ದಾವಣಗೆರೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ

ದಾವನಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಅವರ ಹೆಸರು ಅಂತಿಮವಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನ ಕಾರಣ ನೀಡಿ ಮನೆ ಬಾಗಿಲಿಗೆ ಬಂದಿದ್ದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರು.ಹಾಗಾಗಿ ಈಗ ಮಂಜಪ್ಪ ಅವರ ಹೆಸರನ್ನು ಅಂತಿಮವಾಗಿ ಶಿವಶಂಕರಪ್ಪ ಅವರ ಶಿಫಾರಸ್ಸು ಮೇರೆಗೆ ಅಂತಿಮಗೊಳಿಸಲಾಗಿದೆ.

ಇಂದು ಮಂಜಪ್ಪ ಅವರು ಡಾ. ಶಿವಶಂಕರಪ್ಪ ಅವರ ಆಶೀರ್ವಾದ ಪಡೆದು ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಈ ನಡುವೆ ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಹಾಗೂ ಚೆನ್ನಗಿರಿ ಮಾಜಿ ಶಾಸಕ ವಡ್ನಾಲ್ ರಾಜಣ್ಣ ಅವರುಗಳನ್ನು ಸಹ ಸ್ಪರ್ದಿಸಲು ಕೇಳಲಾಗಿತ್ತು.ಆದರೆ ಅವರುಗಳು ಸಹ ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *