ಚಾರಿತ್ರ್ಯಪೂರ್ಣ ಚರಿತ್ರೆಯುಳ್ಳ ಆಸುಗೋಡು

ಗತಕಾಲದಲ್ಲಿ ಕಳೆದುಹೋದ ಎಷ್ಟೋ ದೇವಾಲಯಗಳು ತನ್ನದೇ ಆದಂತಹ ಸಾಂಸ್ಕೃತಿಕ, ಧಾರ್ಮಿಕ, ಹಾಗೂ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ .

ಅದೇ ರೀತಿಯಾಗಿ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು ಅಸಗೋಡು ಐತಿಹಾಸಿಕವಾದ ಜನಪ್ರಿಯ ಹೊಂದಿರುವುದನ್ನು ಕಾಣಬಹುದು .

ಇಂತಹ ಪ್ರಸಿದ್ಧಿಯನ್ನು ಪಡೆದ ಗ್ರಾಮವು ಭೌಗೋಳಿಕ ಇತಿಹಾಸದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಾಗರೀಕ ಉಗಮ ಮತ್ತು ಭೌಗೋಳಿಕವಾಗಿ ಒಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಲ್ಲಿನ ವಾತಾವರಣವು ಸಹ ಬಹು ಮಹತ್ವವಾಗಿದ್ದು. ಸಂಪನ್ಮೂಲವು ಹೆಚ್ಚಾಗಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜೀವನ ನಡೆಸುತ್ತಾರೆ .

ಈ ಒಂದು ಸಾಮ್ರಾಜ್ಯ ಅತೀ ದೀರ್ಘಕಾಲ ತನ್ನ ಆಳ್ವಿಕೆಯನ್ನು ಖನಿಜ ಮತ್ತು ಸಂಪನ್ಮೂಲವನ್ನು ಹಾಗೂ ನೈಸರ್ಗಿಕ ಸಂಪತ್ತನ್ನು ಹೆಚ್ಚಿನ ಜನಜೀವನ ನಾಗರೀಕ, ಸಂಸ್ಕೃತಿ ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಒಂದು ಪ್ರಮುಖ ಇತಿಹಾಸ ಪ್ರಾಚೀನ ಪುಣ್ಯಕ್ಷೇತ್ರ ಐತಿಹಾಸಿಕ ಐತಿಹಾಸಿಕ ಸ್ಥಳ ಹಾಗೂ ವಿದ್ಯಾ ಕೇಂದ್ರವಾಗಿದೆ. ಜಗಳೂರು ತಾಲೂಕು ಇಂದು ದಾವಣಗೆರೆ ಜಿಲ್ಲೆಯಲ್ಲಿ. ೧೯೯೭ ಕ್ಕೂ ಪೂರ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು .ದಾವಣಗೆರೆ ಜಿಲ್ಲೆ ಕೇಂದ್ರಗಳನ್ನು ಹೊಂದಿದ ತಾಲೂಕು ಆಗಿದೆ. ಪೂರ್ವಕ್ಕೆ ಚಳ್ಳಕೆರೆ ಪಚ್ಚಿಮಕ್ಕೆ ದಾವಣಗೆರೆ, ಹರಪನಹಳ್ಳಿ ಉತ್ತರ ಕೂಡ್ಲಿಗಿ ದಕ್ಷಿಣಕ್ಕೆ ಚಿತ್ರದುರ್ಗ ತಾಲೂಕುಗಳು ಗಡಿಯನ್ನು ಹೊಂದಿದ್ದು . ಈ ಪ್ರದೇಶವು ಬಯಲು ಪ್ರದೇಶಕ್ಕೆ ಸೇರಿದ್ದು ಉಬ್ಬುತಗ್ಗುಗಳನ್ನು ಕೂಡಿದ್ದು ಮೈದಾನ ಪ್ರದೇಶವಾಗಿದೆ. ವಾಯುವ್ಯದಲ್ಲಿ ಸಣ್ಣ ಪುಟ್ಟ ಗುಡ್ಡಗಳು ಅರಿದಾಡಿವೆ. ಮುಖ್ಯವಾಗಿ ಕೊಡದಗುಡ್ಡ, ಕೊಂಚಗಲ್ ರಂಗಪ್ಪನ ಬೆಟ್ಟ, ಹಾರೆಕಲ್ ಬೆಟ್ಟದ ಸಾಲುಗಳು ಈ ತಾಲೂಕಿನ ದಕ್ಷಿಣ ವಾಯುವ್ಯ ಭಾಗದಲ್ಲಿ ಕಣಿವೆಗಳಿವೆ ಭಾಗದಲ್ಲಿ ಸ್ವಲ್ಪ ಭಾಗದಲ್ಲಿ ಮಾತ್ರ ಫಲವತ್ತಾದ ಭೂಮಿ ಮರಳುಮಿಶ್ರಿತ ಭೂಮಿ ಇದೆ.

