ಟಿಕ್ ಟಾಕ್ ಆಪ್ ಗೆ ಮತ್ತೆ ಸಿಕ್ಕಿತು ಅನುಮತಿ

ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಹಿನ್ನೆಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಚೀನಾ ಮೂಲದ ವೀಡಿಯೋ ಅ್ಯಪ್ ಟಿಕ್ ಟಾಕ್ ಇದೀಗ ಮತ್ತೆ ಅನುಮತಿ ಸಿಕ್ಕಿದೆ. ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ನಿಷೇಧವನ್ನು ತೆರವುಗೊಳಿಸಲಾಗಿದೆ.

ಟಿಕ್ ಟಾಕ್ ಅ್ಯಪ್ ಮೂಲಕ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನ ಮಧುರೈ ವಿಭಾಗೀಯ ಪೀಠದಲ್ಲಿ ಹಿರಿಯ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನೆಡೆಸಿದ್ದ ಹೈಕೋರ್ಟ್ ಟಿಕ್ ಟಾಕ್ ಅ್ಯಪನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ಹೈಕೋರ್ಟ್ ಆದೇಶದ ಬಳಿಕ ಗೂಗಲ್‌ ಪ್ಲೇ ಸ್ಟೋರ್ ನಿಂದಲೂ ಅ್ಯಪ್ ಡೌನ್‌ಲೋಡ್ ಮಾಡವ ಅವಕಾಶ ತೆಗೆದುಹಾಕಲಾಗಿತ್ತು.

ಟಿಕ್ ಟಾಕ್ ಅ್ಯಪ್ ಮೂಲಕ ವಿಷೇಶ ವೀಡಿಯೋಗಳನ್ನು ರಚಿಸಿ, ಶೇರ್ ಮಾಡಬಹುದಾಗಿದ್ದು, ಯುವ ಸಮೂಹದಲ್ಲಿ ಬಾರಿ ಜನಪ್ರಿಯತೆ ಗಿಟ್ಟಿಸಿತು. ಭಾರತದಲ್ಲಿ ಸುಮಾರು 54 ಮಿಲಿಯನ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

ಟಿಕ್ ಟಾಕ್ ವಿರುದ್ಧ ಕಾನೂನು ಸಮರ ಸಾರಲು ಕರ್ನಾಟಕದ ಮಹಿಳಾ ಅಯೋಗವು ಕೂಡಾ ಮುಂದಾಗಿತ್ತು. ಮಹಿಳೆಯರ ವೀಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಲು ಮಹಿಳಾ ಅಯೋಗ ಚಿಂತನೆ ನಡೆಸಿತು.

Leave a Reply

Your email address will not be published. Required fields are marked *