ತಮ್ಮ ಜೀವನದ ಹಂಗು ತೊರೆದು ಪ್ರಾಣ ಉಳಿಸಿದ ವೀರಯೋಧರಿಗೆ ಸಂತ್ರಸ್ತರಿಂದ ವಿಶೇಷ ವಿದಾಯ; ರಾಖಿ ಕಟ್ಟಿ ಬೀಳ್ಕೊಟ್ಟ ರೀತಿ ಸೇನೆಗೆ ಹುಮ್ಮಸ್ಸು ನೀಡಿತು

ದೇಶ ಕಾಯುವ ಸೈನಿಕರು ಕೇವಲ ಗಡಿಯಲ್ಲಿ ಅಷ್ಟೇ ಇರುವುದಿಲ್ಲ. ದೇಶದ ಯಾವುದೇ ಭಾಗದಲ್ಲಾಗಲೀ ಪ್ರಕೃತಿ ವಿಕೋಪ ಸಂಭವಿಸಿದ ತಕ್ಷಣ ಧಾವಿಸಿ ಬಂದು ಆಗಬಹುದಾದ ಪ್ರಾಣಪಾಯಗಳನ್ನು ತಪ್ಪಿಸಿ , ತಮ್ಮ ಜೀವದ ಹಂಗುತೊರೆದು ನೂರಾರು ಮಂದಿಯ ಪ್ರಾಣ ಉಳಿಸುವ ಆಪದ್ಭಾಂಧವರು ಸಹ ಅವರೇ ಎಂಬುದು ಸ್ವತಃ ಅವರಿಂದ ಸಹಾಯ ಪಡೆದ ಮಂದಿಗಷ್ಟೇ ಗೊತ್ತು. ” ನಾವು ದೇವರನ್ನುಂತೂ ಕಂಡಿಲ್ಲ ನೀವೇ ನಮ್ಮ ಪಾಲಿನ ದೇವರು” ಎಂದು ಭಾವುಕರಾಗಿ ಸಂತ್ರಸ್ತರ ಹೇಳುವಾಗ ಮತ್ತು ನಿಜ ಅರ್ಥದಲ್ಲಿ ನೀವೇ ನಮ್ಮ ಸಹೋದರರು ಎಂದು ಹೇಳುತ್ತಾ ಅವರುಗಳಿಗೆ ರಾಖಿ ಕಟ್ಟಿ ಬೀಳ್ಕೊಟ್ಟ ರೀತಿ ನಮ್ಮ ಭಾರತೀಯ ಸೈನಿಕರ ಹೆಮ್ಮೆಯ ಸೇವೆಗೊಂದು ಸಾಕ್ಷಿಯಲ್ಲವೇ….?

ತಮ್ಮ ಸೇವೆಗೆ ಸಂತ್ರಸ್ತರು ಸಲ್ಲಿಸಿದ ಕೃತಜ್ಞತಾಪೂರ್ವಕ ನುಡಿ ಹಾಗೂ ತಮ್ಮನ್ನು ಸಹೋದರರನ್ನು ಒಪ್ಪಿ ಅಪ್ಪಿಕೊಂಡ ಅವರ ಮಾತುಗಳು ಮತ್ತಷ್ಟು ಹುಮ್ಮಸ್ಸು ಮೂಡಿಸಿದ್ದಂತೂ ಸತ್ಯ.

ಹೌದು , ಉತ್ತರ ಕರ್ನಾಟಕದಲ್ಲಿ ಸುರಿದ ವಿಪರೀತ ಮಳೆಯಿಂದ ರಾಜ್ಯ ಅರ್ಧಕ್ಕೆ ಅರ್ಧದಷ್ಟು ಭಾಗ ಪ್ರವಾಹದಲ್ಲಿ ಮುಳುಗಿಹೋಗಿದೆ. ಇನ್ನು ಪ್ರವಾಹದಿಂದಾಗಿ ಸಾವಿರಾರು ಜನ ತಮ್ಮ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿ, ಊಟ ನೀರಿಲ್ಲದೆ ಪರದಾಡಿದರು. ಅಷ್ಟಲ್ಲದೆ ಪ್ರವಾಹದಿಂದಾಗಿ ಸಾವಿರಾರು ಮೂಕಪ್ರಾಣಿಗಳು ಸಾವನ್ನಪ್ಪಿದವು . ಜೊತೆಗೆ ಪ್ರವಾಹಕ್ಕೆ ಸಿಲುಕಿ ಇದುವರೆಗೂ 45ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಇನ್ನು ನೂರಾರು ಜನರನ್ನು ಈ ರಣಭೀಕರ ಪ್ರವಾಹದಿಂದ ರಕ್ಷಣೆ ಮಾಡಿದ ಸೈನಿಕರಿಗೆ ಚಿಕ್ಕೋಡಿ ಜನತೆ ವಿಶೇಷ ರೀತಿಯಲ್ಲಿ ಬೀಳ್ಕೊಡುಗೆ ನೀಡಿದ್ದಾರೆ.

