟಿಗ ಎಂ.ಎಸ್.ದೋನಿ ವಿಶ್ವಕಪ್ ಕ್ರಿಕಟ್ ನಲ್ಲಿ ದಕ್ಷಿಣ ಆಫ್ರಿಕ ವಿರುದ್ದ ನಡೆದ ಪಂದ್ಯದಲ್ಲಿ ಭಾರತೀಯ ಸೇನೆಯ ಚಿನ್ಹೆ ಇರುವ ಗ್ಲೌಸ್ ಧರಿಸಿ ವಿಕೆಟ್ ಕೀಪಿಂಗ್ ನಡೆಸಿದ್ದರು.ಇದು ಭಾರತೀಯ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತ್ತು.ಇಷ್ಟೆ ಅಲ್ಲದೆ ವಿಶ್ವಕಪ್ ನ ಪ್ರಥಮ ಪಂದ್ಯವನ್ನು ಜಯಗಳಿಸಿತು.
ಧೋನಿ ಅವರು ಭಾರತೀಯ ಸೇನೆಯ ಚಿಹ್ನೆ ಇರುವ ಗ್ಲೌಸ್ ಧರಿಸಿದ್ದು ಲಕ್ಷಾಂತರ ಅಭಮಾನಿಗಳ ಹೃದಯ ಗೆದ್ದು ಇದರ ವಿಡಿಯೋ ವೈರಲ್ ಆಗಿತ್ತು.
ಧೋನಿ ಈ ತರಹದ ಗ್ಲೌಸ್ ಧರಿಸಿದ್ದಕ್ಕೆ ಐಸಿಸಿ(ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಆಕ್ಷೇಪ ವ್ಯಕ್ತಪಡಿಸಿ ,ಇನ್ನು ಈ ತರಹದ ಗ್ಲೌಸ್ ಧರಿಸುವುದು ಬೇಡ ಎಂದು ಸೂಚಿಸಿತ್ತು.
ಈ ಸೂಚನೆಗೆ ಐಸಿಸಿ ಐ ಸಹ ವಿರೋಧ ವ್ಯಕ್ತಡಿಸಿ ಧೋನಿ ಅವರ ಪರ ನಿಂತಿತ್ತು.
“ಯಾವ ಗ್ಲೌಸ್ ಧರಿಸಬೇಕು ಅಥವಾ ಧರಿಸಬಾರದು ಎಂಬುದು ಐಸಿಸಿ ನಿಯಮದಲ್ಲಿ ಇಲ್ಲ.ಅದನ್ನು ಪ್ರಶ್ನೆ ಮಾಡಬಾರದು.ಇಷ್ಟಕ್ಕೂ ರಾಷ್ಟ್ರ ಪ್ರೇಮ ಮೆರೆವ ಮತ್ತು ಹುತಾತ್ಮ ಯೋಧರ ಸ್ಮರಿಸಿ ಅವರ ಆತ್ಮಕ್ಕೆ ಶಾಂತಿ ಕೊರಲಾಗಿದೆಯೆ ಹೊರತು ಬೇರೇನೂ ಅಲ್ಲ”ಎಂದೂ ಅದು ತಿರುಗೇಟು ನೀಡಿದೆ.
ಈಗ ಧೋನಿ ಅಭಿಮಾನಿಗಳ ಸರಿದಿ.ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಐಸಿಸಿ ಯನ್ನೂ ತರಾಟೆಗೆ ತೆಗೆದು ಕೊಂಡಿದಾರೆ.
“ಧೋನಿ ಯಾವ ಗ್ಲೌಸ್ ಹಾಕಿಕೊಂಡು ವಿಕೆಟ್ ಕೀಪಿಂಗ್ ಮಾಡುತ್ತಾರೆ ಎನ್ನುವುದಕ್ಕಿಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೊಂದು ಕಳಪೆ ಗುಣಮಟ್ಟದ ಅಂಪೈರ್ ಗಳು ಇನ್ನೂ ಇದ್ದಾರೆ ಮತ್ತು ಈ ವ್ಯವಸ್ಥೆ ಯನ್ನು ಹೇಗೆ ಸರಿಮಾಡಿ ಸುಧಾರಿಸಲು ಸಾದ್ಯ ಎಂಬ ಬಗ್ಗೆ ಗಮನ ಹರಿಸಿ”ಎಂದು ತಪರಾಕಿ ನೀಡಿದ್ದಾರೆ.
ಅದೀಗ ಎಲ್ಲೆಡೆ ಹರಿದಾಡತ್ತಿವೆ.