ತೆಲುಗಿನ ಖ್ಯಾತ ಸ್ಟಾರ್ ನಟನ, ತಂದೆಯ ದುರ್ಮರಣ?
ಆಂಧ್ರ ಪ್ರದೇಶದ ನಟ ಜೂನಿಯರ್ ಏನ್ ಟಿ ಆರ್ ಅವರ ತಂದೆ ನಟ ನಂದಮೂರಿ ಹರಿಕೃಷ್ಣ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.
ನಟ ನಂದಮೂರಿ ಹರಿಕೃಷ್ಣ ಅವರು ಆಂಧ್ರ ಪ್ರದೇಶದ ದಿವಂಗತ ನಂದಮೂರಿ ತಾರಕ ರಾಮಾರಾವ್ ಹಿರಿಯ ಪುತ್ರರಾಗಿದ್ದಾರೆ. 61 ವರ್ಷ ವಯಸ್ಸಾಗಿದ್ದ ನಂದಮೂರಿ ಹರಿಕೃಷ್ಣ ಅವರು, ತೆಲಂಗಾಣದ ನಲ್ಗೊಂಡ ಬಳಿ ಬೀಕರ ಅಪಘಾತ ಸಂಭವಿಸಿ ಇಹಲೋಕ ತ್ಯಜಿಸಿದ್ದಾರೆ.
ನಂದಮೂರಿ ಹರಿಕೃಷ್ಣ ಪರಿಚಯರಸ್ಥರ ಮದುವೆಗೆಂದು ನೆಲ್ಲೂರು ಜಿಲ್ಲೆಯ ಕಾವಲಿಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಹೊಡೆದಿದೆ.
ಭೀಕರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ತಕ್ಷಣ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹರಿಕೃಷ್ಣ ಪುತ್ರ ಜ್ಯೂನಿಯರ್ ಎನ್ ಟಿಆರ್ ಮತ್ತು ಕಲ್ಯಾಣ ಕುಮಾರ್ ಆಸ್ಪತ್ರೆಗೆ ಧಾವಿಸಿದ್ದಾರೆ. ಹರಿಕೃಷ್ಣ ಅವರು ಪ್ರಸ್ತುತ ಈಗಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಾಮೈದ ಆಗಿದ್ದಾರೆ.
ಖ್ಯಾತ ನಟ ಎನ್‍ಟಿ ರಾಮ್ ರಾವ್ ಅವರ ಹಿರಿಯ ಪುತ್ರನಾಗಿರುವ, ಹರಿಕೃಷ್ಣ ಅವರು ತೆಲುಗಿನ ಸೀತಯ್ಯ ಸೇರಿದಂತೆ,ಅವರು ಬಾಲನಟನಾಗಿ ಹಾಗೂ ನಟನಾಗಿ 13 ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರಾವಣಮಾಸಂ ಅವರ ಕೊನೆಯ ಚಿತ್ರವಾಗಿತ್ತು. ನಿರ್ಮಾಪಕರೂ ಕೂಡ ಆಗಿದ್ದು, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು.