ದಾವಣಗೆರೆ ಲೋಕಸಭೆ ಚುನಾವಣೆ:ಮಹಿಳೆಯರಾರೂ ಟಿಕೆಟ್ ಗಾಗಿ ಧ್ವನಿ ಎತ್ತಲಿಲ್ಲ

1991 ಹಾಗೂ 1996 ರ ಲೋಕಸಭಾ ಚುನಾವಣೆಯಲ್ಲಿ ಭರಮಸಾಗರದ ಪೀಕಿ ಬಾಯಿ ಎಂಬ ಮಹಿಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು ಹೊರತುಪಡಿಸಿ ಬೇರೆ ಯಾವ ಮಹಿಳೆಯರು ಕಣದಲ್ಲಿ ಇರಲಿಲ್ಲ ಎಂಬುದನ್ನು ನಾನು ಕೇಳಿದ್ದೇನೆ.ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ.49.45 ರಷ್ಟು ಅಂದರೆ ಅರ್ಧದಷ್ಟು ಮಹಿಳ ಮಮತದಾರರು ಇದ್ದರು ಸಹ ಅವರನ್ನು ಇನ್ನಿಲ್ಲದಂತೆ ಕಡೆಗಣಿಸಿರುವುದು ನಿಜಕ್ಕೂ ವಿಪರ್ಯಾಸ.
ಮೊನ್ನೆ ಮೊನ್ನೆ ಧಾರವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಮಹಿಳೆಯರ ಆದ್ಯತೆ ಬಗ್ಗೆ ಕೆಲವರು ಸೊಲ್ಲು ಎತ್ತಿತ್ತು ನನಗೆ ನೆನಪಿದೆ.ಎಲ್ಲಿಹೋಗಿತು ಈಗ ಇದನ್ನು ಪ್ರಶ್ನಿಸಿ ಧ್ವನಿ ಎತ್ತುವ ಗಟ್ಟಿತನ.ಕೆಲವೊಮ್ಮೆ ಮಹಿಳಾ ಸಾಹಿತಿಗಳು ನಮಗೂ ಈ ರಾಜಕೀಯ ವ್ಯವಸ್ಥೆಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.ಮಹಿಳಾ ಸಬಲೀಕರಣ, ಮಹಿಳ ಸ್ವಾತಂತ್ರದ ಬಗ್ಗೆ ಮಾತುಗಳು ಎಲ್ಲಿಹೋಗಿವೆ?

ನಮ್ಮ ರಾಜಕೀಯ ನಾ(ಲಾ)ಯಕರು ಸಹ ಹೀಗೆ ಇದ್ದಾರೆ.ತಮ್ಮ ನಂತರ ಬೇರೆ ಯಾರು ಎಂಬ ಪ್ರಶ್ನೆಗೆ ಅವರ ಬಳಿ “ನನ್ನ ಮಗ,ನನ್ನ ಹೆಂಡತಿ,ಸಹೋದರ..”ಎಂಬ ಉತ್ತರ ಬಿಟ್ಟು ಬೇರೆ ಏನು ಬರಲು ಸಾಧ್ಯ?
ಯಾರನ್ನು ಬೆಳೆಸುವ ಮನಸ್ಸು ಇವರಿಗಿಲ್ಲ.ಹೆಚ್ಚು ಎಂದರೆ ಪಾಲಿಕೆ ಟಿಕೆಟ್, ಸ್ಥಳೀಯ ಪ್ರಾಧಿಕಾರದ ಅಧ್ಯಕ್ಷ ಅಥವಾ ಸದಸ್ಯ,ಇತರೆ ಆಶಯ..ಅದು ಇದು..ಸದಸ್ಯತ್ವ.
ಸ್ಥಳೀಯ ರಾಜಕೀಯ ಮುಖಂಡರು ಈ ವಿಷಯದಲ್ಲಿ ಚರ್ಚೆಗೆ ಬರುವುದಾದರೆ ವೇದಿಕೆ ಕಲ್ಪಿಸಲು ಜನಮಿಡಿತ ಸಾದಾಸಿದ್ದ.

ಮಹಿಳೆ,ಸಮಾನತೆ,ಅವಕಾಶ,..ಹೀಗೆ ಮಾರುದ್ಧದ ಭಾಷಣ ಬಿಗಿಯುವ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ದಾವಣಗೆರೆಯಲ್ಲೂ ಇದ್ದಾರೆ.ಆದರೆ ಇವೆಲ್ಲವೂ ಕೇವಲ ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟಕರ.
ಚಿತ್ರದುರ್ಗದಿಂದ 1977 ರಲ್ಲಿ ಬೇರ್ಪಟ್ಟು ಸ್ವತಂತ್ರ ಲೋಕಸಭಾ ಕ್ಷೇತ್ರ ಎಂದು ದಾವಣಗೆರೆ ಮಾರ್ಪಾಡು ಆದ ಬಳಿಕ ಈ ವರೆಗೆ 11 ಮಹಾಚುನಾವಣೆಗಳು ನಡೆದಿವೆ.ಈಗ ನಡೆಯುತ್ತಿರುವುದು 12 ನೇ ಯದು.ಆದರೆ ರಾಷ್ಟ್ರೀಯ ಪಕ್ಷಗಳು ಈ ವರೆಗೂ ಯಾವುದೇ ಮಹಿಳಾ ಅಭ್ಯರ್ಥಿಗೂ ಟಿಕೆಟ್ ನೀಡದೇ ಇರುವುದನ್ನು ಯಾವುದೇ ಬುದ್ದಿಜೀವಿಗಳು,ಮಹಿಳಾ ಸಂಘಟನೆಗಳು,ಸಮಾನ ಹಕ್ಕು ಹೋರಾಟಗಾರರು,ಅಷ್ಟೇ ಏಕೆ ನನ್ನನ್ನು ಸೇರಿಸಿ ಯಾವುದೇ ಪತ್ರಕರ್ತರು ಪ್ರಬಲವಾಗಿ ಖಂಡಿಸದೇ ಇರುವುದು ಸಹ ಆಶ್ಚರ್ಯ.

5 ವರ್ಷಕೊಮ್ಮೆ ಬರುವ ಚನಾವಣೆ ಯಲ್ಲಿ ಅಭ್ಯರ್ಥಿ ಒಬ್ಬರಿಗೆ(ಸೋಲಲಿ ಅಥವಾ ಗೆಲ್ಲಲಿ) 4 ಅಥವಾ 5 ಸಲ ಟಿಕೆಟ್ ಕೊಟ್ಟರೆ 20 ರಿಂದ 25 ವರ್ಷ ಇತರೆ ಕಾರ್ಯಕರ್ತರು ಅವರ ಬಾಲ ಬಡಿದುಕೊಂಡು ಇರಬೇಕಾ ಎಂಬ ಕೂಗು ಅನೇಕರದ್ದು.

Leave a Reply

Your email address will not be published. Required fields are marked *