ದಿ.5.9.18 ರಂದು ಶಿಕ್ಷಕರ ದಿನಾಚರಣೆ..ನಮ್ಮ ತಂದೆಯವರು ಸಹ ಶಿಕ್ಷಕರಾಗಿದ್ದರು.ಅವರ ಒಂದು ಅನುಭವದ ಮಾತು ಈ 4 ಸಾಲುಗಳು..

ನಮ್ಮ ಶಿಕ್ಷಕ ತಂದೆಯವರು ಹಾಗೂ ಮನೆಗೊ0ದಿನ ಊಟವು..

ನಮ್ಮ ತಂದೆಯವರು ಹೇಳಿದ್ದು ಇನ್ನು ಕಣ್ಣ ಮುಂದಿದೆ.ಅವರು ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಆರಂಭದ ದಿನಗಳಂತೆ.ಸ್ವಂತ ಊರಿನಿಂದ ತುಂಬಾ ದೂರದ ಊರು ಅದು.ಆಗ ಹೊಟೇಲ್ಗಳು ಇರಲಿಲ್ಲ.ಸಣ್ಣ ಗ್ರಾಮ ಬೇರೆ.ಊಟಕ್ಕೆ ಏನು ಎಂಬ ಚಿಂತೆ ಕಾಡಿತ್ತು.
ಸ್ವಂತ ಊರಿಂದ ಹೊರಡುವಾಗ ಅವರಮ್ಮ ಅಂದರೆ ನಮ್ಮಜ್ಜಿ ಒಂದಷ್ಟು ರೊಟ್ಟಿ,ಚೆಟ್ನಿ ಪುಡಿ ಕೊಟ್ಟು ಕಳುಹಿಸಿದ್ದರು.ಬೆಳಿಗ್ಗೆ ತಿಂಡಿಗೂ,ಮಧ್ನ್ಯಾನ ಹಾಗೂ ರಾತ್ರಿ ಊಟಕ್ಕೂ ಅದೇ..

ಮೂರ್ನಾಲ್ಕು ದಿನ ಹೇಗೋ ಕಳೆಯಿತು.ನಂತರ ಹೇಗೆ ಎಂಬ ಚಿಂತೆ.. ಈ ಅವಧಿಯಲ್ಲೇ ಅವರು ಹುಡುಗರ ನೆಚ್ಚಿನ ಶಿಕ್ಷಕರಾಗಿಬಿಟ್ಟರು.ಇವರಿಗೆ ಮಕ್ಕಳು ಬೆಳಗಿನ ತಿಂಡಿ ತಮ್ಮ ಮನೆಯಿಂದ ತರಲು ಆರಂಭಿಸಿದರು.ಮಧ್ಯಾಹ್ನದ ಊಟಕ್ಕೂ ಮಕ್ಕಳೇ ಹಠಮಾಡಿ,ಬಲವಂತದಿಂದ ತಮ್ಮ ಊಟದಲ್ಲೇ ಪಾಲು ನೀಡತೊಡಗಿದರು.ಅಲ್ಲಿಗೆ ತಿಂಡಿ ಹಾಗೂ ಮದ್ಯಾಹ್ನದ ಊಟದ ಚಿಂತೆ ದೂರವಾಯ್ತು..ಆದರೆ ಬಹುತೇಕ ರಾತ್ರಿ ಅವರು ಉಪವಾಸವೆ ಇರಬೇಕಿತ್ತು.

ಊರ ಗೌಡರಿಗೆ ವಿಷಯ ತಿಳಿಯಿತು.ಅವರು ಇವರನ್ನೊಮ್ಮೆ ಮನೆಗೆ ಕರೆದು”ಮೇಸ್ಟ್ರೆ ನೀವು ರಾತ್ರಿ ಊಟನ ಯಾವ ಸಂಕೋಚವೂ ಇಲ್ಲದೆ ನಮ್ಮ ಮನೆಯಲ್ಲೇ ಮಾಡಿ”ಎಂದರು.ಆದ್ರೆ ನಮ್ಮ ತಂದೆಗೆ ಮುಜುಗರ..ಬೇಡ ಎಂದರು..ಕೊನೆಗೆ ತಮಗೂ ಅನಿವಾರ್ಯ ಎಂಬ ಸತ್ಯದ ಅರಿವಾಗಿ ಒಪ್ಪಿಕೊಂಡರು.”ಗೌಡ್ರೆ ಊಟ ಮಾಡ್ತೇನೆ,ಆದ್ರೆ ನೀವು ತಿಂಗಳಿಗೆ ಇಷ್ಟು ಅಂತ ನನ್ನಿಂದ ಹಣ ಪಡಿಬೇಕು”ಎಂದರು..ಗೌಡ್ರು ಒಪ್ಪಲಿಲ್ಲ..ದೇವರು ನಂಗೆ ಸಾಕಷ್ಟು ಕೊಟ್ಟಿದ್ದಾನೆ,ಬೇಡವೇ ಬೇಡ.ಸುಮ್ನೆ ಬಂದು ಊಟ ಮಾಡಿಕೊಂಡು ಹೋಗಿ ಎಂದು ಅಧಿಕಾರಯುತವಾಗಿ ಹಾಗೂ ಪ್ರೀತಿಯಿಂದ ಹೇಳಿದಾಗ ಅನಿವಾರ್ಯ ಆಯಿತು.

