ಡಾ. ಶ್ರೇಯಸಿ ಹಾಗೂ ಅವರ ತಂದೆ ಡಾ. ರಮೇಶ್ ಅವರಿಗೆ ನಮ್ಮ ಸೆಲ್ಯೂಟ್

ಹೌದು, ಆಕೆ ಮನಸ್ಸು ಮಾಡಿದ್ದರೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸತ್ರೆಯನ್ನು ಕಟ್ಟಿಕೊಂಡು ಸಾಕಾಗುವಷ್ಟು ಗಂಟು ಮಾಡಬಹುದಿತ್ತು. ಅಂಥ ಎಲ್ಲ ಅವಕಾಶಗಳೂ ಇದ್ದು ಅತ್ಯಂತ ವೈಭವಯುತ ಜೀವನ ನಡೆಸುವ ಸಾಧ್ಯತೆಗಳೂ ಇತ್ತು. ಆದರೆ….
ಆಕೆ ಆಯ್ದುಕೊಂಡ ಮಾರ್ಗ ದೇಶ ಸೇವೆ.

ದೇಶ ಸೇವೆ ಎಂದರೆ ಇಂದು ನಮ್ಮ ರಾಜಕಾರಣಿಗಳು ಹಾಗೂ ಕೆಲ ಭ್ರಷ್ಟ ಅಧಿಕಾರಿಗಳು ಮಾಡುತ್ತಿದ್ದಾರಲ್ಲ ಅಂಥ ಸೇವೆಯಲ್ಲ…
ಭಾರತೀಯ ಸೇನೆಗೆ ಸೇರಿ ಸಲ್ಲಿಸುವ ಪ್ರಾಮಾಣಿಕ ಹಾಗೂ ಅಪ್ರತಿಮ ಸೇವೆಯದು.

 

ಹೆಸರು ಡಾ. ಶ್ರೇಯಸಿ ನಿಶಾಂಕ್. ಈಕೆ ಉತ್ತರಾಖಂಡ್‍ನ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಹರಿದ್ವಾರ ಕ್ಷೇತ್ರದ ಬಿ.ಜೆ.ಪಿ. ಸಂಸದ ಡಾ.ರಮೇಶ್ ಪೋಖ್ರಿಯಾಲ್ ಅವರ ಪುತ್ರಿ. ವೈದ್ಯೆಯಾಗಿ ತನ್ನದೇ ಸ್ವಂತ ನರ್ಸಿಂಗ್ ಹೋಂ ನಿರ್ಮಿಸಿ ಇಂದು ವ್ಯಾಪಾರವೇ ಆಗಿರುವ ಈ ಆರೋಗ್ಯ ಕ್ಷೇತ್ರದಲ್ಲಿ ಹಣವನ್ನು ಬಡಿದು ಬಾಚಬಹುದಿತ್ತು. ಆದರೆ ಈ ಹರೆಯದ ಹೃದಯಕ್ಕೆ ದೇಶ ಸೇವೆ ಮಾಡುವ ಹಂಬಲ, ತನ್ನ ಮಾತೃಭೂಮಿಗೆ ಪ್ರಾಣವನ್ನೇ ಮುಡುಪಾಗಿಟ್ಟು ಹಗಲಿರುಳೆನ್ನದೆ ದೇಶ ಕಾಯುವ ಯೋಧರ ಸೇವೆ ಮಾಡುವ ಹಂಬಲ,


