ಜಗತ್ತಿನ ಅತಿದೊಡ್ಡ ವಿಮಾನದ ಯಶಸ್ವಿ ಹಾರಾಟ: ಆಗಸದಿಂದಲೇ ರಾಕೆಟ್ ಹಾರಿಸುವ ಕನಸಿಗೆ ಭರವಸೆ
ಜಗತ್ತಿನ ಅತಿ ದೊಡ್ಡ ವಿಮಾನ ಎಂಬ ಖ್ಯಾತಿಗೆ ಪಾತ್ರವಾಗಿರುವ ಸ್ಟ್ರಾಟೊಲಾಂಚ್ ವಿಮಾನ ಶನಿವಾರ ತನ್ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಎರಡು ವಿಮಾನಗಳನ್ನು ಜೋಡಿಸಿ ನಿರ್ಮಿಸಲಾದ ಬೃಹತ್ ರೆಕ್ಕೆಗಳುಳ್ಳ ಬೋಯಿಂಗ್ 747ನ ಆರು ಎಂಜಿನ್ಗಳನ್ನು ಹೊಂದಿರುವ ಈ ವಿಮಾನವು ಕ್ಯಾಲಿಫೋರ್ನಿಯಾದಿಂದ ಮುಜಾವೇ ಮರುಭೂಮಿಗೆ ಯಶಸ್ವಿಯಾಗಿ ಯಾನ ಕೈಗೊಂಡಿತ್ತು. ಉಪಗ್ರಹಗಳುಳ್ಳ ರಾಕೆಟ್ ಗಳನ್ನು ಆಗಸಕ್ಕೆ ಕೊಂಡೊಯ್ದು ಅಲ್ಲಿಂದ ಅವುಗಳನ್ನು ಉಡಾವಣೆ ಮಾಡಲು ಅನುಕೂಲವಾಗುವಂತೆ ಈ ವಿಮಾನವನ್ನು ತಯಾರಿಸಲಾಗಿದೆ. ಈ ವಿಮಾನವು ರಾಕೆಟ್ ಉಡಾವಣೆ ಪ್ರಕ್ರಿಯೆಯನ್ನು ಈಗಿನ ಪ್ರಕ್ರಿಯೆ ಗಿಂತಲೂ ಸರಳಗೊಳಿಸುವ ವಿಶ್ವಾಸವಿದೆ. ಸ್ಕೇಲ್ಡ್ ಕಾಂಪೋಸಿಟ್ ಎಂಬ ಸಂಸ್ಥೆಯು ಸ್ಟ್ರಾಟೊಲಾಂಚ್ ಅನ್ನು ನಿರ್ಮಾಣ ಮಾಡಿದೆ.
ಸ್ಟ್ಯಾಟ್ ಲಾಂಛನ ವಿಶೇಷತೆಗಳೆಂದರೆ ಇದರ ರೆಕ್ಕೆ ಒಂದು ಫುಟ್ಬಾಲ್ ಕ್ರೀಡಾಂಗಣಕ್ಕೂ ಉದ್ದ ಏರ್ ಬಸ್ ಎ380 ವಿಮಾನದ ರೆಕ್ಕೆಗಳಿಗಿಂತಲೂ 1.5 ರಷ್ಟು ದೊಡ್ಡದಾಗಿದೆ. ಅಂದರೆ ಅದು 117 ಮೀಟರ್ ಗಳಷ್ಟು ಉದ್ದವಾಗಿದೆ. ಏರ್ಬಸ್ ವಿಮಾನದ ರೇಕ್ಕೆಗಳ ಉದ್ದ 80 ಮೀಟರ್ ಮಾತ್ರ. ಶನಿವಾರ ಪ್ರಪ್ರಥಮ ಬಾರಿಗೆ ಯಾನ ಕೈಗೊಂಡ ಸ್ಟ್ರಾಟೊಲಾಂಚ್ ಸರಿ ಸುಮಾರು ಎರಡೂವರೆ ಗಂಟೆ ಕಾಲ ಆಗಸದಲ್ಲಿ ಹಾರಾಡಿದೆ. ಈ ವೇಳೆ ಅದು ಗಂಟೆಗೆ 304 ಕಿಲೋಮೀಟರ್ ವೇಗ ತಲುಪಿ 1700 ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಿದೆ.
ವಿಮಾನದ ನಿರ್ಮಾಪಕ ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕ ಪೌಲ್ ಅಲೆನ್ ಸ್ಟ್ರಾಟೊಲಾಂಚ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಈ ವಿಮಾನ ನಿರ್ಮಾಣ ಮಾಡಿದ್ದಾರೆ. ದುರಾದೃಷ್ಟವಶಾತ್ ಅಲೆನ್ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಆಸೆ ಈಡೇರಿದೆ .