ಊಟಕ್ಕೆಂದು ಗೌಡ್ರ ಮನೆಗೆ 1 ಗಂಟೆ ಮುಂಚೆ ಹೋಗುತ್ತಿದ್ದ ನಮ್ಮ ಸ್ವಾಭಿಮಾನಿ ತಂದೆ ಅವರ ಶತದಡ್ದ್ ಮಗನಿಗೆ ಪಾಠ ಮಾಡುತಿದ್ದರು.ದಿನಗಳೆದಂತೆ ಆ ಹುಡುಗ ಚೆನ್ನಾಗಿ ಒಡತೊಡಗಿದ..ಇಡೀ ಊರಿಗೆ ಊರೇ ಆಶ್ಚರ್ಯ ಪಡುವಷ್ಟು ಆತ ಬದಲಾದ..

ಈಗ ಈ ಶಿಕ್ಷಕರಿಗೆ ಸಿಗುತ್ತಿದ್ದ ಗೌರವವೇ ಬೇರೆರಯಾಯಿತು.ಊರ ಜಾತ್ರೆಯಿಂದ ಹಿಡಿದು ಪಂಚಾಯ್ತಿ ತನಕ ನಮ್ಮ ಮೇಸ್ಟ್ರು ಹೇಗೆ ಹೇಳ್ತಾರೋ ಹಾಗೆ ಅನ್ನೋ ವಾತಾವರಣ ನಿರ್ಮಾಣ ಆಯ್ತು.ಊರಿಗೆ ಸುದ್ದಿ ಪತ್ರಿಕೆ ಬರುವಂತೆ ಮಾಡಿದ್ದರು.ಓದಲು ಬರೆದವರು ಪ್ರತಿಷ್ಠೆಗಾಗಿ ಪೇಪರ್ ಹಾಕಿಸಿಕೊಳ್ಳತೊಡಗಿದರು.ಶಾಲೆಯ ಪ್ರೇಯರ್ ಸಮಯದಲ್ಲೂ ಪತ್ರಿಕೆ ಮುಖ್ಯ ಅಂಶಗಳನ್ನು ಅವರೇ ಮಕ್ಕಳಿಗೆ ಓದಿ ಹೇಳುತ್ತಿದ್ದರು.

ಗೌಡ್ರು ಮಗ ಒದಲ್ಲಿ ಚುರುಕಾಗಿದ್ದೆ ತಡ ಊರಲ್ಲಿ ನಮ್ಮ ತಂದೆಯವರನ್ನು ಊಟಕ್ಕೆ ಕರೆಯಲು ನಾಮುಂದು..ತಾಮುಂದು ಎಂಬ ವಾತಾವರಣ ನಿರ್ಮಾಣ ಆಯಿತು.ಕಡೆಗೆ ಊರಲ್ಲಿ ಈ ವಿಷಯಕ್ಕೆ ಒಂದು ಪಂಚಾಯ್ತಿ ನಡೆಯಿತು.”ಮೇಸ್ಟ್ರು ದಿನ ಒಬ್ಬರ ಮನೆಯಲ್ಲಿ ಸರದಿ ಪ್ರಕಾರ ಊಟ ಮಾಡಬೇಕು”ಎಂಬ ತೀರ್ಮಾನ ಆಯಿತು.

