ತಾನೊಂದು ಬಗೆದರೆ ದೈವ.‌.. ಆಕೆ 3 ವರ್ಷದ ತನ್ನ ಕಂದನನ್ನು ಬಾವಿಗೆ ಎಸೆದಳು ನಂತರ

ಶಿವಮೊಗ್ಗ ನಂ. 7- ಗಂಡನ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ತನ್ನ 3 ವರ್ಷದ ಮುದ್ದು ಮಗನನ್ನು ಬಾವಿಗೆ ಎಸೆದು ನಂತರ ತಾನೂ ಆತ್ಮಹತ್ಯೆಮಾಡಿಕೊಳ್ಳುವ ನಿರ್ಧಾರದಿಂದ ಮೊದಲು ಆತನನ್ನು ಎಸೆದುಬಿಟ್ಟಳು. ನಂತರ ತಾನೂ ಬಾವಿಗೆ ಹಾರಿದಳು.
ಈ ದೃಶ್ಯವನ್ನು ನೋಡಿದ ಕೆಲವರು ಬಾವಿಗೆ ಇಳಿದು ಆಕೆಯನ್ನು ಹರಸಾಹಸ ಪಟ್ಟು ರಕ್ಷಿಸಿದರು. ನಂತರವಷ್ಟೇ ಅವರಿಗೆ ತಿಳಿದದ್ದು ಮಗು ಸಹ ಮೊದಲೇ ನೀರಿನಲ್ಲಿ ಎಸೆಯಲ್ಪಟ್ಟಿತ್ತು ಎಂಬುದು.

ತನ್ನನ್ನು ಜನ ಬದುಕಿಸಿದ ಬಳಿಕ ಆಕೆ ಮಗು ಸಹ ನೀರಿನಲ್ಲಿರುವುದನ್ನು ತಿಳಿಸಿದಳು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು‌.
ಕೆಳಗಿನ ಘಟನೆ ಓದಿ:
ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಹಾರಿದ್ದ ತಾಯಿ ಚೈತ್ರಾಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಆದರೆ ಕೌಶಿಕ್ (3) ಸಾವನ್ನಪ್ಪಿದ್ದಾನೆ. ತನ್ನ ಪತಿಯೊಂದಿಗೆ ಜಗಳವಾಡಿಕೊಂಡಿದ್ದ ಚೈತ್ರಾ ಬೀರನಕೆರೆಯಲ್ಲಿರುವ ತನ್ನ ತಾಯಿ ಮನೆಗೆ ಬಂದು ಉಳಿದುಕೊಂಡಿದ್ದಳು. ಇಂದು ಬೆಳಿಗ್ಗೆ ಮಗುವನ್ನು ನೋಡಿಕೊಂಡು ಹೋಗಲು ಬಂದಿದ್ದ ಪತಿ ಮಗುವಿಗೆ ತಿಂಡಿ ಕೊಡಿಸಿ, ಚೈತ್ರಾಳಿಗೆ ಬುದ್ಧಿವಾದ ಹೇಳಿ ತನ್ನ ಕೆಲಸಕ್ಕೆ ತೆರಳಿದ್ದನು. ಬಳಿಕ ಸಿಟ್ಟಿನಿಂದ ತನ್ನ ತಾಯಿಯೊಂದಿಗೆ ಜಗಳವಾಡಿಕೊಂಡು ಚೈತ್ರ ಮಗುವನ್ನು ಎತ್ತಿಕೊಂಡು ಹೋಗಿ ಬಾವಿಗೆ ಹಾರಿದ್ದಾಳೆ.

ಮಗುವನ್ನು ಮೊದಲು ಬಾವಿಗೆ ಎಸೆದು ನಂತರ ತಾನು ಹಾರಿದ್ದಾಳೆ. ಇದನ್ನು ಕಂಡ ಚೈತ್ರಾಳ ತಾಯಿ ಅಕ್ಕಪಕ್ಕದವರನ್ನು ಕೂಗಿ ಸಹಾಯಕ್ಕೆ ಕರೆದಿದ್ದಾರೆ. ತಕ್ಷಣವೇ ಸ್ಥಳಿಯರು ಬಂದು ಬಾವಿಗೆ ಹಾರಿ ಚೈತ್ರಾಳನ್ನು ರಕ್ಷಿಸಿದ್ದಾರೆ. ಆಗ ಮಗು ಕೂಡ ಬಾವಿಯಲ್ಲಿದೆ ಎಂದು ಚೈತ್ರ ಹೇಳಿದಾಗ ಮತ್ತೆ ಸ್ಥಳಿಯರು ಬಾವಿಗೆ ಇಳಿದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅದರೆ ದುರಾದೃಷ್ಟವಶಾತ್ ಮಗು ನೀರಿನಲ್ಲಿ ಉಸಿರುಗಟ್ಟಿ ಸಾವನಪ್ಪಿದೆ.

Leave a Reply

Your email address will not be published. Required fields are marked *