ಗಣರಾಜ್ಯೋತ್ಸವ ನಮ್ಮ ಹೆಮ್ಮೆ

ಇಂದು ಗಣರಾಜ್ಯೋತ್ಸವ 1950 ಜನವರಿ 26 ರಂದು ಭಾರತವು ಗಣರಾಜ್ಯವಾಯಿತು. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚನೆಯಾದ ಸರ್ಕಾರವೇ ಪ್ರಜಾಪ್ರಭುತ್ವ ಸರ್ಕಾರ. 1947 ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ದೊರಕಿತು. ಭಾರತ ಬಂಧಮುಕ್ತ ದೇಶವಾಗಲು ಅದೆಷ್ಟೋ ಮಹಾತ್ಮರು ಕಷ್ಟ ಕೋಟಲೆಗಳನ್ನು ದಾಟಿ, ಹಿಂಸೆ ನೋವುಗಳನ್ನು ಸಹಿಸಿ ಪ್ರಾಣತ್ಯಾಗ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ನಂತರ ಭಾರತವನ್ನು 29 ರಾಜ್ಯಗಳಾಗಿ ವಿಂಗಡಣೆ ಮಾಡಲಾಯಿತು. ಅದೆ ದಿನ ಸಂವಿಧಾನವನ್ನು ರಚಿಸಲಾಯಿತು.

ಭಾರತವನ್ನು ಗಣಗಳಾಗಿ ವಿಂಗಡನೆ ಮಾಡಿದ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವ ವೆಂದು ಆಚರಿಸಲಾಗುತ್ತಿದೆ .ಸಂವಿಧಾನವೆಂದರೆ ದೇಶದ ಎಲ್ಲಾ ನಾಗರಿಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿಸಲಾಗಿರುವ ಕಾಯಿದೆ. ಪ್ರಜೆಗಳಿಂದ ರಚಿತವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಇಲ್ಲಿ ಕಾನೂನು ಎಲ್ಲರಿಗೂ ಸಮಾನ ಹಾಗೂ ಪಾರದರ್ಶಕವಾಗಿರುತ್ತದೆ. ಡಾ ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನವನ್ನು ರಚಿಸಿ ಅಂಗೀಕರಿಸಲಾಯಿತು. ಇದು ವಿಶ್ವದ ಅತಿ ಉದ್ದವಾದ ಸಂವಿಧಾನವಾಗಿದ್ದು, ಇದರಲ್ಲಿ 22 ಭಾಗಗಳಲ್ಲಿ 12 ವಿವರಪಟ್ಟಿ ಮತ್ತು 97 ತಿದ್ದುಪಡಿಗಾಗಿ ವಿಂಗಡಿಸಲಾಗಿರುವ 448 ಲೇಖನಗಳನ್ನು ಒಳಗೊಂಡಿದೆ. ಸಂಸತ್ತಿನ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈಬರಹದಲ್ಲಿರುವ ಕ್ಯಾಲಿಗ್ರಫೆಡ್ ಪ್ರತಿಗಳನ್ನು ಸಂರಕ್ಷಿಸಲಾಗಿದೆ .ಅವುಗಳನ್ನು ಹೀಲಿಯಮ್ ತುಂಬಿರುವ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.

ಸಂವಿಧಾನವು ಯಾವುದೇ ಒಬ್ಬ ವ್ಯಕ್ತಿಯ ಆಳ್ವಿಕೆಗೆ ಒಳಪಡದೆ ಜನರಿಗೆ ನಾಯಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುವ ಹಕ್ಕನ್ನು ನೀಡಿದೆ. ಗಣರಾಜ್ಯೋತ್ಸವದ ಈ ದಿನದಂದು ದೆಹಲಿಯ ರಾಜ್ಪಥ್ ನಲ್ಲಿ ಜಗತ್ಪ್ರಸಿದ್ಧ ರಾಷ್ಟ್ರೀಯ ಪರೆಡ್ ನಡೆಯುತ್ತದೆ .ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ನಮ್ಮ ದೇಶದ ಸಾಮರ್ಥ್ಯವನ್ನು ಬಿಂಬಿಸುತ್ತವೆ. ಈ ಸುಂದರ ಸಮಾರಂಭದಲ್ಲಿ ಸಶಸ್ತ್ರ ಪಡೆಗಳಾದ ಆರ್ಮಿ, ಏರ್ ಫೋರ್ಸ್ ಮತ್ತು ನೌಕಾಪಡೆ ಪರೇಡ್ ನೋಡಲು ಅತ್ಯಂತ ಆಕರ್ಷಕವಾಗಿರುತ್ತವೆ.
ಈ ಸಂದರ್ಭದಲ್ಲಿ

  • ಮೊದಲನೇ ಅತ್ಯುನ್ನತ ಕ್ರಮದಲ್ಲಿ ನಾಗರಿಕರಿಗೆ ಭಾರತರತ್ನವನ್ನು ಅಸಾಧಾರಣ ಸೇವೆ ಅಥವಾ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ.
  • ಎರಡನೇ ಅತ್ಯುನ್ನತ ಕ್ರಮದಲ್ಲಿ ಪದ್ಮವಿಭೂಷಣವನ್ನು ಅಸಾಧಾರಣ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ .
  • ಮೂರನೇ ಉನ್ನತ ಕ್ರಮಾಂಕದ ಪದ್ಮ ಭೂಷಣವನ್ನು ವಿಶೇಷ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
  • ನಾಲ್ಕನೇ ಕ್ರಮಾಂಕದ ಪದ್ಮ ಪದ್ಮಶ್ರೀ ಪ್ರಶಸ್ತಿ ಪ್ರಜೆಗಳಿಗೆ ವಿಶೇಷ ಸೇವೆಗಾಗಿ ನೀಡಲಾಗುತ್ತದೆ.
    ಅಶೋಕ ಚಕ್ರ ಮತ್ತು ಕೀರ್ತಿ ಚಕ್ರ ಪ್ರಶಸ್ತಿಯನ್ನು ಯುದ್ಧ ಅಥವಾ ವಿಪತ್ತಿನಲ್ಲಿ ರಾಷ್ಟ್ರಕ್ಕೆ ಸೇವೆ ಹಾಗೂ ಗೌರವ ಸಲ್ಲಿಸಿರುವ ಹುತಾತ್ಮರ ಕುಟುಂಬಗಳಿಗೆ ನೀಡಲಾಗುತ್ತದೆ .
    ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ.
    ದೇಶದ ಹೆಮ್ಮೆಯನ್ನು ಆಚರಿಸುವ ಈ ದಿನವನ್ನು ಅರ್ಥಪೂರ್ಣವಾಗಿ ಮಕ್ಕಳಿಗೆ ತಿಳಿಸಿಕೊಡುವುದರ ಮೂಲಕ ಮುಂದಿನ ಈ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ಬೆಳೆಸೋಣ .

ಸರ್ವರಿಗೂ 70 ನೆ ಗಣರಾಜ್ಯೋತ್ಸವದ ಶುಭಾಶಯಗಳು.

ಶ್ರೀಮತಿ ಸುನಿತಾಪ್ರಕಾಶ್

Leave a Reply

Your email address will not be published. Required fields are marked *