ಜನಮಿಡಿತ ದ್ವಿದಶಮಾನೋತ್ಸವದಲ್ಲಿ ಖ್ಯಾತಗಾಯಕಿ ಬಿ. ಕೆ. ಸುಮಿತ್ರಾ ಹಾಡಿದಾಗ

ಖ್ಯಾತ ಗಾಯಕಿ ಬಿಕೆ ಸುಮಿತ್ರಾ ಬಾಲ್ಯ ಜೀವನ

ಖ್ಯಾತ ಗಾಯಕಿ ಬಿಕೆ ಸುಮಿತ್ರಾ ಅವರು ಹುಟ್ಟಿದ್ದು 18/4/1941ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಿಳಿಲು ಕೊಪ್ಪ ಗ್ರಾಮದಲ್ಲಿ. ಪಟೇಲ್ ಕೃಷ್ಣಯ್ಯ ಹಾಗೂ ಗಂಗಮ್ಮ ದಂಪತಿಗಳ ಮುದ್ದಿನ ಮಗಳು .ತಾಯಿ ಮತ್ತು ಸೋದರತ್ತೆ ಅವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳಿಂದ ಪ್ರಭಾವಿತರಾದ ಬಿಕೆ ಸುಮಿತ್ರಾ ಅವರು ಚಿಕ್ಕಂದಿನಲ್ಲಿ ರಾತ್ರಿ ವೇಳೆ ಅಡಿಕೆ ಸುಲಿಯಲು ಬರುತ್ತಿದ್ದ ಕೆಲಸದವರ ಜಾನಪದ ಗೀತೆಗಳು ಕಥೆಗಳನ್ನು ಕೇಳಿ ಸಂಗೀತದ ಒಲವನ್ನು ಹೆಚ್ಚಿಸಿಕೊಂಡಿದ್ದರು. ಮಂಜಪ್ಪ ಜೋಯಿಸ್ ಮತ್ತು ಎಂ ಪ್ರಭಾಕರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿ ಸೀನಿಯರ್ ಗ್ರೇಡ್ ನಲ್ಲಿ ತೇರ್ಗಡೆಯಾಗಿದ್ದರು . ಕಾಲೇಜು ಕಲಿಯುತ್ತಿದ್ದಾಗ ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ಗೀತೆಗಳನ್ನು ಕೇಳಿ ಪ್ರಭಾವಿತರಾಗಿದ್ದರು.

ಬಿಕೆ ಸುಮಿತ್ರಾ ಹಾಡಿದ ಗೀತೆಗಳು

ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕುವೆಂಪು, ದರಾ ಬೇಂದ್ರೆ, ಕೆಎಸ್ ನರಸಿಂಹ ಮೂರ್ತಿ, ಜಿಎಸ್ ಶಿವರುದ್ರಪ್ಪ, ನಿಸಾರ್ ಅಹಮದ್, ಲಕ್ಷ್ಮೀನಾರಾಯಣ ಭಟ್ಟರು ಮುಂತಾದವರ ಕವಿತೆಗಳನ್ನು ಆಕಾಶವಾಣಿ ದೂರದರ್ಶನ ಕ್ಯಾಸೆಟ್ ಸಿಡಿಗಳಿಗೆ ಹಾಡಿದ್ದಾರೆ .2002ರಲ್ಲಿ ಅಮೆರಿಕ ಪ್ರವಾಸ ಹಲವಾರು ಪ್ರಮುಖ ನಗರಗಳ ಕನ್ನಡ ಕೂಟಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿ ಹೆಸರಾಗಿದ್ದಾರೆ. ಜಿ ಕೆ ವೆಂಕಟೇಶ್ ಅವರ ಸಂಗೀತ ನಿರ್ದೆಶನದ ‘ಕವಲೆರಡು ಕುಲವೊಂದು ‘ಚಿತ್ರದಲ್ಲಿ ಗಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿ, ವಿಜಯಭಾಸ್ಕರ,ಉಪೇಂದ್ರ ಕುಮಾರ್, ರಂಗರಾವ್,ರಾಜನ್ ನಾಗೇಂದ್ರ, ಸತ್ಯನ್ ಉಪೇಂದ್ರಕುಮಾರ್ ನಿರ್ದೇಶನದಲ್ಲಿ ಹಲವಾರು ಚಿತ್ರಗಳಲ್ಲಿ ಗಾಯಕಿಯಾಗಿ ತನ್ನ ಮಧುರ ಕಂಠದ ಇಂಪನ್ನು ನೀಡಿದ್ದಾರೆ. ಎಚ್ಎಂ.ವಿ, ಸಿ.ಬಿ.ಎಸ್ ಸಂಗೀತ ಲಹರಿ ಮುಂತಾದ ಧ್ವನಿ ಸುರುಳಿ ಸಂಸ್ಥೆಗಳಿಗೆ ಮತ್ತು ಉಡುಪಿ ಕೃಷ್ಣ, ಧರ್ಮಸ್ಥಳ ಮಂಜುನಾಥ, ಯಡಿಯೂರು ಸಿದ್ದಲಿಂಗೇಶ್ವರ ಮುಂತಾದ ಭಕ್ತಿಗೀತೆಗಳಿಗೆ ಹಾಡುಗಾರಿಕೆ ನೀಡಿದ್ದಾರೆ.