ಈ ಒಂದು ಊರು ತನ್ನದೇ ಆದಂತಹ ಹಿನ್ನೆಲೆಯನ್ನು ಹೊಂದಿದ್ದು ಅಶೋಕ ಚಕ್ರವರ್ತಿಯ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನುವ ವಾಡಿಕೆಯಿದೆ ಹಾಗೆ ಕೆಲವು ಶಾಸನಗಳಲ್ಲಿ ಕಂಡುಬಂದಿದ್ದು
ಇದರ ಅರ್ಥಪೂರ್ಣ ವಾದಂತಹ ನಿರ್ಮಾಣವಾದ ಊರು ,ಆಗಸ ಎಂದರೆ ಪಾಳೆ ಭಾಷೆಯಲ್ಲಿ ಅಶೋಕ ಎಂದು, ಗೋಡು ಎಂದರೆ ಪಟ್ಟಣ. ಪಟ್ಟಣ ಹೆಸರಲ್ಲಿ ಕಟ್ಟಲಾದ ಊರು ಅಶೋಕ ಚಕ್ರವರ್ತಿ ಕೆಲವು ಕಾಲ ಈ ಪ್ರದೇಶದಲ್ಲಿ ಬೀಡುಬಿಟ್ಟಿದ್ದನೆದು ಹಲವಾರ ಅಭಿಪ್ರಾಯ ಹಾಗೂ ಶಾಸನಗಳಲ್ಲಿ ಉಲ್ಲೇಖಿಸಿದ್ದಾರೆ. ಕ್ರಿ.ಶಕ 754 ರಲ್ಲಿ ಶಿಲಾಶಾಸನದಿಂದ ಕಾಳಮುಖ ಸ್ಥಾನ ವೈಷ್ಠಿಕ ವೇದಿ ಕಾರ್ಕರ ಮಠ ಎಂದು ಉಲ್ಲೇಖಿಸಿದ್ದು ಈಕಾರಣ ಇಲ್ಲಿ ಶಂಭುಲಿಂಗೇಶ್ವರ ಗುಡಿಯನ್ನು ರವುಡಿಗ ಮಬ್ಬೂಜೀನ ಮಗ ಅಭೋಜ್ಜನು ಕಟ್ಟಿಸಿದ್ದನೆಂದು.

