ಗ್ರಾಹಕರಿಗೆ ಸಂತಸದ ಸುದ್ದಿ: ಮೊಬೈಲ್ ಕಳೆದರೆ ಮತ್ತೆ ನಿಮಗೆ ಸಿಕ್ಕೇ ಸಿಗುತ್ತೆ
ನಿಮ್ಮ ದುಬಾರಿ ಮೊಬೈಲ್ಗಳು ಕಳೆದರೆ ಇನ್ನೂ ಚಿಂತಿಸುವ ಅಗತ್ಯವಿಲ್ಲ
ಮೊಬೈಲ್ ಫೋನ್ ಕಳೆದು ಹೋದರೆ ಇನ್ಮುಂದೆ ನೀವು ಆಕಾಶ ತಲೆ ಮೇಲೆ ಬಿದ್ದೋರ ಹಾಗೆ ಕೊರುವ ಅವಶ್ಯಕತೆ ಇಲ್ಲ, ಕಳೆದ ಪೋನ್ ಮತ್ತೆ ಕೈ ಸೇರುವಂತೆ ಒಂದು ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ,
ಭಾರತೀಯ ದೂರ ಸಂಪರ್ಕ ಇಲಾಖೆ ಕಳೆದು ಹೋಗಿರುವ ಮೊಬೈಲ್ ಫೋನ್ ಮರಳಿ ಪಡೆಯುವ ನಿಟ್ಟಿನಲ್ಲಿ ಪರಿಹಾರ ನೀಡಿದೆ, ದೂರ ಸಂಪರ್ಕ ಇಲಾಖೆಯಿಂದ ಮೊಬೈಲ್ ಜಾಡು ಕಂಡು ಹಿಡಿಯುವ ವ್ಯವಸ್ಥೆಯು ಮುಂದಿನ (ಆಗಸ್ಟ್) ತಿಂಗಳಿನಿಂದ ಜಾರಿಗೆ ಬರಲಿದೆ.
ಮೊಬೈಲ್ ಕದ್ದವರು ನಿಮ್ಮ ಸಿಮ್ ಕಾರ್ಡ್ ಹೊರ ತಗೆದು, ಇಲ್ಲ ವಿಶಿಷ್ಟ ಸಂಖ್ಯೆ ಐ ಎಂ ಇ ಐ ಸಂಖ್ಯೆ ಬದಲಿಸಿದರೊ ಕೂಡ ಮೊಬೈಲ್ ಫೋನ್ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ರೂಪಿಸಲಾಗಿದ್ದು ಮುಂದಿನ ತಿಂಗಳು ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದ್ದು
ಈ ಮೇಲಿನ ತಂತ್ರಜ್ಞಾನವನ್ನು ರೂಪಿಸುವಂತೆ 2017ರಲ್ಲಿ ದೂರ ಸಂಪರ್ಕ ಇಲಾಖೆಗೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು, ಈ ಯೋಜನೆಗಾಗಿ 15 ಕೋಟಿ ರೊ. ಬಿಡುಗಡೆ ಕೂಡ ಮಾಡಲಾಗಿತ್ತು, ಇದೀಗ ಈ ನೂತನ ವ್ಯವಸ್ಥೆಯನ್ನು ಇಲಾಖೆ ಸಿದ್ದಪಡಿಸಿದ್ದು
ಇದು ಮೊಬೈಲ್ ಗ್ರಾಹಕರಲ್ಲಿ ಸಂತಸ ಮೂಡಿಸಿದೆ.