ದಾವಣಗೆರೆ ಮೆಡಿಕಲ್ ಕಾಲೇಜಿಗೆ ಮಾನ್ಯತೆ ರದ್ದು ಭೀತಿ; ತಿಂಗಳಲ್ಲಿ ಅಕ್ರಮ ವಸೂಲಿ ಶುಲ್ಕ ಬಡ್ಡಿಸಹಿತ ಹಿಂದಿರುಗಿಸಲು ಆದೇಶ
ವಿದ್ಯಾರ್ಥಿಗಳಿಂದ ಅಕ್ರಮವಾಗಿ ಹೆಚ್ಚುಶುಲ್ಕ ವಸೂಲಿ, ದಾವಣಗೆರೆ ಮೆಡಿಕಲ್ ಕಾಲೇಜು ರದ್ದು!
ಸರ್ಕಾರ ನಿಗದಿ ಪಡಿಸಿದ ಶುಲ್ಕದ ಎರಡುಪಟ್ಟು ಹಣವನ್ನು ಅಕ್ರಮವಾಗಿ ವಸೂಲಿ ಮಾಡಿರುವ ದಾವಣಗೆರೆಯ ಬಾಪೂಜಿ ವಿದ್ಯಾ ಸಂಸ್ಥೆಯ ಜೆ.ಜೆ.ಎಂ.ಮೆಡಿಕಲ್ ಕಾಲೇಜು ಈಗ ಸಂಕಟಕ್ಕೆ ಸಿಲುಕಿದೆ. ನಿಗದಿತ ಬೋಧನಾ ಶುಲ್ಕ ಒಬ್ಬ ವಿದ್ಯಾರ್ಥಿಗೆ 77ಸಾವಿರ ರೂಪಾಯಿ ಇದ್ದರೆ ಈ ಕಾಲೇಜು 1.54 ಲಕ್ಷ ರೂ ವಸೂಲುಮಾಡಿದೆ. ಇದೆ ರೀತಿ ಆಡಳಿತ ಮಂಡಳಿ ಕೋಟಾದ ಶುಲ್ಕ 6.31ಲಕ್ಷ ರೂ ಗಳಿದ್ದರೆ ಕಾಲೇಜು 8.23 ಲಕ್ಷರೂ ವಸೂಲು ಮಾಡಿದೆ. ಸರ್ಕಾರದ ಆಸ್ಪತ್ರೆಯನ್ನು ಈ ವಿದ್ಯಾರ್ಥಿಗಳು ಬಳಸಿದರು ಸಹ ಅವರಿಂದ ಕ್ಲಿನಿಕಲ್ ಶುಲ್ಕ ಎಂದು ವಸೂಲು ಮಾಡಿದ್ದಾರೆ ಎಂಬ ದೂರುಗಳು ಇದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರ ನ್ಯಾಯಮೂರ್ತಿ ಬಿ.ಮನೋಹರ್ ಅವರ ನೇತೃತ್ವದಲ್ಲಿ ಒಂದು A O C(The Admission Overseeing committee)ಯನ್ನು ರಚಿಸಿತ್ತು. ಪಾಲಕರ ಹಾಗೂ ಆಡಳಿತ ಮಂಡಳಿಯ ವಾದ ಪ್ರತಿವಾದ ಆಲಿಸಿದ ಸಮಿತಿಯ ನಿನ್ನೆ ತನ್ನ ತೀರ್ಪು ನೀಡಿದೆ.
ಇನ್ನೊಂದು ತಿಂಗಳಲ್ಲಿ ಅಕ್ರಮವಾಗಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಹಣವನ್ನು ಶೇ.6ರ ಬಡ್ಡಿಸಹಿತ ಹಿಂದಿರುಗಿಸಲು ಆದೇಶಿಸಿದೆ.ಈ ಕುರಿತು ತಕ್ಷಣವೇ (RGUHS)Raajiv Gandhi University of Health Sciences ಈ ಆದೇಶ ತಲುಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಒಂದು ವೇಳೆ ತಪ್ಪಿದರೆ ಅಕ್ರಮವಾಗಿ ವಸೂಲಿ ಮಾಡಿ ರುವ ಹಣದ ಎರಡುಪಟ್ಟು ದಂಡ ಮರುವಸೂಲಿ ಮಾಡುವ ಎಚ್ಚರಿಕೆಯನ್ನು ಸಹ ನೀಡಿದೆ. ಕ್ಯಾಪಿಟೇಶನ್ ಆಕ್ಟ್ 1984 ಹಾಗೂ ಅಡ್ಮಿಷನ್ ಆಕ್ಟ್ 2016 ಪ್ರಕಾರ ಈ ಕಾಲೇಜು ಮಾನ್ಯತೆಯನ್ನು ಸಹ ರದ್ದುಗೊಳಿಸುವ ಅಧಿಕಾರ M C I (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ)ಗೆ ಇದ್ದು ರಾಜ್ಯ ಸರ್ಕಾರ ಈ ಕುರಿತು ಸಹ ಎಚ್ಚರಿಕೆ ನೀಡಬೇಕು ಎಂದು ನ್ಯಾ.ಬಿ. ಮನೋಹರ್ ನೇತೃತ್ವದ ಸಮಿತಿ ಆದೇಶಿಸಿದೆ. 2017-18ಹಾಗೂ2018-19 ಎರಡು ಸಾಲಿನ ಮೆಡಿಕಲ್ ವಿದ್ಯಾರ್ಥಿಗಳ ಶುಲ್ಕವನ್ನು ಈಗ ಜೆ.ಜೆ.ಎಂ.ಮೆಡಿಕಲ್ ಕಾಲೇಜು ಹಿಂದಿರುಗಿಸಬೇಕಿದೆ.ಅದೂ ಇನ್ನು 30 ದಿನಗಳ ಒಳಗೆ..