ತೇಜಸ್ಸಿ ಸೂರ್ಯ ಅವರ ಬಗ್ಗೆ ಮಾತನಾಡುವಾಗ ಅವರ ಪುರ್ವಾಪರ ಅರಿವಿರಲಿ

ಚಿತ್ರದಲ್ಲಿರುವ ಎಡ ಭಾಗದ ಪತ್ರಿಕಾ ಪ್ರಕಟಣೆ ಗಮನಿಸಿ. ಅಂದು ತಾರೀಕು 20 ಜುಲೈ 1999. ಕಾರ್ಗಿಲ್ ಯುದ್ಧದ ಸಮಯವಾಗಿತ್ತು. ದೇಶ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ರಿಲೀಫ್ ಫಂಡ್ ಗೆ ಧನ ಸಹಾಯ ಮಾಡುವಂತೆ ದೇಶದ ಜನತೆಗೆ ಕರೆ ಕೊಟ್ಟಿದ್ದರು. 9 ವರ್ಷ ಪ್ರಾಯದ, 4 ನೇ ತರಗತಿ ಕಲಿಯುತ್ತಿದ್ದ ಬಾಲಕ ತಾನು ಬಿಡಿಸಿದ 17 ಚಿತ್ರಗಳನ್ನು ಮಾರಿ ಬಂದ ಹಣವನ್ನು ಸಂಗ್ರಹಿಸಿ ಇಟ್ಟ ರೂಪಾಯಿ 1,220 ಹಾಗೂ ತಂದೆಯ ಭರವಸೆಯ ಸೈಕಲ್ ಖರೀದಿಸುವ ದುಡ್ಡು, ಒಟ್ಟು ಸೇರಿಸಿ ರೂಪಾಯಿ 3000ದಷ್ಟು ಹಣವನ್ನು ತನ್ನ ಶಾಲೆಯ ಮುಖ್ಯಸ್ಥರ ಕೈಗೆ ನೀಡಿ, ಆ ಹಣವನ್ನು ಕಾರ್ಗಿಲ್ ರಿಲೀಫ್ ಫಂಡ್ ಗೆ ತಲುಪಿಸುವಂತೆ ವಿನಂತಿ ಮಾಡಿದ. ಆ ಬಾಲಕನೇ ನಮ್ಮೆಲ್ಲರ ಕಣ್ಮಣಿ, ನೆಚ್ಚಿನ ಸಂಸದ ತೇಜಸ್ವಿ ಸೂರ್ಯ. ದೇಶ ಪ್ರೇಮ ಎಂಬುದು ಹುಟ್ಟಿನಿಂದಲೇ ಬರಬೇಕೇ ಹೊರತು, ಬೇರೆಯವರು ಹೇಳಿಕೊಟ್ಟು ಬರುವಂತಹುದಲ್ಲ. ದುಡ್ಡಿಗಾಗಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತಿದ್ದ ಬೆಡ್ ದಂದೆಯನ್ನು ಬಯಲಿಗೆಳೆದ ತೇಜಸ್ವಿ ಸೂರ್ಯರನ್ನು ಅವಮಾನಸುವ, ಅವರ ಕಾಲೆಳೆಯಲು ಪ್ರಯತ್ನಿಸುವ ಭ್ರಷ್ಟ ಹಾಗೂ ದೇಶ ದ್ರೋಹಿ ರಾಜಕಾರಣಿಗಳು ತೇಜಸ್ವಿ ಸೂರ್ಯ ಅವರ ಕಾಲಿನ ದೂಳಿಗೂ ಸಮಾನರಲ್ಲ. ತೇಜಸ್ವಿ ಸೂರ್ಯ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕೂ ಈ ಭ್ರಷ್ಟರಿಗೆ ಇಲ್ಲ.

Leave a Reply

Your email address will not be published. Required fields are marked *