ತಮಿಳು ನಾಡಿನ ಜನ ರಜನಿಕಾಂತ್ರನ್ನು ಪೂಜಿಸಲು ಇದೇ ಕಾರಣ : ಈ ನಟನಿಂದ ನೆರೆ ಸಂತ್ರಸ್ತರಿಗೆ ನೂರಾರು ಮನೆಗಳ ನಿರ್ಮಾಣ

ತಮಿಳುನಾಡಿನಲ್ಲಿ ಕೆಲ ಚಿತ್ರನಟರನ್ನು ದೇವತೆಗಳ ಹಾಗೆ ಜನತೆ ಪೂಜಿಸುತ್ತಾರೆ. ಇದು ಹುಚ್ಚು ಅಭಿಮಾನ ಎಂದು ಕೆಲವರು ಹಿಂದೆ ಟೀಕಿಸಿದ್ದೂ ಉಂಟು. ಆದರೆ ಕೆಳಗಿನ ಕಾರಣ ನೋಡಿದಾಗ ಅವರುಗಳು ತಮ್ಮ ನೆಚ್ಚಿನ ನಟರನ್ನು ಈ ರೀತಿ ಹಚ್ಚಿಕೊಳ್ಳಲು, ನೆಚ್ಚಿಕೊಳ್ಳಲು ಹಾಗು ಆರಾಧಿಸಲು ಕಾರಣ ಇದೆ ಅನ್ನಿಸುವುದು ಸುಳ್ಳಲ್ಲ.

ಹೌದು ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ತಮ್ಮ ಉದಾರತೆ ಹಾಗು ಕಳಕಳಿಯನ್ನು ಮೆರೆದು ಸಹಾಯ ಹಸ್ತ ಚಾಚಿದ್ದಾರೆ.
ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್ ನಿಂದ ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ, ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್ ಅವರು ನೆರೆ ಸಂತ್ರಸ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಜನಿಕಾಂತ್ ಅವರು ಇಂದು ತಮ್ಮ ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ಮನೆಯ ಹಕ್ಕು ಪತ್ರಗಳನ್ನು ಹಸ್ತoತರಿಸಿದ್ದಾರೆ . ರಜನಿಕಾಂತ್ ಸಂತ್ರಸ್ತರಿಗೆ ಮನೆಯ ಪತ್ರಗಳನ್ನು ನೀಡುತ್ತಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರ ಈ ಕೆಲಸ ನೋಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿಗೆ ತಮ್ಮನ್ನು ಹೀರೊ ಮಾಡಿದ ನಿರ್ಮಾಪಕರಿಗೆ ಒಂದು ಕೋಟಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು. ರಜನಿಕಾಂತ್ ಮೊದಲ ಬಾರಿಗೆ 1978ರಲ್ಲಿ ‘ಭೈರವಿ ಸಿನಿಮಾದಲ್ಲಿ ಹೀರೊ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾವು ಸೂಪರ್ ಹಿಟ್ ಆಗಿದ್ದು, ನಿರ್ಮಾಪಕ ಕಲೈಜ್ಞಾನಂ ಚಿತ್ರವನ್ನು ನಿರ್ಮಿಸಿದ್ದರು. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದರೂ ಕಲೈ ಜ್ಞಾನಂ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗಾಗಿ ರಜನಿಕಾಂತ್ ನಿರ್ಮಾಪಕರಿಗೆ ಮನೆಯನ್ನು ಗಿಫ್ಟ್ ಆಗಿ ನೀಡಿದ್ದರು.

Leave a Reply

Your email address will not be published. Required fields are marked *