ಸತತ 12 ವರ್ಷಗಳ ಕಾಲ ಅಲ್ಲಿ ಅವರು ಸೇವೆ ಸಲ್ಲಿಸಿದ ಬಳಿಕ ಬೇರೆಡೆ ವರ್ಗ ಆಯಿತು.ಊರವರು ಆಗಿನ AEO ಕಚೇರಿಗೆ ಮುತ್ತಿಗೆ ಹಾಕಿದರು.ನಮಗೆ ಅವರೇ ಬೇಕು ಎಂದು ಹಠ ಹಿಡಿದರು.ಮತ್ತೆ 2 ವರ್ಷ ಅಲ್ಲಿ ಸೇವೆ ಸಲ್ಲಿಸಿ ಅವರು ಹೊರಟಾಗ ಇಡೀ ಉರಿಗೆ ಊರೇ ಸೇರಿತ್ತಂತೆ.ಎಲ್ಲರ ಕಣ್ಣಲು ನಿರುತುಂಬಿತ್ತು …
ಈ ವಿಷಯವನ್ನು ಅವರು ನನಗೆ ಕಣ್ಣಿಗೆ ಕಟ್ಟಿದಹಾಗೆ ಹೆಮ್ಮೆಯಿಂದ ಹೇಳಿದ್ದರು.

ನಿಜ..ಕೋನೆಯುಸಿರು ಇರುವವರೆಗೂ ಅವರು ಪಾಠ ಮಾಡುತ್ತಲೇ ಇದ್ದರು.ಈ ಶಿಕ್ಷಕ ಕೆಲಸವನ್ನು ಅವರು ಪೂಜಿಸುತ್ತಿದ್ದರು..ಪ್ರೀತಿಸುತ್ತಿದ್ದರು..ಮಕ್ಕಳನ್ನು ಹೇಗೇಬೇಕಾದರು ತಿದ್ದಿ ದಾರಿಗೆತರಬಹುದು ಎಂದು ನಂಬಿದ್ದರು.ಹಾಗೆ ಮಾಡಿದರು ಕೂಡ.

ಇನ್ನೊಂದು ವಿಷಯ ಹೇಳಲೇಬೇಕು.ಅವರು ತಮ್ಮ 80ನೆ ವಯಸ್ಸಿನಲ್ಲಿ ನಿಧಾನರಾದಾಗ ಅವರಶಿಷ್ಯರು ಮೃತ ದೇಹವನ್ನು ಸ್ವಂತ ಊರಿಗೆ ಒಯ್ಯಲು ಬಿಡಲಿಲ್ಲ.ತಮ್ಮದೇ ಜಮೀನಿನಲ್ಲಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆಡೆಸಿಕಟ್ಟರು.ಒಬ್ಬ ಶಿಕ್ಷಕನಿಗೆ ಇದಕ್ಕಿಂತ ಗೌರವ ಬೇಕೇ? ಅದೇ ಕಾರಣಕ್ಕೆ ಇರಬೇಕು ನನಗೆ ಇಂದು ಶಿಕ್ಷಕರ ರೆಂದರೆ ಅಪಾರ ಗೌರವ ಹಾಗೂ ಪ್ರೀತಿ.

ನಾನು ಕೆಲಕಾಲ ಗೌರವ ಉಪನ್ಯಾಸ ಆಗಿ ಕೆಲಸ ಮಾಡಿದ್ದೆ.ನನ್ನ ಸ್ವಂತ ತಮ್ಮ ಸಹ ಇದೆ ಹಾದಿಯಲ್ಲಿ ನೆಡೆದು ಗೌರರವ ಸಂಪಾಡಿಸಿದ್ದಾನೆ.ನನ್ನ ದೊಡ್ಡಪ್ಪ ಸಹ ಶಿಕ್ಷಕರು.ಅವರ ಮಗ ಸಹ ಉಪನ್ಯಾಸಕ.

ನಿಸ್ವಾರ್ಥದಿಂದ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಶಿಕ್ಷಕನಿಗೆ ಎಂದು ಸಾವಿಲ್ಲ ಎಂಬುದಕ್ಕೆ ನಮ್ಮ ತಂದೆಯವರ ವ್ಯಕ್ತಿತ್ವವೇ ಸಾಕ್ಷಿ.
ಈಗಲೂ ನಮ್ಮೂರಲ್ಲಿ ನನ್ನನ್ನು ಕರೆಯುವುದು”ಮರುಳಯ್ಯ ಮೇಸ್ಟ್ರು ಮಗ ಆರಾಧ್ಯ “ಎಂದೇ..
-ಜಿ. ಎಂ.ಆರ್.ಆರಾಧ್ಯ

Leave a Reply

Your email address will not be published. Required fields are marked *