ಅಸಗೋಡು ಶಂಭುಲಿಂಗೇಶ್ವರ ದೇವಾಲಯ ದಕ್ಷಿಣದ ಕಡೆ ನೆಟ್ಟ ಒಂದನೇ ಶಿಲೆ ಈ ಒಂದನೇ ಶಿಲೆಯು ಚಾಲುಕ್ಯ ರ ಕಾಲದಲ್ಲಿ ಕಾಣಬಹುದಾದ ಅದ್ಬುತ ಸ್ವಯಂ ಕಲಿಕಾ ದೇವಸ್ಥಾನ ವಾಗಿದೆ. ಸುತ್ತ ಮುತ್ತಲೂ ಹಲವಾರು ಶಿಲೆ ವೀರಗಲ್ಲು,ವಾಸ್ತುಶಿಲ್ಪವನ್ನು ಕಾಣಬಹುದು ಸುಂದರವಾದ ವಿಗ್ರಹಗಳು ಬಿತ್ತಿ ಚಿತ್ರಗಳು ಹಾಗೂ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣ ವಾದಂತಹ ಸುಂದರ ಸೊಬಗನ್ನು ಮೂಡಿಸುವ ಎಲ್ಲರ ಕಣ್ಮನ ಸೆಳೆಯುವ ದೇವಾಲಯವಾಗಿದೆ . ಈ ಪ್ರದೇಶವು ಪ್ರಾಚ್ಯಾವಶೇಷಗಳು, ಪುರಾತತ್ವ ಅವಶೇಷಗಳು ಐತಿಹಾಸಿಕ ಸ್ಮಾರಕಗಳು ನಾಡಿನ ಪ್ರತೀಕವಾಗಿದ್ದು. ಅಂದಿನ ಕಾಲದ ರಾಜಕೀಯ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಅಂಶಗಳನ್ನು ಹೊಂದಿದ್ದು. ನಾನೊಮ್ಮೆ ಊರಿಗೆ ಬೇಟಿ ನೀಡಿದಾಗ ಕೆಲವು ದೇವಾಲಯಗಳು ಅಲ್ಲಿನ ವೈಶಿಷ್ಟ್ಯತೆಯನ್ನು ತಿಳಿಯುವ ಕುರಿತು ವಿಶ್ಲೇಷಿಸಿ ಅಧ್ಯಯನವನ್ನು ಮಾಡಿದಾಗ ಹಾಗೂ ಕೆಲವರ ಅಭಿಪ್ರಾಯ ಹಾಗೂ ಶಾಸನಗಳಲ್ಲಿ ಸಂಬಂದಿಸಿದ ವಿಚಾರಗಳು ಸಹ ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳು ನಾಡಿನ ಉಸಿರನ್ನು ಹಿಡಿದು ನಡೆಸುತ್ತಿದ್ದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಂದಿನ ಕಾಲದ ಜೀವನದ ಅವಿಭಾಜ್ಯ ಅಂಗಗಳಾಗಿ ದೇವಾಲಯಗಳು ಕಾಣಿಸು ಕೊಂಡವು ಕೋಟೆ ಕೊತ್ತಲುಗಳು ಸಾಮ್ರಾಜ್ಯದ ರಕ್ಷಣೆಗೆ ಭಾರವನ್ನು ಹೊಟ್ಟಿರುವಂತಹ ಸ್ಮಾರಕಗಳ ಐತಿಹಾಸಿಕ ಮಹತ್ವವನ್ನು ಒದಗಿಸಿಕೊಟ್ಟಿದೆ. ಇಂತಹ ಪ್ರಮುಖ ಅಂಶಗಳನ್ನು ಹೊಂದಿರುವ ಉತ್ತಮವಾದ ದೇವಾಲಯಗಳಲ್ಲಿ ಧಾರ್ಮಿಕ ಮತ್ತು ಜೀವನಕ್ಕೆ ಸಂಬಂಧಿಸಿದ ಕಲೆ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳಿಗೆ ಹಾಗೆಯೇ ಆಸಗೋಡಿನ ಐತಿಹಾಸಿಕ ಹಿನ್ನೆಲೆ . ಅ ಒಂದು ಪ್ರದೇಶದಲ್ಲಿ ಆಳ್ವಿಕೆಯನ್ನುಮಾಡಿದ ಪ್ರಮುಖ ರಾಜಮನೆತನಗಳು ಹಾಗೂ ಪಾಳೇಗಾರರ ಸ್ವತಂತ್ರ ಆಡಳಿತ ವ್ಯವಸ್ಥೆಯನ್ನು ತಿಳಿಯಬಹುದು ಕೆಲವು ಶಾಸನಗಳಲ್ಲಿ ಸಂಬಂಧಿಸಿದಂತೆ ಶಾಸನಗಳು ನಮ್ಮ ನಾಡಿನ ಚರಿತ್ರೆಗೆ ಮತ್ತು ಹಿರಿಮೆಯನ್ನು ತಂದುಕೊಡುವಲ್ಲಿ ಹಾಗೂ ಹಾಗೂ ಇತಿಹಾಸ ರಚನೆಗೆ ಇತಿಹಾಸದ ರಚನೆಗೆ ವಿಶ್ವಾಸನೀಯ ವಾಗಿದ್ದು.

ಪ್ರಾಚೀನ ಕಾಲದಿಂದಲೂ ಸಹ ಐತಿಹಾಸಿಕ ಸ್ಥಳವಾಗಿದ್ದು ಇತಿಹಾಸದ ಪ್ರಮುಖ್ಯತೆಯನ್ನು ಪಡೆದುಕೊಂಡಿದೆ.

ನೇತ್ರಾವತಿ ನೆಲ್ಲಿಕಟ್ಟೆ.

Leave a Reply

Your email address will not be published. Required fields are marked *