ಗುಮ್ ನಾಮಿ ಬಾಬಾನೇ ನೇತಾಜಿ ಸುಭಾಷ್ ಚಂದ್ರ ಬೋಸ್
ಸ್ವಾತಂತ್ರ್ಯ ನಂತರವೂ ಹಲವು ದಶಕಗಳ ಕಾಲ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದಲ್ಲಿ ನೆಲೆಸಿದ್ದರು ಎನ್ನುವುದು ಇತ್ತೀಚೆಗೆ ಅಮೆರಿಕ ಹಸ್ತಾಕ್ಷರ ತಜ್ಞರು ನೀಡಿರುವ ವರದಿಯಿಂದ ಸಾಬೀತಾಗಿದೆ. ಬೋಸ್ ಸ್ವಾತಂತ್ರ್ಯ ನಂತರ ಉತ್ತರಪ್ರದೇಶದ ಫೈಜಾಬಾದ್ ನಲ್ಲಿ ಗುಮ್ ನಾಮಿ ಬಾಬಾ ಎಂಬ ಪರಿಚಯದೊಂದಿಗೆ ಜೀವಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಚಂದ್ರಚೂಡ್ ಘೋಷ್ ಮತ್ತು ಅನುಜ್ ದಾರ್ ಎನ್ನುವವರು ‘ಕೊನುಂಡ್ರಮ್ ಸುಭಾಷ್ ಬೋಸ್ ಲೈಫ್ ಆಫ್ಟರ್ ಡೆತ್’ ಎನ್ನುವ ಪುಸ್ತಕ ಬರೆದಿದ್ದು, ಇದರಲ್ಲಿ ಗುಮ್ ನಾಮಿ ಬಾಬಾ ಮತ್ತು ಪಬಿತ್ರಾ ಮೋಹನ್ ರಾಯ್ ನಡುವೆ 1962-1985 ರವರೆಗೆ ನಡೆದಿರುವ ಪತ್ರ ಸಂಭಾಷಣೆಗಳನ್ನು ಉಲ್ಲೇಖಿಸಲಾಗಿದೆ .
ಅಮೆರಿಕದ ಬ್ಯೂರೋ ಆಫ್ ಡಾಕ್ಯುಮೆಂಟ್ ಎಕ್ಸಾಮಿನರ್ ಗಳೆಂದು ಸರ್ಟಿಫಿಕೇಟ್ ಪಡೆದುಕೊಂಡಿರುವ ಕಾರ್ಲ್ ಬೆಕೆಟ್ ನೇತಾಜಿ ಮತ್ತು ಗುಮ್ ನಾಮಿ ಬಾಬಾ ಹಸ್ತಾಕ್ಷರಗಳನ್ನು ಹೋಲಿಕೆ ಮಾಡಿದ್ದಾರೆ. ಎರಡು ಒಬ್ಬರದ್ದೇ ಹಸ್ತಾಕ್ಷರ ಎಂದು ಖಚಿತಪಡಿಸಿದ್ದಾರೆ .ಬಗೆಟ್ ಗೆ ಪತ್ರಗಳನ್ನು ನೀಡಿದ್ದರೂ ಆರಂಭದಲ್ಲಿ ಯಾರ ಪತ್ರಗಳೆಂದು ಹೇಳಿರಲಿಲ್ಲ. ಪರಿಶೀಲನೆ ನಡೆಸಿದ ಬಗೆಟ್ ಪತ್ರಗಳಲ್ಲಿರುವುದು ಒಬ್ಬರದ್ದೇ ಅಕ್ಷರಗಳು ಎಂದು ಖಚಿತಪಡಿಸಿದ್ದಾರೆ ಎನ್ನಲಾಗಿದೆ .