ಖ್ಯಾತ ಗಾಯಕಿ ಬಿಕೆ ಸುಮಿತ್ರಾ ಮುಡಿಗೇರಿಸಿಕೊಂಡ ಪ್ರಶಸ್ತಿಗಳು

ಇವರ ಮುಡಿಗೇರಿದ ಪ್ರಶಸ್ತಿಗಳಲ್ಲಿ 1977ರಲ್ಲಿ ಲಾವಣ್ಯ ಲೇಖಕರ ಬಳಗದಿಂದ ‘ಕನ್ನಡ ಕೋಗಿಲೆ’,1994ರಲ್ಲಿ ಬೆಂಗಳೂರು ಮಾಹಾನಗರ ಪಾಲಿಕೆಯಿಂದ ‘ ಕೆಂಪೇಗೌಡ ಪ್ರಶಸ್ತಿ’, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ರಾಜ್ಯೋತ್ಸವ ಪ್ರಶಸ್ತಿ’,1970ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಗೆಜ್ಜೆಪೂಜೆ ಚಿತ್ರದ 100ನೇ ದಿನದ ಸಂಭ್ರಮದಲ್ಲಿ ಚಿತ್ರ ಜ್ಯೋತಿ ಸಂಸ್ಥೆಯಿಂದ ಪ್ರಶಸ್ತಿ,1971ರಲ್ಲಿ ಕಲ್ಯಾಣಿ ಚಿತ್ರದ ಹಾಡಿಗೆ ‘ಶ್ರೇಷ್ಠ ಗಾಯಕಿ ‘ಬಿರುದು, 2012ರಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯಿಂದ ‘ಆಳ್ವಾಸ್ ನುಡಿಸಿರಿ ‘ಪ್ರಶಸ್ತಿ, 2013ರಲ್ಲಿ ಬೆಂಗಳೂರು ವಿ.ವಿ.ಯಿಂದ ಡಾಕ್ಟ್ ರೆಟ್ ಪ್ರಶಸ್ತಿ,2013ರಲ್ಲಿ ಹಂಪಿ ವಿ .ವಿ ಯಿಂದ ‘ನಾಡೋಜ ಪ್ರಶಸ್ತಿ ‘,2010ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಸಂತ ಶಿಶುನಾಳ ಶರೀಫ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ .

ಮಧುರ ಕಂಠದ ಗಾನಕೋಗಿಲೆಯ ಪ್ರಸಿದ್ಧ ಹಾಡುಗಳೆಂದರೆ ಸಂಪಿಗೆ ಮರದ ಹಸಿರೆಲೆ ನಡುವೆ, ನೋಡು ನೋಡು ಕಣ್ಣಾರೆ ನಿಂತಿಹಳು, ಶರಣರ ಕಾಯೇ ಚಾಮುಂಡೇಶ್ವರಿ, ಇಂದು ಶುಕ್ರವಾರ ಶುಭವ ತರುವ ವಾರ, ದ್ವಾದಶ ಸ್ತೋತ್ರ ಭಕ್ತಿಗೀತೆ, ಮಧುರ ಮಧುರವೀ ಮಂಜುಳಗಾನ, ಧರಣಿ ಮಂಡಲ ಮಧ್ಯದೊಳಗೆ, ಪುಣ್ಯಕೋಟಿಯ ತಬ್ಬಲಿಯು ನೀನಾದೆ ಮಗನೆ, ಮತ್ತು ಪ್ರಸಿದ್ಧ ಜಾನಪದ ಗೀತೆಗಳಾದ ನಿಂಬಿಯಾ ಬನಾದ ಮೇಗಳ ಚಂದ್ರಾಮ ಚೆಂಡಾಡಿದ, ಗಲ್ಲು ಗಲ್ಲೆನುತಾ ಗೆಜ್ಜೆ ಇವು ಸುಮಿತ್ರಾ ಅವರ ನೂರಾರು ಭಕ್ತಿಗೀತೆಗಳು ಮತ್ತು ಜಾನಪದ ಗೀತೆಗಳು. ಅಂದಿನಿಂದ ಇಲ್ಲಿಯವರೆಗೂ ಜನಮಾನಸದಲ್ಲಿ ಪ್ರಸಿದ್ಧವಾಗಿವೆ, ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಆರಾಧನೆಯನ್ನು ಮಾಡುತ್ತಿವೆ.

ಜನಮಿಡಿತ ದ್ವಿದಶಮಾನೋತ್ಸವದಲ್ಲಿ ಖ್ಯಾತಗಾಯಕಿ ಬಿ. ಕೆ. ಸುಮಿತ್ರಾ ಹಾಡಿದರು

ಬಿ.ಕೆ.ಸುಮಿತ್ರ ಅವರು ಜನಮಿಡಿತ ದ್ವಿದಶಮಾನೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕವಿಗಳಿಗೆ ರಾಗಸಂಯೋಜಿಸಿ ಹಾಡಿದ ಸುಮಧುರ ಗೀತೆಗಳ ಗಾಯನದ ಅಧ್ಯಕ್ಷತೆ ವಹಿಸಿದ್ದು ಮತ್ತು ಅವರ ಅತ್ಯಂತ ಜನಪ್ರಿಯ “ಮಾಮರವೆಲ್ಲೋ ಕೋಗಿಲೆಯೆಲ್ಲೋ,ಮಧುರ ಮಧುರವಿ ಮಂಜುಳ ಗಾನ,ನಿಂಬಿಯಾ ಬನಾ ದಮೇಲಿನ ಚಂದಮ..”ಮುಂತಾದ ಗೀತೆಗಳನ್ನು ಹಾಡಿ ರಂಜಿಸಿದರು.
ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ಸಮ್ಮುಖದಲ್ಲಿ ಜನಮಿಡಿತ ಬಳ ಗದ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶ್ರೀಮತಿ ಸುನಿತಾಪ್ರಕಾಶ್

Leave a Reply

Your email address will not be published. Required fields are marked *