ಚಂದನ್ ಶೆಟ್ಟಿಯನ್ನು ಈ ಕಾರಣಕ್ಕಾಗಿ ನಿಮ್ಮನ್ನು ಬಂದಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದೇಕೆ..?

ಬಿಗ್ ಬಾಸ್ ವಿನ್ನರ್ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಶಿಷ್ಟ ಹಾಡುಗಳ ಶೈಲಿಯಿಂದ ಕರ್ನಾಟಕದ ಜನರ ಮನಸ್ಸಿನಲ್ಲಿ ಮನೆ ಮಾತಾಗಿದ್ದಾರೆ.ಇವರ  ವಿಶಿಷ್ಟ ರೀತಿಯ ಹಾಡುಗಳನ್ನು ಮಕ್ಕಳಿಂದ ಹಿಡಿದು ವಯಸ್ಸಾದವರು ಸಹ ಇಷ್ಟ ಪಡುತ್ತಾರೆ.

ಈಗ ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರು ಕೂಡ ಹಾಗಿದ್ದಾರೆ. ಇಷ್ಟೊಂದು ಖ್ಯಾತಿ ಉತ್ತುಂಗದಲ್ಲಿರುವ ಚಂದನ್ ಶೆಟ್ಟಿಗೆ ಸಂಕಷ್ಟ ಎದುರಾಗಿದ್ದು, ಪೋಲೀಸ್ ಇಲಾಖೆಯಿಂದ ನೋಟಿಸ್ ಕೂಡ  ಜಾರಿಯಾಗಿದೆ.

ಕಾರಣ ಅವರು ಕನ್ನಡ ಚಿತ್ರವೊಂದರಲ್ಲಿ ಹಾಡಿರುವ, ಭಂಗಿ ಹೊಡೆದು ನಗುತಾ ಇರು ಎಂಬ ಹಾಡಿನಿಂದಾಗಿ, ನೀವು ಗಾಂಜಾ ಪರವಾಗಿ ಹಾಡಿದ್ದು ನಿಮ್ಮ ವಿರುದ್ಧ ಪ್ರಕರಣ ಏಕೆ ದಾಖಲಿಸಬಾರದು ಎಂದು ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮೂರು ವರ್ಷಗಳ ಹಿಂದೆ ‘ಅಂತ್ಯ’ ಎಂಬ ಚಿತ್ರದಲ್ಲಿ ‘ಗಾಂಜಾ ಕಿಕ್’​ ಎಂಬ ಹಾಡಿಗೆ ಧ್ವನಿ ನೀಡಿದ್ದ ಚಂದನ್​ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದು, ಖುದ್ದು ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಅಸಲಿಗೆ ಆ ಹಾಡಿನಲ್ಲಿ ಏನಿದೆ?

ಚಂದನ್ ಶೆಟ್ಟಿಯವರು ಅಂತ್ಯ’ ಎಂಬ ಕನ್ನಡ ಚಿತ್ರಕ್ಕೆ ಹಾಡೊಂದು ಹಾಡಿದ್ದು, ಆ ಹಾಡಿನ ಸಾಲುಗಳು ಈಗಿವೆ.

​ಭಂಗಿ ಹೊಡೆದು ನಗುತಾ ಇರು…ಶಿವನು ಹಿಡಿದರೆ ಭಂಗಿ, ನಾವು ಹಿಡಿದರೆ ಕಂಬಿ…

ಈ ಹಾಡಿನ ಬಗ್ಗೆ ಮಾತನಾಡಿರುವ ಚಂದನ್ ಶೆಟ್ಟಿ, ನಾನು ಮೂರು ವರ್ಷಗಳ ಹಿಂದೆ ಈ ಹಾಡು ಹಾಡಿದ್ದೆ. ಆದರೆ ಆ ಚಿತ್ರ ಬಿಡುಗಡೆ ಆಗಲಿಲ್ಲ. ಯುವಕರು ಪರೀಕ್ಷೆಗಳಲ್ಲಿ ಫೇಲ್ ಆಗಿ, ಮುಂದೆ ಡ್ರಗ್ಸ್ ಅಡಿಕ್ಟ್ ಆಗೋದರ ಕುರಿತಾದ ಒಳ್ಳೆಯ ಸಂದೇಶ ನೀಡುವ ಕಥೆಯನ್ನು ಅಂತ್ಯ ಸಿನಿಮಾ ಹೊಂದಿತ್ತು.

ಆದರೆ ಈ ಹಾಡು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಇದರ ಸಾಹಿತ್ಯವನ್ನು ನಿರ್ದೇಶಕರು ಬರೆದಿದ್ದಾರೆ. ಈ ಹಾಡು ಲೀಕ್ ಆದಮೇಲೆ ನಿರ್ದೇಶಕ ಮುತ್ತು ಅವರು ತಮ್ಮ ಅಧಿಕೃತ ಹಾಡು ಎಂದು ಹೇಳಲು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಹಾಡಿನಿಂದ ಯುವಕರಿಗೆ ಪ್ರಚೋದನೆಯಾಗುತ್ತಿದೆ ಎಂದು ಪೋಲೀಸ್ ಇಲಾಖೆಯಿಂದ ನನಗೆ ನೋಟಿಸ್ ಬಂದಿದೆ. 2015ರಲ್ಲಿ ಬಿಡುಗಡೆಯಾಗಿದ್ದ ಅಂತ್ಯ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಪ್ರೋತ್ಸಾಹ ನೀಡುವಂತಹಾ ಸಾಹಿತ್ಯ ಇದೆ. ಹಾಗಾಗಿ ನಾವೇಕೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರು ಹೇಳಿದ್ದಾರೆ. ಆದರೆ ನಾನೊಬ್ಬ ಹಾಡುಗಾರನಾಗಿದ್ದು ನಿರ್ದೇಶಕರು ಬರೆದಿರುವುದನ್ನು, ಜನರಿಗೆ ಮನರಂಜನೆ ನಿದುವುದಕ್ಕಾಗಿ ಹಾಡಿದ್ದೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *