ತಮ್ಮ ‘ರಿಯಲ್ ಲವ್ ಸ್ಟೋರಿ’ ಬಯಲು ಮಾಡಿದ ನಟ ಜಗ್ಗೇಶ್!

35ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಜಗ್ಗೇಶ್ ದಂಪತಿ ಈ ಸಂತಸವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಯಾಕೆಂದರೆ ಇವತ್ತು ನವರಸ ನಾಯಕ ಜಗ್ಗೇಶ್ ಮತ್ತು ಪರಿಮಳ ಅವರು ಮದುವೆ ಆದ ದಿನ.

ಹೀಗಾಗಿ, ಜಗ್ಗಣ್ಣನ ಮದುವೆ ಅಂದ್ರೆ ಆ ಹಳೇ ಕಥೆಗಳೆಲ್ಲಾ ನನೆಪಾಗುತ್ತೆ. ನಟ ಜಗ್ಗೇಶ್ ಅವರ ಮದುವೆ ಸುಪ್ರೀಂ ಕೋರ್ಟ್ ನಲ್ಲಿ ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ. ಜಗ್ಗೇಶ್ ಮತ್ತು ಪರಿಮಳ ಅವರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಮ್ಮಿಯಿಲ್ಲ. ಸಿನಿಮಾಗಳಲ್ಲಿ ಬರುವಂತೆ ಲವ್, ಫೈಟ್, ಪೊಲೀಸ್, ಕೇಸ್ ಹೀಗೆ ಎಲ್ಲವೂ ಜಗ್ಗೇಶ್ ಅವರ ಬಾಳಲ್ಲಿ ಇದೆ.

ಪರಿಮಳ ಅವರನ್ನ ಅವರ ಮನೆಯಿಂದ ಜಗ್ಗೇಶ್ ಅವರು ಕರೆದುಕೊಂಡು ಬಂದುಬಿಟ್ಟಿದ್ದರು. ಆ ಸಮಯದಲ್ಲಿ ಅವರ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. ‘ಚಿತ್ರನಟನಿಂದ ಕಿಡ್ನ್ಯಾಪ್’ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.ಈ ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು.

2 ಸಾವಿರದಲ್ಲಿ ಮದುವೆ ಆಗಿದ್ದ ಜಗ್ಗೇಶ್ ಮಾರ್ಚ್ 22, 1984ರಲ್ಲಿ ನಟ ಜಗ್ಗೇಶ್ ಅವರು ಪರಿಮಳ ಜೊತೆ ಸಪ್ತಪದಿ ತುಳಿದರು. ಆಗ ಮದುವೆಗಾಗಿ ಖರ್ಚು ಮಾಡಿದ್ದು ಬರಿ 2 ಸಾವಿರ. ಈಗಿನ ಸಮಯಕ್ಕೆ ಅದು 2 ಲಕ್ಷವೆನಿಸಬಹುದು ಬಿಡಿ. ಕಷ್ಟದ ಜೀವನ ಆರಂಭಿಸಿ ಇಂದು ರಾಯರ ಆಶೀರ್ವಾದಿಂದ ಸಂತೋಷವಾಗಿರುವುದಾಗಿ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನ ಎದುರಿಸಿ, ಪ್ರೀತಿಸಿದವರ ಕೈಹಿಡಿದು 35 ವರ್ಷಗಳ ಕಾಲ ಸುಖಕರ ಜೀವನ ಮಾಡಿದ್ದಾರೆ ನಟ ಜಗ್ಗೇಶ್.

ಮದುವೆ ಫ್ಲಾಶ್ ಬ್ಯಾಕ್

ಜಗ್ಗೇಶ್ ಮತ್ತು ಪರಿಮಳ ಅವರು ಮೊದಲ ಸಲ ಭೇಟಿಯಾದಾಗ ಜಗ್ಗಣ್ಣಗೆ 19 ವರ್ಷ ಮತ್ತು ಪರಿಮಳ ಅವರಿಗೆ 14 ವರ್ಷ ವಯಸ್ಸಂತೆ. ಜಗ್ಗೇಶ್ ಮೊದಲ ವರ್ಷ ಡಿಗ್ರಿ, ಪರಿಮಳ ಅವರು ಒಂಭತ್ತನೇ ತರಗತಿ. ನಂತರ 22 ಮಾರ್ಚ್ 1984ರಲ್ಲಿ ಪೋಷಕರ ಕಣ್ತಪ್ಪಿಸಿ ರಿಜಿಸ್ಟರ್ ಮದುವೆ ಆದರಂತೆ. ಪರಿಮಳ ಅವರು ಆಗ ಅಪ್ರಾಪ್ತ ವಯಸ್ಸಿನಲ್ಲಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Leave a Reply

Your email address will not be published. Required fields are marked *