ರಾಜ್ಯದಲ್ಲಿ ನಡೆದ ರಣಭೀಕರ ಮಳೆಯಿಂದ ಲಕ್ಷಾಂತರ ಮಂದಿ ತತ್ತರಿಸಿ ಹೋಗಿದ್ದರು. ಅಲ್ಲದೆ ಸಾವಿರಾರು ಮಂದಿ ಪ್ರವಾಹದಲ್ಲಿ ಸಿಲುಕಿದ್ದರು. ಇನ್ನೂ ಈ ಮಂದಿಯನ್ನು ಪ್ರವಾಹದಿಂದ ಹಗಲು-ರಾತ್ರಿ ಎನ್ನದೆ ಪಾರುಮಾಡಿ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ನಮ್ಮ ಯೋಧರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ಹೆಗಲಮೇಲೆ ಹೊತ್ತುಕೊಂಡು, ವೃದ್ಧರು, ಗರ್ಭಿಣಿಯರು, ಬಾಣಂತಿಯರು ,ಮೂರು ನಾಲ್ಕು ತಿಂಗಳ ಮಗು , ಮೂಕ ಪ್ರಾಣಿಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವಲ್ಲಿ ನಮ್ಮ ಯೋಧರು ಅವರ ಜೀವವನ್ನು ಸಹ ಲೆಕ್ಕಿಸದೆ ಪ್ರಾಣವನ್ನೇ ಪಣಕ್ಕಿಟ್ಟು ಸಾವಿರಾರು ಜನರನ್ನು ರಕ್ಷಣೆ ಮಾಡಿದ್ದಾರೆ.

ಇಂತಹ ಯೋಜನೆಗೆ ಅಭೂತಪೂರ್ವ ಧನ್ಯವಾದ ಸಲ್ಲಿಸುವ ಮೂಲಕ ಚಿಕ್ಕಮಗಳೂರು ಹಾಗೂ ಚಿಕ್ಕೋಡಿ ಜನತೆ ವಿಶೇಷ ರೀತಿಯಲ್ಲಿ ಬೀಳ್ಕೊಡುಗೆ ನೀಡಿದ್ದಾರೆ. ಜೀವ ಹೋಗುವ ಸಂದರ್ಭದಲ್ಲಿ ದೇವರ ಪ್ರತಿರೂಪದಂತೆ ಬಂದು ಯೋಧರು ತಮ್ಮ ಪ್ರಾಣ ಒತ್ತೆ ಇಟ್ಟು ನೂರಾರು ಜನರನ್ನು ರಕ್ಷಣೆ ಮಾಡಿದ್ದಾರೆ.

ಸದ್ಯ ಚಿಕ್ಕಮಗಳೂರಿನಲ್ಲಿ ಮಳೆ ಪ್ರಮಾಣ ತಗ್ಗಿ ರುವುದರಿಂದ ಸೈನಿಕರು ವಾಪಸ್ಸಾಗುತ್ತಿದ್ದಾರೆ. ಚಿಕ್ಕೋಡಿಯಿಂದಲೂ ಸೈನಿಕರು ಹಿಂತಿರುಗುತ್ತಿದ್ದಾರೆ. ಈ ವೇಳೆ ಪ್ರತಿಯೊಬ್ಬರಿಗೂ ಚಿಕ್ಕಮಗಳೂರು ಹಾಗೂ ಚಿಕ್ಕೋಡಿ ಗ್ರಾಮಸ್ಥರು “ಭಾರತ್ ಮಾತಾಕಿ ಜೈ” ಎಂಬ ಘೋಷಣೆ ಕೂಗುತ್ತಾ, ರಾಖೀ ಕಟ್ಟಿ ಬಾಂಧವ್ಯ ಮೆರೆದಿದ್ದಾರೆ. ತಾವು ತಂದಿದ್ದ ಹಣ್ಣು , ಬಿಸ್ಕೆಟ್ ಪಾನೀಯಗಳನ್ನು ಜನರಿಗೆ ನೀಡಿ ಪ್ರಾಣ ರಕ್ಷಿಸಿದ ಯೋಧರಿಗೆ ತಮ್ಮ ಅಣ್ಣನ ಸ್ಥಾನವನ್ನು ಪ್ರೀತಿಯಿಂದ ನೀಡುವ ಮೂಲಕ ಕಣ್ಣೀರು ಹಾಕಿ ಭಾವುಕರಾಗಿ ಬೀಳ್ಕೊಡುಗೆ ನೀಡಿದ್ದಾರೆ.

One thought on “ತಮ್ಮ ಜೀವನದ ಹಂಗು ತೊರೆದು ಪ್ರಾಣ ಉಳಿಸಿದ ವೀರಯೋಧರಿಗೆ ಸಂತ್ರಸ್ತರಿಂದ ವಿಶೇಷ ವಿದಾಯ; ರಾಖಿ ಕಟ್ಟಿ ಬೀಳ್ಕೊಟ್ಟ ರೀತಿ ಸೇನೆಗೆ ಹುಮ್ಮಸ್ಸು ನೀಡಿತು

  • August 15, 2019 at 7:05 pm
    Permalink

    14 jan yodharu neeru paladare avar bagge yenaytu..heliri.Avarannu maretare Avar kutumbada bagge yochisiddira heli..Avar bagge yav press agali news chnnels torisilla.

    Reply

Leave a Reply

Your email address will not be published. Required fields are marked *