ತಾಯಿ, ಮಗ ಇಬ್ಬರೂ ಒಟ್ಟಿಗೆ ಎಸ್ಸೆಸ್ಸೆಲ್ಸಿ ಪಾಸ್
ಮಡಿಕೇರಿ.ಆ 11- ಈಕೆ ನಿಜಕ್ಕೂ ಛಲಗಾರ್ತಿಯೆ ಸರಿ. ಓದುವುದನ್ನು ಬಿಟ್ಟು18 ವರ್ಷವಾದರು ಮತ್ತೆ ಪರೀಕ್ಷೆ ಬರೆದು ಮಗನ ಜೊತೆಯೇ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾರೆ,
31 ವರ್ಷ ವಯಸ್ಸಿನ ಇವರ ಹೆಸರು ಪಡಿಕಲ್ ಕುಸುಮ ಚಂದ್ರಶೇಖರ್. ಇವರು ಹಲವು ಕಾರಣಗಳಿಂದ ಬಾಲ್ಯದಲ್ಲೇ ಮದುವೆಯಾಗುವ ಪ್ರಸಂಗ ಎದುರಾಯಿತು. ಹೀಗಾಗಿ ಕುಸುಮ ಚಂದ್ರಶೇಖರ್ ತಾವು 9ನೇ ತರಗತಿ ಓದುತ್ತಿರುವಾಗಲೇ ಮದುವೆಯಾದರು ಕುಸುಮ ತನ್ನ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣರಾದ ನಂತರ ಎರಡನೇ ಬಾರಿಗೆ ತನ್ನ ಮಗ ಪಿ ಗೌತಮ್ ಜೊತೆಗೆ ಪರೀಕ್ಷೆ ಬರೆಯಲು ಅರ್ಜಿ ಹಾಕಿದರು,
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಕುಸುಮ ತನ್ನ ಮಗನ ಜೊತೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ಯಾವ ಕಲಿಕೆಗೂ ವಯಸ್ಸು ಮುಖ್ಯವಲ್ಲ ಎಂದು ಕುಸುಮ ತೋರಿಸಿಕೊಟ್ಟಿದ್ದಾರೆ. ತಾಯಿ ಮಗ ಇಬ್ಬರು ಪರೀಕ್ಷೆ ಬರೆದಿದ್ದು ಮಾತ್ರವಲ್ಲದೆ ಪರೀಕ್ಷೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ಕ್ರಮವಾಗಿ 267 ಮತ್ತು 294 ಅಂಕಗಳನ್ನು ಪಡೆದಿದ್ದಾರೆ.
ಈ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕುಸುಮ ಚಂದ್ರಶೇಖರ್ ಟಿ ಶೆಟ್ಟೀಗರಿಯ ಮಾಯನಮಾಡ ಮಂದಣ್ಣ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದರು. ಕೊಡಗಿನ ಕೈಕೇರಿ ಗ್ರಾಮದ ನಿವಾಸಿಯಾಗಿರುವ ಕುಸುಮ ಸಮಾಜ ಸೇವಿಕಿಯು ಹೌದು