ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ತಾವು ಎಲ್ಲರಿಗಿಂತ ಭಿನ್ನ !!
ಚೆನ್ನೈ: ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರು ಸಹ ಸಾಮಾನ್ಯ ನಂತೆ ಇರಲು ಇಷ್ಟಪಡುವುದಿಲ್ಲ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ತೋರಿಸಿದ್ದು ಧೋನಿಗೆ ನೆಟಿಗರು ಜೋಹಾರ್ ಹೇಳಿದ್ದಾರೆ.
ಐಪಿಎಲ್ ಟೂರ್ನಿಯ ಪಂದ್ಯದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆ ಬೇಗನೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎಂಎಸ್ ಧೋನಿ ಹಾಗೂ ಪತ್ನಿ ಸಾಕ್ಷಿ ಇಬ್ಬರು ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆದರು.
ಐಪಿಎಲ್ ಪಂದ್ಯಗಳು ತಡರಾತ್ರಿವರೆಗೊ ನಡೆಯುವುದರಿಂದ ಆಟಗಾರರು ತಡವಾಗಿ ಮಲಗುತ್ತಾರೆ. ಆದರೆ ಮುಂದಿನ ಪಂದ್ಯಕ್ಕೆ ಬೇರೆಡೆ ತೆರಳಬೇಕಾದ ಕಾರಣ ಮತ್ತೆ ಬೆಳಗ್ಗೆ ಬಹುಬೇಗ ಎದ್ದು ತೆರಳುತ್ತಾರೆ. ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಚೆನ್ನೈ ತಂಡ ಮುಂದಿನ ಪಂದ್ಯ ರಾಜಸ್ಥಾನ ರಾಯಲ್ಸ್ ವಿರುದ್ಧ ನೆಡೆಯಲಿದೆ. ಈ ಹಿಂದೆಯು ಕೂಡ ಧೋನಿ ತಮಗೆ ಸಿಕ್ಕ ವಿರಾಮ ಸಮಯವನ್ನು ವ್ಯರ್ಥ ಮಾಡದೇ ವಿಶ್ರಾಂತಿ ಪಡೆದುಕೊಳ್ಳವ ಮೂಲಕ ಮುಂದಿನ ಪಂದ್ಯದ ತಯಾರಿಗೆಬೇಕಾದ ಸಮಯವನ್ನು ನಿರ್ವಹಿಸುತ್ತಿದ್ದರು. ಹಲವು ಸಂದರ್ಭದಲ್ಲಿ ಪಂದ್ಯದ ನಡುವೆ ಮೈದಾನದಲ್ಲೇ ಮಲಗಿಕೊಂಡು ವಿಶ್ರಾಂತಿ ಪಡೆಯುವ ಮೂಲಕ ಗಮನ ಸೆಳೆದಿದ್ದರು..!