ತನ್ನ ಮಾತೃಭೂಮಿಗೆ ಪ್ರಾಣವನ್ನೇ ಮುಡುಪಾಗಿಟ್ಟು ಹಗಲಿರುಳೆನ್ನದೆ ದೇಶ ಕಾಯುವ ಯೋಧರ ಸೇವೆ ಮಾಡುವ ಉತ್ಸಾಹ ಹಾಗೂ ದೇಶ ಪ್ರೇಮದ ತವಕ. ಇದಕ್ಕಾಗಿ ಆಕೆ ಆಯ್ದುಕೊಂಡದ್ದು ಸೇನೆ. ರೂರ್ಕಿಯಲ್ಲಿರುವ ಸೇನಾ ಆಸ್ಪತ್ರೆಗೆ ಸೇರಿದ ಡಾ. ಶ್ರೇಯಸಿ ಅವರ ಸೇನಾ ಸಮವಸ್ತ್ರಕ್ಕೆ ಸ್ಟಾರ್‍ಗಳನ್ನು ತೊಡಿಸುವಾಗ ಅವರ ತಂದೆಯವರ ಮುಖದಲ್ಲಿ ಹೆಮ್ಮೆಯ ಭಾವವಿತ್ತು. ಕಣ್ಣುಗಳಲ್ಲಿ ಹೊಳಪಿತ್ತು. ಗಂಡುಮಗುವಿಗೂ ಕಡಿಮೆ ಇಲ್ಲದಂತೆ ಬೆಳೆದ ಮಗಳ ಬಗ್ಗೆ ಅತಿಯಾದ ವಿಶ್ವಾಸ ಭಾವನೆ ಕಂಡುಬಂತು.

ನಮ್ಮಲ್ಲೇ ಓದಿ ಪದವಿ ಪಡೆದು ವೈದ್ಯಕೀಯ ವೃತ್ತಿ ಆರಂಭಿಸುವ ವೈದ್ಯರ ಪೈಕಿ ಬಹುತೇಕ ಮಂದಿ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸೇವೆ ಸಲ್ಲಿಸಲು
ಹಿಂಜರಿಯುವಾಗ ಡಾ. ಶ್ರೇಯಸಿ ಸೇನಾ ಆಸ್ಪತ್ರೆ ಸೇರಿರುವುದು ನಮ್ಮಗಳಿಗೂ ಹೆಮ್ಮೆಯಲ್ಲದೇ ಮತ್ತೇನು?
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಹುತಾತ್ಮರಾದ ಸೈನಿಕರು ಶವವಾಗಿ ತಮ್ಮ ಊರುಗಳಿಗೆ ಬಂದಾಗ ದೊಡ್ಡದಾದ ಹಾರ ಹಾಕಿ ದೊಡ್ಡ ದೊಡ್ಡ ಭಾಷಣ ಮಾಡುವ ರಾಜಕಾರಣಿಗಳಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿರುವ ಬಗ್ಗೆ ಭಾಷಣ ಬಿಗಿಯುವ ಯಾವ ಜನಪ್ರತಿನಿಧಿಯೂ ತಮ್ಮ ಮಕ್ಕಳ
ಮದುವೆಯನ್ನು ಇತರೆ ಜಾತಿಯವರೊಂದಿಗೆ ಮಾಡಿಕೊಟ್ಟಿರುವ ಉದಾಹರಣೆಗಳೇ ಅತಿ ವಿರಳ.
ಹಾಗಾಗಿ ನಮಗೆ ಡಾ. ಶ್ರೇಯಸಿ ಮಾತ್ರವಲ್ಲ ಅವರ ತಂದೆ (ಪಿಹೆಚ್‍ಡಿ ಪಡೆದಿರುವ) ಡಾ. ರಮೇಶ್ ಪೋಖ್ರಿಯಾಲ್ ಅವರೂ ಕೂಡ ನಿಜವಾದ ಜನನಾಯಕರಾಗಿ ಕಾಣುತ್ತಿದ್ದಾರಲ್ಲವೇ?


ಡಾ. ಶ್ರೇಯಸಿ ಅವರಿಗೂ ಹಾಗೂ ಅವರ ತಂದೆ ಹರಿದ್ವಾರದ ಬಿ.ಜೆ.ಪಿ. ಸಂಸದ ಡಾ. ರಮೇಶ್ ಅವರಿಗೂ ನಮ್ಮದೊಂದು ಸೆಲ್ಯೂಟ್…..
ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಬಂಧುಗಳಿಗೂ, ಸೇವೆ ಸಲ್ಲಿಸುತ್ತಿರುವವರಿಗೂ ಮತ್ತು ಈ ಹೆಮ್ಮೆಯ ಸೇವೆ ಸಲ್ಲಿಸಿ ನಿವೃತ್ತರಾಗಿರುವವರಿಗೂ ಇದೇ ಸಂದರ್ಭದಲ್ಲಿ ಗೌರವಪೂರ್ವಕ ವಂದನೆಗಳು.

Leave a Reply

Your email address will not be published. Required fields are marked *